×
Ad

ಉಮ್ರಾ ಋತುವಿನಲ್ಲಿ ಮದೀನಾಗೆ ಭೇಟಿ ನೀಡಿದವರು 37.78 ಲಕ್ಷ

Update: 2016-04-09 18:19 IST

ಮದೀನಾ, ಎ. 9: ಉಮ್ರಾ ಋತುವಿನ ಆರಂಭದಿಂದ ಮದೀನಾಗೆ 37.78 ಲಕ್ಷ ಸಂದರ್ಶಕರು ಭೇಟಿ ನೀಡಿದ್ದಾರೆ ಎಂದು ಹಜ್ ಸಚಿವಾಲಯದ ಮದೀನಾ ಶಾಖೆಯಲ್ಲಿ ದಾಖಲಾಗಿದೆ. ಅದೇ ವೇಳೆ, ವಿವಿಧ ದೇಶಗಳಲ್ಲಿರುವ ಸೌದಿ ಅರೇಬಿಯದ ರಾಯಭಾರ ಕಚೇರಿಗಳು ನೀಡಿರುವ ಒಟ್ಟು ವೀಸಾಗಳು 43.63 ಲಕ್ಷ.
ಮದೀನಾದಲ್ಲಿರುವ ಹಜ್ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ, 33,57,647 ಯಾತ್ರಿಕರು ವಾಯು ಮಾರ್ಗ, 3,99,506 ಯಾತ್ರಿಕರು ಭೂಮಾರ್ಗ ಮತ್ತು 21,719 ಮಂದಿ ಸಮುದ್ರ ಮಾರ್ಗದ ಮೂಲಕ ಆಗಮಿಸಿದ್ದಾರೆ.

ಉಮ್ರಾ ಯಾತ್ರೆಗಾಗಿ ಈಜಿಪ್ಟ್ ಅತ್ಯಧಿಕ, ಅಂದರೆ 23.68 ಶೇಕಡ ವೀಸಾಗಳನ್ನು ಪಡೆದರೆ, 16,86 ಶೇ. ವೀಸಾಗಳನ್ನು ಪಡೆದ ಪಾಕಿಸ್ತಾನ ಎರಡನೆ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಇಂಡೋನೇಶ್ಯ (12.48%), ಟರ್ಕಿ (8.33%) ಮತ್ತು ಭಾರತ (7.49%) ದೇಶಗಳಿವೆ. ಉಳಿದ ವೀಸಾಗಳನ್ನು ಇತರ 25 ದೇಶಗಳಿಗೆ ವಿತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News