ಬೆಲೆಯೇರಿಕೆ: ಸೌದಿ ಸಚಿವರನ್ನು ವಜಾಗೊಳಿಸಿದ ದೊರೆ
Update: 2016-04-24 20:00 IST
ರಿಯಾದ್, ಎ. 24: ಬೆಲೆಯೇರಿಕೆ ಬಗ್ಗೆ ಸಾರ್ವಜನಿಕರ ಆಕ್ರೋಶ ಮೇರೆ ಮೀರುತ್ತಿರುವಂತೆಯೇ, ಸೌದಿ ಅರೇಬಿಯದ ನೀರು ಮತ್ತು ವಿದ್ಯುತ್ ಸಚಿವ ಅಬ್ದುಲ್ಲಾ ಅಲ್ ಹುಸೈನ್‌ರನ್ನು ದೊರೆ ಸಲ್ಮಾನ್ ವಜಾಗೊಳಿಸಿದ್ದಾರೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ.
ಅಲ್ ಹುಸೈನ್‌ರನ್ನು ವಜಾಗೊಳಿಸಿರುವ ಹಾಗೂ ಅವರ ಸ್ಥಾನದಲ್ಲಿ ತಾತ್ಕಾಲಿಕವಾಗಿ ಕೃಷಿ ಸಚಿವ ಅಬ್ದುಲ್ ರಹಮಾನ್ ಅಲ್-ಫದ್ಲಿಯನ್ನು ನೇಮಿಸಿರುವ ಆದೇಶವನ್ನು ದೊರೆ ಶನಿವಾರ ಹೊರಡಿಸಿದರು.
ನೀರಿನ ದರ ಏರಿಕೆಯಾಗಿದೆ ಎಂಬುದಾಗಿ ಸಾರ್ವಜನಿಕರು ದೂರಿದಾಗ, ತಮ್ಮದೇ ಸ್ವಂತ ಬಾವಿಯನ್ನು ತೋಡಲು ಅನುಮತಿ ಪಡೆದುಕೊಳ್ಳುವಂತೆ ಹುಸೈನ್ ನಾಗರಿಕರಿಗೆ ಕರೆ ನೀಡಿದ್ದರು ಎಂದು ಮಾರ್ಚ್‌ನಲ್ಲಿ ‘ಅರಬ್ ನ್ಯೂಸ್’ ದೈನಿಕ ವರದಿ ಮಾಡಿತ್ತು.