ಡಿ.ಕೆ.ಎಸ್.ಸಿ. ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಹುಸೈನ್ ಹಾಜಿ ಕಿನ್ಯ
ದುಬೈ, ಎ.20: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ.) ಯು.ಎ.ಇ. ರಾಷ್ಟ್ರೀಯ ಸಮಿತಿಯ ಮಹಾಸಭೆಯು ದುಬೈ ರಾಫಿ ಹೋಟೆಲ್ನ ಆಡಿಟೋರಿಯಂನಲ್ಲಿ ಇತ್ತೀಚೆಗೆ ಜರಗಿತು.
ಡಿ.ಕೆ.ಎಸ್.ಸಿ. ಸೆಂಟ್ರಲ್ ಕಮಿಟಿ ಹಾಗೂ ಮೂಳೂರಿನ ಮರ್ಕಝ್ ತಅ್ಲೀಮುಲ್ ಇಹ್ಸಾನ್‌ನ ಅಧ್ಯಕ್ಷ ಶೈಖುನಾ ಸೈಯದ್ ಕೆ.ಎಸಂ.ಆಟಕೋಯ ತಂಙಳ್ ಕುಂಬೋಳ್ ದುಆಗೈದರು. ಸೆಂಟ್ರಲ್ ಕಮಿಟಿಯ ಸಂಚಾಲಕ ಇಸ್ಮಾಯೀಲ್ ಹಾಜಿ ಕಿನ್ಯ ಸಭೆಯನ್ನು ಉದ್ಘಾಟಿಸಿದರು. ಹಾಜಿ ಎಂ.ಕೆ.ಬ್ಯಾರಿ ಕಕ್ಕಿಂಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸೆಂಟ್ರಲ್ ಕಮಿಟಿ ಅಧೀನದಲ್ಲಿರುವ ರಾಷ್ಟ್ರೀಯ ಹಾಗೂ ವಲಯ ಸಮಿತಿಗಳಲ್ಲಿ 2014-15ರಲ್ಲಿ ದ್ವಿತೀಯ ಸ್ಥಾನಕ್ಕೆ ಪಾತ್ರವಾದ ಯುಎಇ ರಾಷ್ಟೀಯ ಸಮಿತಿ ಯ ಅಧ್ಯಕ್ಷ ಹಾಜಿ ಎಂ.ಕೆ.ಬ್ಯಾರಿ ಕಕ್ಕಿಂಜೆಯವರಿಗೆ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು. ಸೈಯದ್ ಕೆ.ಎಸ್.ಆಟಕೋಯ ತಂಙಳ್, ಸಭೆಗೆ ಸೆಂಟ್ರಲ್ ಕಮಿಟಿಯ ಉಸ್ತುವಾರಿಯಾಗಿ ಆಗಮಿಸಿದ ಹಾತಿಂ ಕೂಳೂರು, ಸೆಂಟ್ರಲ್ ಕಮಿಟಿಯ ಮಾಜಿ ಕಾರ್ಯಾಧ್ಯಕ್ಷ ಇಸ್ಮಾಯೀಲ್ ಹಾಜಿ ಕಿನ್ಯ, ಸದಸ್ಯರಾದ ಶೇಕ್ ಬಳ್ಕುಂಜೆ, ಅಬ್ದುಲ್ ಅಝೀಝ್ ಮೂಳೂರುರನ್ನು ಇದೇ ಸಂದರ್ಭ ಸಾಲು ಹೊದಿಸಿ ಸನ್ಮಾನಿಸಲಾಯಿತು. ಗತ ವರ್ಷದ ವರದಿಯನ್ನು ಜೊತೆ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ವಾಚಿಸಿದರು. ಲೆಕ್ಕ ಪತ್ರವನ್ನು ಲೆಕ್ಕಪರಿಶೋಧಕ ಅಬ್ದುಲ್ಲ ಪೆರುವಾಯಿ ವಾಚಿಸಿದರು. ಅದರ ವಿವರಣೆಯನ್ನು ಕೋಶಾಧಿಕಾರಿ ಹುಸೈನ್ ಹಾಜಿ ಕಿನ್ಯ ಮಂಡಿಸಿದರು.
ಇದೇ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹಾತಿಂ ಕೂಳೂರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
2016-17ನೆ ಸಾಲಿನ ಪದಾಧಿಕಾರಿಗಳು
ಗೌರವಾಧ್ಯಕ್ಷರು: ಸೈಯದ್ ತ್ವಾಹಾ ಬಾಫಕಿ ತಂಙಳ್ ಮುಖ್ಯ ಸಲಹೆಗಾರರು: ಹಾಜಿ ಎಂ.ಕೆ.ಬ್ಯಾರಿ ಕಕ್ಕಿಂಜೆ
ಅಧ್ಯಕ್ಷರು: ಹುಸೈನ್ ಹಾಜಿ ಕಿನ್ಯ
ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್
ಕೋಶಾಧಿಕಾರಿ: ಇಬ್ರಾಹೀಂ ಹಾಜಿ ಕಿನ್ಯ
ಸಂಘಟನಾ ಕಾರ್ಯದರ್ಶಿ: ಎಸ್.ಯೂಸುಫ್ ಅರ್ಲಪದವು
ಉಪಾಧ್ಯಕ್ಷರು: ಹಾಜಿ ಎಂ.ಇ.ಮೂಳೂರು, ಅಬ್ದುಲ್ಲತೀಫ್ ಮುಲ್ಕಿ, ಹಾಜಿ ಮುಹಮ್ಮದ್ ಕುಂಞಿ ಅಡ್ಕ, ಅಬ್ದುರ್ರಝಾಕ್ ಹಾಜಿ ನಾಟೆಕಲ್, ಹಸನಬ್ಬ ಕೊಲ್ನಾಡ್, ಹಾಜಿ ಎಸ್.ಕೆ.ಅಬ್ದುಲ್ ಖಾದರ್ ಉಚ್ಚಿಲ.
ಜೊತೆ ಕಾರ್ಯದರ್ಶಿಗಳು: ಕಮಲ್ ಅಜ್ಜಾವರ, ಕಮರುದ್ದೀನ್ ಗುರುಪುರ, ಬದ್ರುದ್ದೀನ್ ಹೆಂತಾರ್, ಇ.ಕೆ.ಇಬ್ರಾಹೀಂ ಕಿನ್ಯ, ನವಾಝ್ ಕೋಟೆಕ್ಕಾರ್.
ಲೆಕ್ಕ ಪರಿಶೋಧಕರು: ಅಬ್ದುಲ್ಲ ಪೆರುವಾಯಿ
ಕಚೇರಿ ಕಾರ್ಯದರ್ಶಿ: ಸಮೀರ್ ಕಲ್ಲಾರೆ ಸಂಚಾಲಕರು: ಮುಹಮ್ಮದ್ ಶುಕೂರ್ ಮಣಿಲ, ಅಬ್ದುರ್ರಹ್ಮಾನ್ ಸಜಿಪ, ರಫೀಕ್ ಅತೂರು, ಹಾಜಿ ಅಬ್ದುರ್ರಝಾಕ್ ಜಲ್ಲಿ, ಅಬ್ದುಲ್ಲ ಹಾಜಿ ಬೀಜಾಡಿ, ಹಾಜಿ ಅಬ್ದುರ್ರಹ್ಮಾನ್ ಸಂಟ್ಯಾರ್, ಇಕ್ಬಾಲ್ ಕುಂದಾಪುರ, ಹನೀಫ್ ಅರ್ಯಮೂಲೆ, ರಝಾಕ್ ಮುಟ್ಟಿಕಲ್, ಹಾಜಿ ಎಸ್.ಕೆ.ಅಬ್ದುಲ್ ಖಾದರ್ ಉಚ್ಚಿಲ.
ಸಲಹೆಗಾರರು: ಇಬ್ರಾಹೀಂ ಸಖಾಫಿ ಕೆದಂಬಾಡಿ, ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು, ಸೈಯದ್ ಅಸ್ಗರ್ ಅಲಿ ತಂಙಳ್ ಕೋಲ್ಪೆ, ಅಬೂಬಕರ್ ಮದನಿ ಕೆಮ್ಮಾರ ಆಯ್ಕೆಯಾದರು.
ವೇದಿಕೆಯಲ್ಲಿ ಇಸ್ಮಾಯೀಲ್ ಹಾಜಿ ಕಿನ್ಯ, ಶೇಕ್ ಬಳ್ಕುಂಜೆ, ಅಬ್ದುಲ್ ಅಝೀಝ್ ಮೂಳೂರು, ಸೈಯದ್ ಅಸ್ಗರ್ ಅಲಿ ತಂಙಳ್ ಕೋಲ್ಪೆ, ಅಬೂಬಕರ್ ಮದನಿ ಕೆಮ್ಮಾರ, ಇಬ್ರಾಹೀಂ ಸಖಾಫಿ ಕೆದಂಬಾಡಿ, ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗೇರು, ಹಾಜಿ ಎಂ.ಇ.ಮೂಳೂರು, ಮುಹಮ್ಮದ್‌ಇಕ್ಬಾಲ್ ಕಣ್ಣಂಗಾರ್, ಹುಸೈನ್ ಹಾಜಿ ಕಿನ್ಯ ಉಪಸ್ಥಿತರಿದ್ದರು.
ಇಬ್ರಾಹೀಂ ಹಾಜಿ ಕಿನ್ಯ ಕಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ ಸ್ವಾಗತಿಸಿದರು. ಎಸ್.ಯೂಸುಫ್ ಅರ್ಲಪದವು ವಂದಿಸಿದರು. ಜೊತೆ ಕಾರ್ಯದರ್ಶಿ ಕಮಲ್ ಅಜ್ಜಾವರ ಕಾರ್ಯಕ್ರಮ ನಿರ್ವಹಿಸಿದರು.
ವರದಿ: ಎಸ್.ಯೂಸುಫ್ ಅರ್ಲಪದವು