×
Ad

ದಾರುನ್ನೂರ್ ವತಿಯಿಂದ ಕುಂಬೋಳ್ ತಂಙಳ್ ರವರಿಗೆ ದುಬೈಯಲ್ಲಿ ಸನ್ಮಾನ

Update: 2016-04-19 00:11 IST

ದುಬೈ : ದಾರುನ್ನೂರ್ ಎಜುಕೇಶನ್ ಸೆಂಟರ್  ಕಾಶಿಪಟ್ನ ಮೂಡಬಿದ್ರಿ ಇದರ ಯುಎಇ ರಾಷ್ತ್ರೀಯ ಸಮಿತಿಯ ಆಶ್ರಯದಲ್ಲಿ ಕುಂಬೋಳ್ ಅಸ್ಸಯ್ಯದ್ ಆಟಕೋಯ ತಂಙಳ್ ರವರಿಗೆ ಸನ್ಮಾನ ಸಮಾರಂಭ ದೇರಾ ರಾಫಿ ಹೋಟೆಲ್ ಆಡಿಟೋರಿಯಂ ನಲ್ಲಿ ನಡೆಯಿತು. ದಾರುನ್ನೂರ್ ಯುಎಇ ಇದರ ಅದ್ಯಕ್ಷರಾದ ಜನಾಬ್ ಸಲೀಮ್ ಅಲ್ತಾಫ್ ಫರಂಗಿಪೇಟೆ ಅದ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ದಾರುನ್ನೂರ್ ಯುಎಇ ಇದರ ಪ್ರಮುಖ ಉಪದೇಶಕರಾದ ಜನಾಬ್ ಸಯ್ಯದ್ ಅಸ್ಕರ್ ಅಲಿ ತಂಗಳ್ ಕೋಲ್ಪೆ , ಗೌರವಾದ್ಯಕ್ಷರಾದ ಜನಾಬ್ ಹಾಜಿ ಮುಹಿದ್ದೀನ್  ಕುಟ್ಟಿ  ಕಕ್ಕಿಂಜೆ ,  ಡಿಕೆಯಸ್ಸಿ ಕೇಂದ್ರ ಸಮಿತಿ ನೇತಾರರೂ  ಸ್ಥಾಪಕ ಸದಸ್ಯರೂ ಆದ  ಜನಾಬ್ ಇಸ್ಮಾಯೀಲ್  ಹಾಜಿ  ಕಿನ್ಯಾ , ಡಿಕೆಯಸ್ಸಿ ಯು ಎ ಇ ಇದರ ನೂತನ ಅದ್ಯಕ್ಷರಾದ ಜನಾಬ್ ಹುಸೈನ್ ಹಾಜಿ ಕಿನ್ಯಾ ಮೊದಲಾದವರು  ಉಪಸ್ಥಿತರಿದ್ದರು .

ಅಸ್ಸಯ್ಯದ್  ತಂಙಳ್ ರವರ ದುಆದ ಬಳಿಕ ದಾರುನ್ನೂರ್ ಯು ಎ ಇ ಇದರ ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್  ರವರು ತಂಙಳ್ ರವರ ವರ್ಚಸ್ಸು, ಕೀರ್ತಿ ,  ಆದ್ಯಾತ್ಮಿಕ  ಮತ್ತು ಸಾಮಾಜಿಕ ಕ್ಷೇತ್ರ ನೀಡಿದ ಗಣನೀಯ ಸಾಧನೆಗಳನ್ನು ವಿವರಿಸಿ ಉತ್ತರ  ಕೇರಳದಲ್ಲಿ ಪಾಣಕ್ಕಾಡ್  ತಂಙಳ್ ರವರ ವರ್ಚಸ್ಸು ಮತ್ತು ದಕ್ಷಿಣ ಕೇರಳ ಮತ್ತು ಕರಾವಳಿ ಕರ್ನಾಟಕದಲ್ಲಿ  ಕುಂಬೋಳ್ ತಂಙಳ್ ರವರ ವರ್ಚಸ್ಸು  ಇವೆರಡೂ ಪರಂಪರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು ನಮಗೆಲ್ಲರಿಗೂ ಅಲ್ಲಾಹನು ನೀಡಿದ ಮಹಾ ಅನುಗ್ರಹವಾಗಿದೆ ಎಂದು ವಿವರಿಸಿದರು . ಬಳಿಕ ದಾರುನ್ನೂರಿನ ಹೃಸ್ವ ಪರಿಚಯವನ್ನು ನೀಡಿ ಅಸ್ಸಯ್ಯದ್ ತಂಙಳ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು . ಸನ್ಮಾನ ಸ್ವೀಕರಿಸಿ ಸುಮಾರು 45 ನಿಮಿಷಗಳ ಕಾಲ ಮಾತನಾಡಿದ  ಅಸ್ಸಯ್ಯದ್  ಆಟಕೋಯ ತಂಙಳ್ ರವರು ಧಾರ್ಮಿಕ ಮತ್ತು ಲೌಕಿಕ  ವಿದ್ಯಾಭ್ಯಾಸ  ಕ್ಷೇತ್ರಗಳಲ್ಲಿ  ಸಂಘ ಸಂಸ್ಥೆಗಳು ನೀಡುತ್ತಿರುವ ಗಣನೀಯ ಸೇವೆಯನ್ನು  ಶ್ಲಾಘಿಸಿದರು.  ಕಳೆದ  20  ವರ್ಷಗಳ ಹಿಂದೆ  ಶೈಕ್ಷಣಿಕ ರಂಗದಲ್ಲಿ ತನ್ನನ್ನು ತೊಡಗಿಸಿ ಇಂದು ಬೃಹದಾಕಾರದಲ್ಲಿ ಬೆಳೆದು ನಿಂತಿರುವ ಡಿಕೆಯಸ್ಸಿ ಯಂತಹ  ಮಹಾ ವಿದ್ಯಾಲಯವನ್ನು ಆದರ್ಶವಾಗಿರಿಸಿ ಅದೇ ರೀತಿಯಲ್ಲಿ ಮುಂದುವರಿದರೆ ಯಶಸ್ಸು ಶತಸಿದ್ಧ ಎಂದು ವಿವರಿಸಿ ಶೈಖುನಾ ಸಿ ಯಂ ಉಸ್ತಾದ್ ಮತ್ತು ಶೈಖುನಾ ತ್ವಾಖಾ ಉಸ್ತಾದ್ ರವರ ಪರಿಶ್ರಮವನ್ನು ಕೊಂಡಾಡಿ ಮಾತನಾಡಿದರು . ದಾರುನ್ನೂರಿನದ್ದು ತುಂಬಾ ಬೃಹತ್ ಯೋಜನೆಯಾಗಿದ್ದು  ತನ್ನ ನೂರು ಮೈಲುಗಳ ಪ್ರಯಾಣದಲ್ಲಿ ಕೇವಲ ನಾಲ್ಕೋ ಐದೋ ಮೈಲು ಗಳು ಮಾತ್ರಾ ಗತಿಸಲು ಈ ಸಣ್ಣ ಸಮಯದಲ್ಲಿ ಸಾಧ್ಯವಾಗಿದ್ದು ಉಳಿದ ಶೇಕಡ  95 ಶತಮಾನ ಬಾಕಿ ಉಳಿದಿದ್ದು ಎಲ್ಲರೂ ಪರಸ್ಪರ ಸಹಕರಿಸಿ ಉತ್ಸಾಹಸದಿಂದ ಈ ವಿದ್ಯಾ ಸಂಸ್ಥೆಯನ್ನು ಕಟ್ಟಿಬೆಳೆಸಬೇಕೆಂದು ಕರೆಯಿತ್ತು ಎಲ್ಲರಿಗೂ ಒಳಿತನ್ನು ಆಶಿಸಿ ಪ್ರಾರ್ಥಿಸಿ ತನ್ನಮಾತಿಗೆ ಪೂರ್ಣ ವಿರಾಮವನ್ನಿತ್ತರು .

ಬೇರೆ ಕಾರ್ಯಕ್ರಮಗಳಲ್ಲಿ  ಪಾಲ್ಗೊಳ್ಳಲಿರುವುದರಿಂದ ಶೈಖುನಾ  ಅಸ್ಸಯ್ಯದ್ ತಂಙಳ್ ರವರು ಮತ್ತು ಅತಿಥಿಗಳು ನಿರ್ಗಮಿಸಿದರು.

ದಾರುನ್ನೂರ್  ಯು ಎ ಇ ವತಿಯಿಂದ ಈ ವರ್ಷ ಬೃಹತ್ ಇಫ್ತಾರ್ ಕಾರ್ಯಕ್ರಮ ಏರ್ಪಡಿಸುವುದಾಗಿ ಅದ್ಯಕ್ಷರು ತಿಳಿಸಿದರು. ಕಳೆದ ಸಭೆಯಲ್ಲಿ ತೀರ್ಮಾನಿಸಿದಂತೆ ಜುಲೈ ತಿಂಗಳ ಒಂದನೇ ತಾರೀಕಿನಂದು ರಾಫಿ ಹೋಟೆಲ್ ನಲ್ಲಿರುವ ಒಂದನೇ ಮಹಡಿಯಲ್ಲಿರುವ ಎಲ್ಲಾ  ನಾಲ್ಕು  ಆಡಿಟೋರಿಯಂ ಗಳನ್ನು ಪಡೆದು ವಿಜೃಂಭಣೆಯಲ್ಲಿ ನೆರವೇರಿಸುವುದಾಗಿ ಅದ್ಯಕ್ಷರು ಚರ್ಚೆಯ ಬಳಿಕ ತಿಳಿಸಿದರು. ಮಹಿಳೆಯರಿಗಾಗಿ ಒಂದು ಆಡಿಟೋರಿಯಂ ಮೀಸಲಿಡುವುದಾಗಿ ತಿಳಿಸಿದರು. ದಾರುನ್ನೂರ್ ಇದರ ಶಿಲ್ಪಿಯೂ , ದಕ್ಷಿಣ ಕರ್ನಾಟಕ ಜಿಲ್ಲಾ ಖಾಝಿಯೂ ಆದ ಶೈಖುನಾ ತ್ವಾಕಾ ಉಸ್ತಾದ್ ಮತ್ತು ಇತರ ಊರಿನ ಗಣ್ಯರು ಆಗಮಿಸುವ ಸಂಭವವಿದ್ದು ಕಾರ್ಯಕ್ರಮದ  ಯಶಸ್ವಿಗಾಗಿ  ಒಂದು ಸಲಹಾ ಸಮಿತಿಯನ್ನು ರಚಿಸಲಾಯಿತು.

ಚೇರ್ಮೇನ್ ಆಗಿ ಜನಾಬ್ ಅನ್ಸಾಫ್ ಪಾತೂರ್

ಕೋ ಚೇರ್ಮೇನ್ ಗಳಾಗಿ  : ಜನಾಬ್ ಮಹಮ್ಮದ್ ರಫೀಕ್ ಆತೂರು , ಜನಾಬ್ ಸಾಜಿದ್ ಬಜ್ಪೆ, ಜನಾಬ್ ಹನೀಫ್ ಹರಿಯಮೂಲೆ , ಜನಾಬ್ ಸಂಶುದ್ದೀನ್ ಸೂರಲ್ಪಾಡಿ , ಜನಾಬ್ ಅಬ್ದುಲ್ ರಹ್ಮಾನ್ ಬಾಳಿಯೂರ್

ಕಾರ್ಯದರ್ಶಿ  : ಜನಾಬ್ ಹನೀಫ್ ಎಡಪದವು

ಕೋಶಾಧಿಕಾರಿ :  ಜನಾಬ್ ಉಸ್ತಾದ್ ಶರೀಫ್ ಅಶ್ರಫಿ ಮೊಡಂತ್ಯಾರ್

ಬಳಿಕ ಆಮಂತ್ರಣ ಪತ್ರಿಕೆ ಹಾಗೂ ಇತರ ಸಹಕಾರವನ್ನು ರಾಷ್ಟ್ರೀಯ ಸಮಿತಿ ನೀಡುವುದಾಗಿ ತೀರ್ಮಾನಿಸಲಾಯಿತು .

ಇತ್ತೀಚೆಗೆ  ನೂತನವಾಗಿ ರಚಿಸಲ್ಪಟ್ಟ ಶಾಖೆಗಳಾದ ದಾರುನ್ನೂರ್ ಯೂತ್ ಟೀಂ ಮತ್ತು ಅಲ್ ಐನ್ ಶಾಖೆಗಳೀಗೆ ಅಂಗೀಕಾರ ನೀಡಲಾಯಿತು. ಈ ಸಂದರ್ಭ ಅಲ್ ಐನ್ ಶಾಖೆಯ ಗೌರವಾದ್ಯಕ್ಷ ಜನಾಬ್ ಮಹಮ್ಮದ್ ಮಾಡಾವು, ಅದ್ಯಕ್ಷ ಜನಾಬ್ ಅಬ್ದುಲ್ ರಹ್ಮಾನ್ ಬಾಳಿಯೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ದಾರುನ್ನೂರ್ ಯು ಎ ಇ ಇದರ ಕಾರ್ಯದರ್ಶಿ ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ ರವರ ಸಹೋದರ ಜನಾಬ್ ಸವಾದ್ ಸುರತ್ಕಲ್ ರವರ ವಿವಾಹ ಮೇ ತಿಂಗಳ 8 ರಂದು ಚೊಕ್ಕಬೆಟ್ಟು ಹಾಲ್ ನಲ್ಲೂ , ದಾರುನ್ನೂರ್  ನಕೀಲ್ ಶಾಖೆಯ ಪ್ರಧಾನ ಕಾರ್ಯದರ್ಶಿ ಜನಾಬ್ ನಾಸಿರ್ ಮಂಗಿಲ ಪದವು ರವರ ವಿವಾಹ ಎಪ್ರಿಲ್ 30  ರಂದು ರಾಜ್ ಕಮಲ್ ಹಾಲ್ ನಲ್ಲೂ ನಡೆಯಲಿದ್ದು ಅದಕ್ಕಾಗಿ ಎಲ್ಲರಿಗೂ ಆಮಂತ್ರಣ ನೀಡಲಾಯಿತು .

ಬಳಿಕ ಇತ್ತೀಚೆಗೆ ನಮ್ಮನ್ನಗಲಿದ ದಾರುನ್ನೂರ್ ಮುವೈಲಿಯಾ ಶಾಖೆಯ ಅದ್ಯಕ್ಷ ಜನಾಬ್ ಅಬ್ದುಲ್ ರಝಾಕ್ ಸೋಂಪಾಡಿ ಯವರ ತಂದೆ ಮರ್ಹೂಮ್ ಆದಂ ಕುಂಜಿ ಯವರ ಮತ್ತು ಮುರಕ್ಕಾಬಾತ್ ಶಾಖೆಯ ಅದ್ಯಕ್ಷ ಜನಾಬ್ ನವಾಝ್ ಬಿ.ಸಿ ರೋಡ್ ರವರ ದೊಡ್ಡಪ್ಪ ಮರ್ಹೂಂ ಅಬ್ದುಲ್ ಖಾದರ್ ಬಿ.ಸಿ ರೋಡ್ ರವರ ಮತ್ತು ನಮ್ಮಿಂದ ಅಗಲಿದ ಎಲ್ಲಾ ಸಹೋದರರ ಮೇಲೆ  ಸಯ್ಯದ್ ಅಸ್ಕರ್ ಅಲಿ ತಂಙಳ್ ಮತ್ತು   ಉಸ್ತಾದ್  ಶರೀಫ್ ಅಶ್ರಫಿ ಯವರ ನೇತೃತ್ವದಲ್ಲಿ  ತಹಲೀಲ್ ಸಮರ್ಪಣೆ ಮತ್ತು ವಿಶೇಷ  ಪ್ರಾರ್ಥನೆ ಕಾರ್ಯ  ನೆರವೇರಿಸಲಾಯಿತು .

ಕಾರ್ಯಕ್ರಮ  ಯಶಸ್ವಿಯಾಗಿ ನೆರವೇರಲು ದಾರುನ್ನೂರ್ ಯು ಎ ಇ ಕೋಶಾಧಿಕಾರಿ ಜನಾಬ್  ಅಬ್ದುಲ್ ಸಲಾಂ ಬಪ್ಪಳಿಗೆ , ಕಾರ್ಯದರ್ಶಿ ಜನಾಬ್ ಸಮೀರ್ ಇಬ್ರಾಹಿಂ ಕಲ್ಲರೆ ,ಜನಾಬ್  ಮಹಮ್ಮದ್ ರಫೀಕ್ ಆತೂರ್ ,  ಜನಾಬ್ ಸಫಾ ಇಸ್ಮಾಯೀಲ್  ಬಜ್ಪೆ, ಜನಾಬ್  ಸಾಜಿದ್  ಬಜ್ಪೆ, ಜನಾಬ್ ಹನೀಫ್ ಹರಿಯಮೂಲೆ, ಜನಾಬ್ ಸಫ್ವಾನ್ ಕುಪ್ಪೆ ಪದವು, ಜನಾಬ್  ಸಂಶೀರ್ ಬಾಂಬಿಲ ಮೊದಲಾದವರು ಸಹಕರಿಸಿದರು ,

ಕಾರ್ಯಕ್ರಮದ ಕೊನೆಯಲ್ಲಿ  ಕಾರ್ಯದರ್ಶಿ ಜನಾಬ್ ಅಶ್ರಫ್ ಪರ್ಲಡ್ಕ ರವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.

Writer - ಬದ್ರುದ್ದೀನ್ ಹೆಂತಾರ್

contributor

Editor - ಬದ್ರುದ್ದೀನ್ ಹೆಂತಾರ್

contributor

Similar News