ತಾತ್ಕಾಲಿಕ ಮತಾಫ್ ಇನ್ನಿಲ್ಲ : ಕಾಬಾಗೆ ಮತ್ತೆ ಗತ ವೈಭವದ ನೋಟ
Update: 2016-04-18 16:58 IST
ಜಿದ್ದಾ, ಎ. 18: ತಾತ್ಕಾಲಿಕ ಮತಾಫನ್ನು ಕೆಡವಿದ ಬಳಿಕ, ಕಾಬಾ ತನ್ನ ಭವ್ಯ ಹಾಗೂ ಆಧ್ಯಾತ್ಮಿಕ ನೋಟವನ್ನು ಮತ್ತೆ ಪಡೆದುಕೊಂಡಿದೆ.
ಉತ್ತರ ಮತ್ತು ಪಶ್ಚಿಮದ ಭಾಗಗಳ ವಿಸ್ತರಣಾ ಯೋಜನೆ ಆರಂಭಗೊಂಡಂದಿನಿಂದ ಕಾಬಾ ಮೊದಲ ಬಾರಿಗೆ ತನ್ನ ಭವ್ಯ ಕಳೆಯನ್ನು ಪಡೆದುಕೊಂಡಿದೆ.
ಹಿರಿಯರು, ವಿಶೇಷಚೇತನರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರಿಗೂ ಜನಸಂದಣಿಯ ಮತಾಫ್ ಪ್ರದೇಶವನ್ನು ಪ್ರವೇಶಿಸದರೆ ನೇರವಾಗಿ ಕಾಬಾದ ದರ್ಶನ ಮಾಡಲು ಸಾಧ್ಯವಾಗಿದೆ.
ಕಾಬಾಕ್ಕೆ ಸಮಾನಾಂತರವಾಗಿ ನಿರ್ಮಿಸಿದ್ದ ಮತಾಫ್‌ನಿಂದಾಗಿ, ಕಾಬಾ ಗೋಚರಿಸುವ ಸ್ಥಳಕ್ಕೆ ಹೋಗಲು ಯಾತ್ರಿಕರು ಪರಸ್ಪರರ ಜೊತೆಗೆ ಸ್ಪರ್ಧಿಸಬೇಕಾಗಿತ್ತು. ಅಸರ್ ಮತ್ತು ಇಶಾ ಪ್ರಾರ್ಥನೆಗಳ ನಡುವೆ ಹೆಚ್ಚಾಗಿ ಈ ಸಮಸ್ಯೆ ತಲೆದೋರುತ್ತಿತ್ತು.