×
Ad

ಒಮನ್ ಮಧ್ಯಸ್ಥಿಕೆಯಲ್ಲಿ ಯಮನ್‌ನಿಂದ ಅಮೆರಿಕದ ಪ್ರಜೆಯ ಬಿಡುಗಡೆ

Update: 2016-04-10 15:01 IST

ಮಸ್ಕತ್, ಎಪ್ರಿಲ್.10: ಯಮನ್‌ನಲ್ಲಿ ಸಿಕ್ಕಿಬಿದ್ದಿದ್ದ ಅಮೆರಿಕನ್ ಪ್ರಜೆಯನ್ನು ಒಮನ್ ಸರಕಾರ ಮಧ್ಯಸ್ಥಿಕೆ ವಹಿಸಿ ಅ ಬಿಡುಗಡೆಗೊಳಿಸಿರುವುದಾಗಿ ವರದಿಯಾಗಿದೆ. ಅಮೆರಿಕ ಸರಕಾರದ ವಿನಂತಿ ಪ್ರಕಾರ ಒಮನ್ ಸುಲ್ತಾನ್ ಕಾಬೂಸ್ ಬಿನ್ ಸಈದ್ ಈ ಬಿಡುಗಡೆಗಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಸರಕಾರಿ ಇಲಾಖೆಗೆ ನಿರ್ದೇಶನ ನೀಡಿದ್ದರೆಂದು ವರದಿಗಳುತಿಳಿಸಿವೆ. ಸಿರಿಯದ ಸನಾದಲ್ಲಿ ಬಂಧಿಯಾಗಿದ್ದ ಅಮೆರಿಕ ಪ್ರಜೆಯನ್ನು ಒಮನ್ ಮಧ್ಯಸ್ಥಿಕೆ ವಹಿಸಿ ಬಿಡುಗಡೆಗೊಳಿಸಿದ ಬಳಿಕ ವಿಶೇಷ ವಿಮಾನದಲ್ಲಿ ಆತನನ್ನು ಒಮನ್‌ಗೆ ಕರೆತರಲಾಗಿದೆ. ಕಳೆದ ಸೆಪ್ಟಂಬರ್‌ನಲ್ಲಿ ಒಮನ್ ಮಧ್ಯಸ್ಥಿತಿಕೆ ವಹಿಸಿ ಯಮನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಮೆರಿಕನ್ ಪ್ರಜೆ ಸಹಿತ ಕೆಲವರನ್ನು ಬಿಡುಗಡೆಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿತ್ತು.

ಈಗ ಒಮನ್‌ಗೆ ಕರೆತರಲಾದ ಪ್ರಜೆಯನ್ನು ಅಮೆರಿಕಕ್ಕೆ ರವಾನಿಸುವ ಕ್ರಮಗಳು ನಡೆಯುತ್ತಿದೆ ಎಂದು ಒಮನ್ ಅಧಿಆರಿಗಳು ತಿಳಿಸಿದ್ದಾರೆ. ಕಳೆದ ಸಲ ಒಬ್ಬ ಬ್ರಿಟಿಷ್, ಇಬ್ಬರು ಅಮೆರಿಕನ್ನರು, ಮತ್ತು ಮೂವರು ಸೌದಿ ಪ್ರಜೆಗಳನ್ನು ಒಮನ್ ಯಮನ್‌ನಿಂದ ಬಿಡಿಸಿ ಕರೆತಂದಿತ್ತು. ಯಮನ್‌ನೊಂದಿಗೆ ಒಮನ್ ಉತ್ತಮ ಸಂಬಂಧವನ್ನು ಹೊಂದಿದೆ. ಯಮನ್‌ನ ಸಮಸ್ಯೆಚರ್ಚೆಯಿಂದ ಬಗೆಹರಿಸಬಹುದೇ ವಿನಾ ಯುದ್ಧದಿಂದಲ್ಲ ಎಂಬುದು ಒಮನ್‌ನ ನಿಲುವಾಗಿದೆ. ಯಮನನ್‌ನಲ್ಲಿ ಮೈತ್ರಿಸೇನೆಯ ಆಕ್ರಮಣದಿಂದ ಗಾಯಾಳುಗಳಾದವರನ್ನು ಒಮನ್‌ಗೆ ಕರೆತಂದು ವಿವಿಧ ಆಸ್ಪತ್ರೆಗಳಲ್ಲಿ ಹಲವು ಸಲ ಚಿಕಿತ್ಸೆ ನೀಡಲಾಗಿತ್ತು.ಕಳೆದ ಸೆಪ್ಟಂಬರ್‌ನಲ್ಲಿ 21 ಮಂದಿ ಗಾಯಾಳುಗಳನ್ನು ಒಮನ್‌ಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಒಮನ್ ಇರಾನ್ ಯಮನ್‌ನೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News