ಅದ್ದೂರಿ-ರೋಮಾಂಚನಕಾರಿ ಅಂತಿಮ ಹಣಾಹಣಿಗೆ ಸಜ್ಜು
ಜುಬೈಲ್,ಸೌದಿ ಅರೇಬಿಯಾ(ವಿಶ್ವ ಕನ್ನಡಿಗ ನ್ಯೂಸ್): ನಗರದ ಪ್ರಸಿದ್ದ ಕ್ರಿಕೆಟ್ ಕ್ರೀಡಾಂಗಣ,ಅಲ್ ಫಲಾಹ್ ನಲ್ಲಿ ಆರಂಭವಾಗಿರುವ ಅಲ್ ಫಲಾಹ್ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯಕ್ಕೆ ಕ್ರೀಡಾಂಗಣ ಸಜ್ಜಾಗಿದ್ದು,ಏಪ್ರಿಲ್ 8 ರಂದು ಸಂಜೆ 6:30 ಕ್ಕೆ ಆರಂಭವಾಗುವ ಹಣಾಹಣಿಯ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಮನೋರಂಜನೆಯ ಫೈನಲ್ ಪಂದ್ಯವಾಗಲಿದೆ.ಮಾರ್ಚ್ 3 ರಂದು 20 ತಂಡಗಳೊಂದಿಗೆ ಆರಂಭವಾದ ಪ್ರೀಮಿಯರ್ ಲೀಗ್ ಇದೀಗ ರೋಚಕ ಅಂತಿಮ ಹಂತದಲ್ಲಿದೆ.
ಪಂದ್ಯದ ಆರಂಭಕ್ಕೂ ಮೊದಲು ಭಾರತದ ಹಾಗು ಸೌದಿ ಅರೇಬಿಯಾದ ರಾಷ್ಟ್ರಗೀತೆಗಳೊಂದಿಗೆ ಆರಂಭನೀಡಲಿದ್ದು,ದೇಶಪ್ರೇಮದ ಧ್ವನಿಯೊಂದಿಗೆ ಕ್ರಿಕೆಟ್ ಗೆ ರೋಮಾಂಚನ ಸ್ಪರ್ಷ ನೀಡಲಿದೆ.
ಸೌದಿ ಅರೇಬಿಯಾದ ಕ್ರಿಕೆಟ್ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಇಂತಹ ಅದ್ದೂರಿ ಫೈನಲ್ ಹಣಾಹಣೆಗೆ ಅಲ್ ಫಲಾಹ್ ಕ್ರೀಡಾಂಗಣ ಸಿದ್ದವಾಗಿದೆ,ಕ್ರಿಕೆಟ್ ನ ಮನೋರಂಜನೆಯೊಂದಿಗೆ ಆಕರ್ಷಕ ಬಹುಮಾನಗಳೂ ವೀಕ್ಷಕರಿಗೆ ರಾಫೆಲ್ ಡ್ರಾದ ಮೂಲಕ ಲಭಿಸಲಿದ್ದು ಟಿ.ವಿ,ಮೊಬೈಲ್ ಸೇರಿದಂತೆ ಹಲವು ಬಹುಮಾನಗಳು ಉಚಿತವಾಗಿ ನೀಡಲಿದೆ.ಅಂತೆಯೇ ವಿಜಯಿ ಹಾಗು ರನ್ನರ್ಸ್ ತಂಡಗಳಿಗೂ ಅತ್ಯಾಕರ್ಷಕ ಬಹುಮಾನಗಳು ದೊರೆಯಲಿದ್ದು,ವರ್ಣರಂಜಿತ ಅದ್ಭುತ ಸಮಾರೋಪಕ್ಕೆ ವೀಕ್ಷಕರ ಸಹಕಾರವನ್ನು ಪ್ರಾಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.