×
Ad

ದಮ್ಮಾಮ್: ಕೆಸಿಎಫ್ ಶೈಕ್ಷಣಿಕ ಕ್ವಿಝ್ ಕಾರ್ಯಕ್ರಮ

Update: 2016-04-12 19:31 IST

ದಮ್ಮಾಮ್: ಕರ್ನಾಟಕ ಕಲ್ಚರಲ್ ಫೌ೦ಡೇಶನ್ (ಕೆಸಿಎಫ್) ದಮ್ಮಾಮ್ ಝೋನಲ್ ವತಿಯಿ೦ದ ತಖದ್ದುಮ್ - 2016 ನ ಭಾಗವಾಗಿ ಬ್ರಹತ್ ಎಜ್ಯು ಕ್ವಿಝ್ ಕಾರ್ಯಕ್ರಮ ಆಯೋಜಿಸಲಾಗಿದೆ. ದಮ್ಮಾಮ್ -  ಜುಬೈಲ್ ಹೈವೆ ಯ ಅಲ್ ಶಾದಿ ಆಡಿಟೋರಿಯ೦ ಉಮ್ಮು ಅಲ್ ಶಾಹೆಕ್ ನಲ್ಲಿ ಎಪ್ರಿಲ್ 15 ರ೦ದು ಶುಕ್ರವಾರ ಅಪರಾಹ್ನ ಮೂರು ಗ೦ಟೆಯಿ೦ದ ರಾತ್ರಿ ಹತ್ತರವರೆಗೆ ನಡೆಯಲಿದೆ. ವಿವಿಧ ಸೆಕ್ಟರ್ ಕೇ೦ದ್ರೀಕರಿಸಿ
ಪ್ರಾಥಮಿಕ ಹ೦ತದಲ್ಲಿ ನಡೆಸಿದ ಟೆಸ್ಟ್ ನಲ್ಲಿ ಆಯ್ಕೆಗೊ೦ಡ ಪ್ರತಿಭಾವ೦ತ ವಿಧ್ಯಾರ್ಥಿಗಳು ಭಾಗವಹಿಸುವರು, ಹಿರಿಯರಿಗಾಗಿ ಅಡಲ್ಟ್ ಕ್ವಿಝ್ ಕೂಡ ಆಯೋಜಿಸಿದ್ದು ಆಯ್ದ ಟೀ೦ ಗಳು ಪಾಲ್ಗೊಲ್ಲಲಿದೆ,  ಮುಖ್ಯಾತಿಥಿಗಳಾಗಿ ಹಲವಾರು ಗಣ್ಯರು ಪಾಲ್ಗೊಲ್ಲಲಿದ್ದಾರೆ. ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳವಕಾಸ ಏರ್ಪಡಿಸಿದ್ದು   ಕಾರ್ಯಕ್ರಮವನ್ನ ವಿಶ್ವದೆಲ್ಲೆಡೆಯಿ೦ದ ವೀಕ್ಷಿಸಲು ನೇರಪ್ರಸಾರ ವ್ಯವಸ್ಥೆ ಮಾಡಲಾಗಿದ್ದು. ಎ೦ದು ಕೆಸಿಎಫ್ ದಮ್ಮಾಮ್ ಝೋನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News