ಬುರ್ಜ್ ಖಲೀಫಾವನ್ನೂ ಮೀರಿಸಲಿರುವ ಗಗನಚುಂಬಿ ಕಟ್ಟಡವನ್ನು ನಿರ್ಮಿಸಲಿರುವ ದುಬೈ

Update: 2016-04-11 12:34 GMT

ದುಬೈ : ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾವನ್ನೂ ಮೀರಿಸುವ ಕಟ್ಟಡವೊಂದನ್ನು ತಾನು ನಿರ್ಮಿಸುವುದಾಗಿ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ಎಮಾರ್ ಹೇಳಿಕೊಂಡಿದೆ.

ಈಹೊಸ ಕಟ್ಟಡವನ್ನು ಒಂದು ಬಿಲ್ಲಿಯನ್ ಡಾಲರ್ (880 ಮಿಲಿಯನ್ ಯೂರೋಸ್) ವೆಚ್ಚದಲ್ಲಿ ನಿರ್ಮಿಸಲಾಗುವುದು ಹಾಗೂಅದರ ಎತ್ತರದ ಬಗ್ಗೆ ಮಾಹಿತಿಯನ್ನು ಸದ್ಯದಲ್ಲಿಯೇ ನೀಡಲಾಗುವುದು ಎಂದು ಎಮಾರ್ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಲಬ್ಬರ್ ಮಾಹಿತಿ ನೀಡಿದರು.

ಕಟ್ಟಡವನ್ನು ನಗರಕ್ಕೆ ‘ಕೊಡುಗೆ’ಯಾಗಿ 2020ರೊಳಗಾಗಿ ನೀಡಲಾಗುವುದು. ಅದೇ ವರ್ಷ ದುಬೈ ವಿಶ್ವ ಎಕ್ಸ್ಪೋ ಟ್ರೇಡಿಂಗ್ ಫೇರ್ ಕೂಡ ಆಯೋಜಿಸಲಿದೆಯೆಂದು ಅವರು ತಿಳಿಸಿದರು.

ಸ್ಪೇನ್ ಹಾಗೂ ಸ್ವಿಸ್ಆರ್ಕಿಟೆಕ್ಟ್ ಸ್ಯಾಂಟಿಯಾಗೋ ಕಲಟ್ರವ ವಾಲ್ಸ್ ಅವರಿಂದ ವಿನ್ಯಾಸಗೊಳಿಸಲ್ಪಡುವ ಈ ಟವರ್ವೀಕ್ಷಣಾ ಗೋಪುರಗಳನ್ನು ಹೊಂದಲಿದ್ದುಹಲವಾರು ರೆಸ್ಟಾರೆಂಟುಗಳು ಹಾಗೂ ಬುಟೀಖ್ ಹೊಟೇಲುಗಳನ್ನೂ ತನ್ನ 18ರಿಂದ 20 ಮಹಡಿಗಳಲ್ಲಿ ಹೊಂದಲಿದೆ.

‘‘ಈ ಟವರ್ ಒಂದು ವಿಶಿಷ್ಠ ಸ್ಮಾರಕವಾಗಲಿದ್ದುನೋಡುಗರ ಮನಸ್ಸಿನಲ್ಲಿ ಗೋಪುರದ ಚಿತ್ರಣವನ್ನು ತರಲಿದೆ,’’ ಎಂದು ಅವರು ವಿವರಿಸಿದರು.

ಪ್ರಸಕ್ತ ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾ 828 ಮೀಟರ್ (2700 ಅಡ) ಎತ್ತರವಿದ್ದು ಅದನ್ನು 1.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಜನವರಿ 2010ರಲ್ಲಿ ಉದ್ಘಾಟಿಸಲಾಗಿತ್ತು.

ದುಬೈ ನಗರದಲ್ಲಿ ಹಲವಾರು ಗಗನಚುಂಬಿಗಳ ನಿರ್ಮಾಣವಾಗಿದ್ದು ಸೌದಿ ಅರೇಬಿಯಾದ ಕಿಂಗ್ಡಮ್ ಹೋಲ್ಡಿಂಗ್ ಕೂಡ ಜೆಡ್ಡಾದಲ್ಲಿ ಕಟ್ಟಡವೊಂದನ್ನು ನಿರ್ಮಿಸುತ್ತಿದ್ದು ಇದು ಕೂಡ ಬುರ್ಜ್ ಖಲೀಫಾ ಕಟ್ಟಡವನ್ನು ಮೀರಿಸಲಿದೆಯೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News