ದುಬೈ: ಶೈಖುನಾ ಸಯ್ಯದ್ ಕೆ.ಯಸ್.ಆಟ್ಟಕೋಯ ತಂಙಳ್ ಕುಂಬೋಲ್ ರವರಿಗೆ ಡಿ.ಕೆ.ಎಸ್.ಸಿ ವತಿಯಿಂದ ಸನ್ಮಾನ
ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಮಹಾ ಸಭೆಗೆ ಆಗಮಿಸಿದ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಹಾಗೂ ಮರ್ಕಾಜ್ ತಅಲೀಮುಲ್ ಇಹ್ಸಾನ್ ಮುಳೂರು ಇದರ ಅಧ್ಯಕ್ಷರಾದ ಶೈಖುನಾ ಸಯ್ಯದ್ ಕೆ.ಯಸ್.ಆಟ್ಟಕೋಯ ತಂಙಳ್ ಕುಂಬೋಲ್ ರವರನ್ನು ದೇರಾ ರಾಫಿ ಹೋಟೆಲ್ ಆಡಿಟೋರಿಯಂ ನಲ್ಲಿ ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟ್ರೀಯ ಸಮಿತಿ ಅದ್ಯಕ್ಷರಾದ ಜನಾಬ್. ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ ಯವರ ಅದ್ಯಕ್ಷತೆಯಲ್ಲಿ ನಡೆದ ಮಹಾ ಸಭೆ ಯಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಡಿ.ಕೆ.ಎಸ್.ಸಿ. ಯು.ಎ.ಇ ರಾಷ್ಟ್ರೀಯ ಸಮಿತಿ ನೂತನ ಅಧ್ಯಕ್ಷರಾದ ಹುಸೈನ್ ಹಾಜಿ ಕಿನ್ಯ , ಉಪಾದ್ಯಕ್ಷರಾದ ಅಬ್ದುಲ್ ಲತೀಪ್ ಮುಲ್ಕಿ , ಹಾಜಿ.ಅಬ್ದುಲ್ ರಜಾಕ್ ನಾಟೆಕಲ್, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ , ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ , ಸಲಹೆಗಾರರಾದ ಸಯ್ಯದ್ ಅಸ್ಗರ್ ಅಲಿ ತಂಙಳ್, ಅಬ್ದುಲ್ಲ ಮುಸ್ಲಿಯಾರ್ ಕುಡ್ತಮುಗೇರು, ಸೆಂಟ್ರಲ್ ಕಮಿಟಿ ಮಾಜಿ ಕಾರ್ಯಾಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಕಿನ್ಯ , ಸಂಘಟನಾ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ಉಪಸ್ತಿತಿತರಿದ್ದರು.