ಮದೀನಾ: ನ್ಯೂ ವೆಲ್ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ನಾಲ್ಕನೇ ವಾರ್ಷಿಕ ಮಹಾಸಭೆ
ಮದೀನಾ: ನ್ಯೂ ವೆಲ್ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ಇದರ ನಾಲ್ಕನೇ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಅಶ್ರಫ್ ತೈಬಾ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ.ಸಿ.ಎಫ್ ಮದೀನಾ ಶಿಕ್ಷಣ ಸಂಯೋಜಕ ಉಸ್ಮಾನ್ ಮಾಸ್ಟರ್ ಮಾತನಾಡುತ್ತಾ ನ್ಯೂ ವೆಲ್ಫೇರ್ ಸಂಸ್ಥೆಯು ಕಳೆದ ನಾಲ್ಕು ವರುಷಗಳಿಂದ ಬಡರೋಗಿಗಳಿಗೆ ಸಹಾಯ, ಆರ್ಥಿಕವಾಗಿ ಹಿಂದುಳಿದವರಿಗೆ ರಂಝಾನ್ ಕಿಟ್ ವಿತರಣೆ, ಮದರಸ ಶಿಕ್ಷಣ ಮೊದಲಾದ ವಿಷಯಗಳಿಗಾಗಿ ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದರು.
ಮುಖ್ಯ ಅತಿಥಿಗಳಾಗಿ ಮುಹಿಮ್ಮಾತ್‌ನ ಉಸ್ತಾದ್ ಮೂಸ ಸಖಾಫಿ, ದ.ಕ.ಸುನ್ನೀ ಸೆಂಟರ್ ಮದೀನಾ ಅಧ್ಯಕ್ಷ ಮುಹಮ್ಮದಾಲಿ, ಸುನ್ನೀ ಸೆಂಟರ್ ರಿಸೀವರ್ ಮಹಮ್ಮದ್ ಮುಸ್ಲಿಯಾರ್ ಉದ್ದಬೆಟ್ಟು, ದಾರುನ್ನೂರ್ ಅಧ್ಯಕ್ಷ ಇಬ್ರಾಹೀಂ ಮಚ್ಚಂಪಾಡಿ, ಇಂಡಿಯಾ ಫ್ರೆಟರ್ನಿಟಿ ಪೋರಂ ಮದೀನಾ ಅಧ್ಯಕ್ಷ ಅಬ್ದುಲ್ ಅಝೀಝ್ ಸುರಿಬೈಲ್ , ದಾರುಲ್ ಇರ್ಷಾದ್ ಮದೀನಾ ಅಧ್ಯಕ್ಷ ಬಶೀರ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸರಫ್ರಾರ್ ಕುಪ್ಪೆಪದವು ವಾರ್ಷಿಕ ವರದಿ ಮಂಡಿಸಿದರು. ದ.ಕ.ಸುನ್ನೀ ಸೆಂಟರ್‌ನ ವಿದ್ಯಾರ್ಥಿ ಝಾಕಿರ್ ಕಿರಾಹತ್ ಪಠಿಸಿದರು.
ಸಭೆಯಲ್ಲಿ ನೂತನ ಪದಾದಿಕಾರಿಗಳನ್ನು ಆರಿಸಲಾಯಿತು. ಗೌರವಾಧ್ಯಕ್ಷರಾಗಿ ಬಶೀರ್ ಉಪ್ಪಿನಂಗಡಿ, ಅಧ್ಯಕ್ಷರಾಗಿ ಅಶ್ರಫ್ ತೈಬಾ, ಉಪಾಧ್ಯಕ್ಷರಾಗಿ ಅಬ್ದುಲ್ ಅಝೀರ್ ಗಡಿಯಾರ್, ಪ್ರಧಾನ ಕಾರ್ಯದರ್ಶಿ ಸರಫ್ರಾರ್ ಕುಪ್ಪೆಪದವು, ಜೊತೆ ಕಾರ್ಯದರ್ಶಿಗಳಾಗಿ ನಾಸೀರ್ ಬಾಂಬಿಲ, ಹಬೀಬ್ ಅಳಕೆ, ಕೋಶಾಧಿಕಾರಿಯಾಗಿ ಶಂಸು ಉಜಿರೆ, ಸಂಚಾಲಕರಾಗಿ ಉಸ್ಮಾನ್ ಮಾಸ್ಟರ್ ಮತ್ತು ಹನ್ನೊಂದು ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ನೇಮಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸರಫ್ರಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು,ಅಶ್ರಫ್ ತೈಬಾವಂದಿಸಿದರು.