ಕೆಎಂವೈಎ ಸದಸ್ಯರಿಂದ ಭಾರತೀಯ ರಾಯಭಾರಿಯ ಭೇಟಿ
ರಿಯಾದ್, ಎ.15: ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಶನ್ (ಕೆಎಂವೈಎ) ರಿಯಾದ್ ಇದರ ಆಡಳಿತ ಮಂಡಳಿಯ ಸದಸ್ಯರು ನೂತನವಾಗಿ ನೇಮಕಗೊಂಡಿರುವ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಅಹ್ಮದ್ ಜಾವೇದ್‌ರನ್ನು ಭೇಟಿಯಾದರು.
ಕೆಎಂವೈಎ ಪದಾಧಿಕಾರಿಗಳಾದ ಫರ್ವೇಝ್ ಅಲಿ, ಸುಲೈಮಾನ್ ಅಬ್ದುರ್ರಹ್ಮಾನ್, ಅಹ್ಮದ್ ಶಬೀರ್, ಹುಸೈನ್ ಹಾಗೂ ಶಾಫಿ ಮುಹಮ್ಮದ್ ನೂತನ ರಾಯಭಾರಿ ಅಹ್ಮದ್ ಜಾವೇದ್‌ರನ್ನು ಭೇಟಿಯಾಗಿ ಅಭಿನಂದಿಸಿದರು. ಈ ಮೊದಲು ಅಹ್ಮದ್ ಜಾವೇದ್ ಮುಂಬೈಯಲ್ಲಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಸೌದಿ ಅರೇಬಿಯಾದಲ್ಲಿ ದ.ಕನ್ನಡ ಮತ್ತು ಉಡುಪಿಯ ಜಿಲ್ಲೆಯ ಸಂಘಟನೆಗಳು ಬಡವರಿಗೆ ಸಹಾಯ ಮತ್ತು ಶಿಕ್ಷಣ ಉತ್ತೇಜನಕ್ಕಾಗಿ ನೀಡುವ ಪ್ರಮುಖ ಕಾರ್ಯನಿರ್ವಹಣೆಯ ಬಗ್ಗೆ ಈ ಸಂದರ್ಭದಲ್ಲಿ ಕೆಎಂವೈಎ ಅಧ್ಯಕ್ಷ ಫರ್ವೇಝ್ ಅಲಿ ವಿವರಿಸಿದರು.
ಕೆಎಂವೈಎ ವತಿಯಿಂದ ನಡೆದ ಸ್ನೇಹಕೂಟ ಕಾರ್ಯಕ್ರಮಕ್ಕೆ ಅಹ್ಮದ್ ಜಾವೇದ್‌ರನ್ನು ಆಹ್ವಾನಿಸಲಾಯಿತು. ಇದೇ ವೇಳೆ ಕೆಎಂವೈಎ ಪದಾಧಿಕಾರಿಗಳು ಭಾರತೀಯ ರಾಯಭಾರಿ ಕಚೇರಿಯ ಪ್ರಥಮ ಕಾರ್ಯದರ್ಶಿ ಅನಿಲ್ ನೌತಿಯ್ಯಾಲ್‌ರನ್ನು ಕೂಡ ಭೇಟಿ ಮಾಡಿದರು.