ಅಜ್ಮಾನ್‌ನಲ್ಲಿ ಮಂಗಳೂರು ಪ್ರೀಮಿಯರ್ ಲೀಗ್ ಕ್ರಿಕೆಟ್: ಯೂನಿಕ್ ಸ್ಟ್ರೈಕರ್ ಭಟ್ಕಳ ಚಾಂಪಿಯನ್
ಅಜ್ಮಾನ್, ಎ.19: ಇಲ್ಲಿನ ಓವಲ್ ಗ್ರೌಂಡ್ ಸ್ಟೇಡಿಯಂನಲ್ಲಿ ನಡೆದ ಮೊದಲ ಆವೃತ್ತಿಯ ಗ್ಲೋಬ್‌ಲಿಂಕ್ ವೆಸ್ಟ್‌ಸ್ಟಾರ್ ಶಿಪ್ಪಿಂಗ್ ಎಲ್‌ಎಲ್‌ಸಿ ಮಂಗಳೂರು ಪ್ರೀಮಿಯರ್ ಲೀಗ್(ಎಂಪಿಎಲ್) ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಯೂನಿಕ್ ಸ್ಟ್ರೈಕರ್ ಭಟ್ಕಳ ಚೊಚ್ಚಲ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಯೂನಿಕ್ ಸ್ಟ್ರೈಕರ್ ಭಟ್ಕಳ ತಂಡ ಎಪ್ರಿಲ್ 14ರಂದು ನಡೆದ ಫೈನಲ್‌ನಲ್ಲಿ ವೆಲ್ಸ್ ಪ್ರಿನ್ಸ್ ಇಲೆವೆನ್ ಮಣಿಪಾಲ ತಂಡವನ್ನು 39 ರನ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಯೂನಿಕ್ ತಂಡದ ಇಸ್ತಿಯಾಕ್ ಹುಸೈನ್ 62 ರನ್(50ಎ, 6ಬೌ), ವಿಕ್ರಾಂತ್ ಶೆಟ್ಟಿ ಮತ್ತು ನೆವಿಲ್ಲೆ ಪೆರೆರಾ ತಲಾ ವಿಕೆಟ್ ಉಡಾಯಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗೆಲುವಿಗೆ 153 ರನ್‌ಗಳ ಸವಾಲನ್ನು ಪಡೆದ ವೆಲ್ಸ್ ಪ್ರಿನ್ಸ್ ಮಣಿಪಾಲ ತಂಡ 18.2 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಯೂನಿಕ್ ತಂಡದ ನಾಯಕ ವಿಕ್ರಾಂತ್ ಶೆಟ್ಟಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಸಂಕ್ಷಿಪ್ತ ಸ್ಕೋರ್ ವಿವರ
ಯೂನಿಕ್ ಸ್ಟ್ರೈಕರ್ ಭಟ್ಕಳ 20 ಓವರ್‌ಗಳಲ್ಲಿ 152/7(ಇಸ್ತಿಯಾಕ್ ಹುಸೈನ್ 62, ಉಬಾದ ಬ್ರಹ್ಮಾವರ 23, ಪ್ರಶಾಂತ್ ಬ್ರಾಗ್ಸ್ 20, ಸಂತೋಷ್ ಕೋಟ್ಯಾನ್ 19; ಮುಹಮ್ಮದ್ ಹಾರಿಸ್ 42ಕ್ಕೆ 2, ಅವಿನಾಶ್ ರಾವ್ 22ಕ್ಕೆ 1, ರಿಝ್ವೆನ್ ಅಹ್ಮದ್ 16ಕ್ಕೆ1).
ವೆಲ್ಸ್ ಪ್ರಿನ್ಸ್ ಮಣಿಪಾಲ 18.2 ಓವರ್‌ಗಳಲ್ಲಿ ಆಲೌಟ್ 113( ಅಭಿಷೇಕ್ ಕಾಂಚನ್ 52, ಫರ್ಹಾನ್ ಬ್ಯಾರಿ 18, ಜಯೇಶ್ ಸುವರ್ಣ 11; ವಿಕ್ರಾಂತ್ ಶೆಟ್ಟಿ 13ಕ್ಕೆ 4, ನೆವಿಲ್ಲೆ ಪಿರೇರ 19ಕ್ಕೆ 4, ನೆಲ್ಸನ್ ಪಿಂಟೊ 19ಕ್ಕೆ 1, ಉಬಾದ ಬ್ರಹ್ಮಾವರ 24ಕ್ಕೆ 1).
ಮ್ಯಾನ್ ಆಫ್ ಮ್ಯಾಚ್: ನೆವಿಲ್ಲಾ ಪಿರೇರ, ಯೂನಿಕ್ ಸ್ಟ್ರೈಕರ್ ಭಟ್ಕಳ.
ಮ್ಯಾನ್ ಆಫ್ ಸಿರೀಸ್: ವಿಕ್ರಾಂತ್ ಶೆಟ್ಟಿ ,ಯೂನಿಕ್ ಸ್ಟ್ರೈಕರ್ ಭಟ್ಕಳ.
ಬೆಸ್ಟ್ ಬೌಲರ್: ಒಸ್ವಿನ್ ಸಾವಿವೊ ರಾಬರ್ಟ್, ಕ್ರಾಸ್ಟೊ ಅಲ್ ಸಿತಾರಾ ಗಲ್ಫ್, ಕಾರ್ಕಳ.
ಬೆಸ್ಟ್ ಬ್ಯಾಟ್ಸ್‌ಮನ್: ಸಫ್ವಾನ್ ಶಾನು, ಎಎನ್‌ಐಬಿ ಇಲೆವೆನ್ ಆನ್ ಟಾಪ್ ಮೈಸೂರು ರಾಯಲ್ಸ್.