×
Ad

ಒಮನ್‌ನಲ್ಲಿ ತಂಬಾಕು ಜಾಹೀರಾತುಗಳಿಗೆ ನಿಷೇಧ

Update: 2016-04-12 16:01 IST

ಮಸ್ಕತ್, ಎಪ್ರಿಲ್.12: ದೇಶದಲ್ಲಿ ತಂಬಾಕಿನ ಜಾಹೀರಾತು ನಿಷೇಧಿಸಲು ವಾರ್ತಾವಿನಿಮಯ ಸಚಿವಾಲಯ ಆದೇಶ ನೀಡಿದೆ. ಒಮನ್‌ನ ರೇಡಿಯೊ ಸ್ಟೇಶನ್‌ಗಳು ಟೆಲಿವಿಷನ್ ಚಾನೆಲ್‌ಗಳು, ನ್ಯೂಸ್ ಪೇಪರ್‌ಗಳು .ಆನ್‌ಲೈನ್ ಪ್ರಕಟನೆಯ ಸಂಸ್ಥೆಗಳು ಯಾವುದಾದರೂ ರೀತಿಯ ಜಾಹೀರಾತು ಉತ್ಪನ್ನಗಳ ಜಾಹೀರಾತು ಪ್ರಕಟಿಸುವುದನ್ನು ನಿಷೇಧಿಸಿರುವುದಾಗಿ ವಾರ್ತಾವಿನಿಮಯ ಸಚಿವಾಲಯ ತಿಳಿಸಿದೆ. ರಾಯಲ್ ಡಿಕ್ರಿ49/84 ಮತ್ತು 20/2005 ಪ್ರಕಾರ ಪ್ರೆಸ್ ಆಂಡ್ ಪಬ್ಲಿಕೇಶನ್ ಕಾನೂನು ಪ್ರಕಾರ ಇನ್ಫಾರ್ಮೇಶನ್ ಸಚಿವಾಲಯ ಕಳೆದ ಐದನೆ ತಾರೀಕಿಗೆ ಇದಕ್ಕೆ ಸಂಬಂಧಿಸಿ ಸರ್ಕ್ಯುಲರ್‌ಗಳನ್ನು ಹೊರಡಿಸಿರುವುದಾಗಿ ವರದಿಗಳು ತಿಳಿಸಿವೆ.

ತಂಬಾಕು ನಿಯಂತ್ರಣ ಗುರಿಯಾಗಿರುವ ಜಾಗತಿಕ ಆರೋಗ್ಯ ಸಂಘಟನೆಯ ಕಾರ್ಯಯೋಜನೆಯಲ್ಲಿ ಭಾಗವಹಿಸುವುದರ ಅಂಗವಾಗಿ ಜಾಹೀರಾತುಗಳ ನಿಷೇಧಕ್ಕೆ ಆದೇಶ ನೀಡಲಾಗಿದೆ. ಧೂಮಪಾನ ಮಾಡುವವರಲ್ಲಿ ಉಂಟಾಗುವ ಶಾರೀರಿಕ ಮತ್ತು ಮಾನಸಿಕ ಸಂಕಷ್ಟಗಳು ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ವಾರ್ತಾವಿನಿಮಯಸಚಿವಾಲಯದ ವಕ್ತಾರ ತಿಳಿಸಿದರು.

ಬೀಡಿ ಸಿಗರೆಟ್ ಸೇದುವವರಲ್ಲಿ ಶ್ವಾಸಕೋಸದ ಕ್ಯಾನ್ಸರ್ ಹರಡುತ್ತಿದೆಯೆಂದು ರಾಯಲ್ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ. ಬಾಸಿಂ ಅಲ್ ಬಹ್ರಾನಿ ತಿಳಿಸಿದ್ದಾರೆ. ದೇಶದಲ್ಲಿ ಶ್ವಾಸಕೋಶ ಕ್ಯಾನ್ಸರ್‌ಗೆ ಗುರಿಯಾದವರಲ್ಲಿ ಶೇ.97ರಷ್ಟು ಮಂದಿ ಬೀಡಿ ಸಿಗರೇಟು ಇತ್ಯಾದಿ ೂಮಪಾನ ಮಾಡುವವರಾಗಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಾಮಾನ್ಯ ರೋಗವಾಗಿ ಪರಿಗಣನೆಗೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಧೂಮಪಾನ ಚಟವನ್ನು ಕಡಿಮೆಗೊಳಿಸುವ ಅಂಗವಾಗಿ ಬಳಕೆದಾರರ ಸಂರಕ್ಷಣೆ ಅಥಾರಿಟಿ ಇಲೆಕ್ಟ್ರಾನಿಕ್ ಶೀಸೆಗಳುಮತ್ತು ಇಲೆಕ್ಟ್ರಾನಿಕ್ ಸಿಗರೆಟ್‌ಗಳನ್ನು ನಿಷೇಧಿಸಿತ್ತು. ಕ್ಯಾನ್ಸರ್‌ರೋಗಿಗಳ ಚಿಕಿತ್ಸೆಗಾಗಿ ಒಮನ್ ಸರಕಾರಕ್ಕೆ ಪ್ರತಿವರ್ಷ 30,000 ರಿಯಲ್ ಖರ್ಚುತಗಲುವುದೆಂದು ಲೆಕ್ಕಗಳು ಸೂಚಿಸಿವೆ. ಒಮನ್‌ನ ಜನಸಂಖ್ಯೆಯ ಪ್ರತಿ ಹತ್ತುಲಕ್ಷ ಮಂದಿಯಲ್ಲಿ ಸುಮಾರು 600ರಷ್ಟು ಕ್ಯಾನ್ಸರ್‌ರೋಗಿಗಳು ಇದ್ದಾರೆಂದು ಲೆಕ್ಕಗಳು ತಿಳಿಸುತ್ತಿವೆ. ತಪ್ಪಾದ ಆಹಾರದ ರೀತಿ, ವ್ಯಾಯಾಮದ ಕೊರತೆ, ದಪ್ಪಶರೀರ,ಧೂಮಪಾನ, ಮದ್ಯ ಬಳಕೆ ನಿಮಿತ್ತ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಳವಾಗಲಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News