×
Ad

ಕತರ್‌ನಲ್ಲಿ ನಾಶ-ನಷ್ಟ ತಂದ ಗಾಳಿಮಳೆ

Update: 2016-04-16 15:17 IST

ದೋಹ,ಎಪ್ರಿಲ್ 16: ಕಳೆದ ರಾತ್ರೆ ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಬಿರುಗಾಳಿ ಸಂಭವಿಸಿದ್ದು ನಾಶನಷ್ಟಗಳಾಗಿವೆ ಎಂದು ವರದಿಯಾಗಿದೆ.ಹವಾಮಾನ ಕೇಂದ್ರ ಎಚ್ಚರಿಕೆಯಂತೆ ರಾಜಧಾನಿಯಲ್ಲಿಯೂ ಇತರ ಪ್ರದೇಶಗಳಲ್ಲಿಯೂ ಬಲವಾದ ಗಾಳಿ ಮಳೆ ಅಪ್ಪಳಿಸಿದೆ. ಜೊತೆ ಬಿರುಗಾಳಿಯೂ ಇದ್ದುದರಿಂದ ಜನಜೀವ ಅಸ್ತವ್ಯಸ್ತವಾಗಿದೆ. ಕೆಲವು ಕಡೆ ಅಲಿಕಲ್ಲು ಮಳೆಯಾಗಿದೆ. ಮಳೆಯಿಂದಾಗಿ ದೇಶದ ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು. ಆದ್ದರಿಂದ ವಾಹನಸಂಚಾರ ಅಸ್ತವ್ಯವಸ್ಥವಾಗಿದೆ. ಮರಗಳು ಬುಡಸಮೇತ ಉರುಳಿಬಿದ್ದಿವೆ. ಕೆಲವು ವಸತಿ ಪ್ರದೇಶಗಳಲ್ಲಿ ಸೋರಿಕೆ ಆಗಿದ್ದು ಕಟ್ಟಡಗಳಿಗೂ ಹಾನಿಯಾಗಿವೆ ಎನ್ನಲಾಗಿದೆ.

ಮಳೆಗಾಳಿಯಲ್ಲಿ ಸಿಕ್ಕಿಹಾಕಿಕೊಂಡಜನರಿಗೆ ತುರ್ತು ಪರಿಸ್ಥಿತಿಯನ್ನು ಎದುರಿಸಲಿಕ್ಕಾಗಿ ಜನರ ಕಷ್ಟ ನಿವಾರಿಸಲಿಕ್ಕಾಗಿ ಮುನ್ಸಿಪಾಲಿಟಿ ಸಚಿವಾಲಯ ಮತ್ತು ಅಶ್‌ಗಾಲ್ ತುರ್ತು ಸಭೆ ನಡೆಸಿದ್ದು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನ ರಸ್ತೆಗಳ ಡ್ರೈನೇಜ್ ವ್ಯವಸ್ಥೆ ಬಗ್ಗೆ ನಿಗಾ ಇರಿಸಿ ತುರ್ತುಕ್ರಮಕೈಗೊಳ್ಳಾಗಿದೆ ಎಂದು ಆಶ್‌ಗಾಲ್ ಹೇಳಿದೆ.ವಾಸಸ್ಥಳಗಳಲ್ಲಿ ತುಂಬಿಕೊಂಡಿರುವ ನೀರನ್ನು ತೆರವುಗೊಳಿಸುವುದಕ್ಕೆ ಮುನ್ಸಿಪಾಲಿಟಿ ಸಚಿವಾಲಯದ ಆನ್ಲೈನ್ ವ್ಯವಸ್ಥೆ ಮೂಲಕ ವರದಿ ಒಪ್ಪಿಸಲು ಅಲ್ಲಿ ವಾಸವಿರುವವರಿಗೆ ಸಚಿವಾಲಯ ಸೌಕರ್ಯ ಒದಗಿಸಿದೆ.

ಮಳೆಯಲ್ಲಿ ಶೆರಟಾನ್ ಹೊಟೇಲ್, ಲಾಂಡ್‌ಮಾರ್ಕ್‌ಮಾಲ್, ಡಿ ಡಬ್ಲ್ಯೂ ಹೊಟೇಲ್ ಮುಂತಾದ ಪ್ರಮುಖ ಕಟ್ಟಡಗಳಲ್ಲಿ ಸೋರಿಕೆಯಾಗಿದೆ. ಬಲವಾದ ಗಾಳಿಮಳೆ ಕಾರಣದಿಂದಾಗಿ ದಫ್ನಾದಲ್ಲಿ ವೆಸ್ಟ್‌ಬೆಯಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ. ಬೀಚ್ ಟವರ್‌ನಲ್ಲಿ ಅಲ್ ಅರೀನ್‌ಟವರ್‌ನಲ್ಲಿ ಕಿಟಕಿಗಾಜುಗಳು ಪುಡಿಯಾಗಿದೆ. ಪಾರ್ಕಿಂಗ್ ಸ್ಥಳಗಳ ಮೇಲ್ಛಾವಣಿ ಕುಸಿದಿದೆ. ಸೌದಿ ಅರೇಬಿಯದ ಪೂರ್ವಭಾಗದಿಂದ ಗಾಳಿ ಬಂದ ಕಾರಣ ನಿನ್ನೆ ಮಧ್ಯಾಹ್ನದ ನಂತರ ಆಗಾಗ ಕತರ್‌ನಲ್ಲಿ ಭಾರೀ ಮಳೆಯಾಗಿತ್ತು. ಭಾರೀ ಗಾಳಿಮಳೆ ಆಗಲಿದೆ ಎಂದು ಹವಮಾನ ಇಲಾಖೆ ಅ ಮೊದಲು ಎಚ್ಚರಿಕೆ ನೀಡಿತ್ತೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News