×
Ad

ಅಮೆರಿಕದಿಂದ ಗಂಟುಮೂಟೆ ಕಟ್ಟಿದ ಅಲ್‌ಜಝೀರಾ!: ಹಣಕಾಸು ಕೊರತೆ ಕಾರಣವಂತೆ!

Update: 2016-04-14 13:19 IST

ನ್ಯೂಯಾರ್ಕ್, ಎ.14: ಜಾಗತಿಕ ಮಾಧ್ಯಮದ ಬಾಹುಬಲಿ ಅಲ್‌ಜಝೀರಾ ತನ್ನ ಅಮೆರಿಕದ ಕೇಂದ್ರ (ಅಝಾಂ)ವನ್ನು ಮುಚ್ಚಿದೆ. ಮಂಗಳವಾರ ರಾತ್ರಿ ಕೊನೆಯ ಕಾರ್ಯಕ್ರಮವನ್ನು ಬಿತ್ತರಿಸಿ ಅಲ್‌ಜಝೀರಾ ನ್ಯೂಯಾರ್ಕ್ ಕೇಂದ್ರದ ಅಧಿಕೃತ ಸೇವೆಯನ್ನು ಕೊನೆಗೊಳಿಸಿತು ಎಂದು ವರದಿಗಳು ತಿಳಿಸಿವೆ.

ಪ್ರಾದೇಶಿಕ ಸಮಯ ಸಂಜೆ ಆರರಿಂದ ಒಂಬತ್ತು ಗಂಟೆಯವರೆಗೆ ತನ್ನ ಕೊನೆಯ ಕಾರ್ಯಕ್ರಮವನ್ನು ಬಿತ್ತರಿಸಿತೆನ್ನಲಾಗಿದೆ. 2013ರ ಆಗಸ್ಟ್ 20ಕ್ಕೆ ಪ್ರಸಾರವನ್ನು ಪ್ರಾರಂಭಿಸಿದ್ದಲ್ಲಿಂದ ಮೊನ್ನೆವರೆಗೆ ಅತ್ಯಂತ ಉತ್ತಮ ಕಾರ್ಯಕ್ರಮಗಳನ್ನು ಅಲ್‌ಜಝೀರಾ ಅಮೆರಿಕದ ಜನರಿಗೆ ನೀಡಿತ್ತು. ಅಮೆರಿಕದ ಪ್ರಸಿದ್ಧ ಪತ್ರಕರ್ತರನ್ನು ಅದರ ಕಾರ್ಯಕ್ರಮದಲ್ಲಿ ಪ್ರೇಕ್ಷರು ಮತ್ತೊಮ್ಮೆ ನೋಡುವಂತಾಯಿತು. ಅಂಟಾನಿಯೋ ಮೊರ ಮುಂತಾದವರು ಅಲ್‌ಜಝೀರಾದ ಅಮೆರಿಕನ್ ಪ್ರೇಕ್ಷಕರಿಗೆ ಸುಪರಿಚಿತ ಪತ್ರಕರ್ತರಾಗಿದ್ದಾರೆ. ಆರ್ಥಿಕ ಕಾರಣಗಳಿಂದಾಗಿ ಅಲ್‌ಜಝೀರಾದ ಅಮೆರಿಕನ್ ಕೇಂದ್ರವನ್ನುಮುಚ್ಚುವುದಾಗಿ ಕತರ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಲ್‌ಜಝೀರಾ ಕಳೆದ ಜನವರಿಯಲ್ಲಿ ಘೋಷಿಸಿತ್ತು. ಕಳೆದ 33 ತಿಂಗಳ ಸೇವೆಯ ನಡುವೆ ಹಲವಾರು ಗಂಭೀರ ಮತ್ತು ಸುದ್ದಿಪ್ರಧಾನವಾದ ವಿಷಯಗಳನ್ನು ಆಝಂ ಪ್ರಸಾರ ಮಾಡಿದೆ. ಹಲವಾರು ಪ್ರಮುಖ ಪ್ರಶಸ್ತಿಗಳು ಸಂಸ್ಥೆ ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರಿಗೆ ದೊರಕಿತ್ತು ಎಂದು ವರದಿಗಳು ತಿಳಿಸಿವೆ. ಅಮೆರಿಕನ್ ಜನರ ಧ್ವನಿಗೆ ಇತರ ಮಾಧ್ಯಮಗಳು ನೀಡಿದ್ದಕ್ಕಿಂತ ಆಳದಲ್ಲಿ ಪಾಮುಖ್ಯತೆ ನೀಡಲು ತಮಗೆ ಸಾಧ್ಯವಾಗಿದೆ. ಈ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚು ಕೃತಜ್ಞರಾಗಿದ್ದೇವೆ ಎಂದು ಅಲ್‌ಜಝೀರಾದ ಅಮೆರಿಕನ್ ಕೇಂದ್ರದ ಅಧ್ಯಕ್ಷ ಕೇಟ್ ಒಬ್ರಿಯಾನ್ ಹೇಳಿರುವುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News