ಎ.29ರಂದು ದುಬೈಯಲ್ಲಿ ಕೆಸಿಎಫ್ ಯುಎಇ ಅಸ್ಸುಫ್ಫಾ ಪ್ರಶಸ್ತಿ ಪ್ರದಾನ ಸಮಾರಂಭ
ದುಬೈ, ಎ.28: ಯುಎಇಯಾದ್ಯಂತ ಕಳೆದ ಆರು ತಿಂಗಳುಗಳಿಂದ ಚಾಲ್ತಿಯಲ್ಲಿದ್ದ ಸಿಲಬಸ್ ಆಧಾರಿತ ಪ್ರಥಮ ಹಂತದ ಅಸ್ಸುಫ್ಫಾ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಧ್ಯಾರ್ಥಿಗಳಿಗೆ ಮತ್ತು ಅಸ್ಸುಫ್ಫಾ ತರಗತಿ ನಡೆಸಿದ ಬೋಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಎ.29ರಂದು ಸಂಜೆ 6.30ಕ್ಕೆ ದುಬೈ ಅಬೂ ಹೈಲ್ ನಲ್ಲಿರುವ ಐಸಿಎಫ್ ಸಭಾಂಗಣದಲ್ಲಿ ನಡೆಯಲಿದೆ.
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ (ಐಎನ್ಸಿ) ಅದ್ಯಕ್ಷ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಹಸನುಲ್ ಅಹ್ದಲ್ ತಂಙಳ್ (ದಾರುಲ್ ಹುದಾ ತಂಬಿನಮಕ್ಕಿ ಬೆಳ್ಳಾರೆ), ಸೈಯದ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ (ಮುದರ್ರಿಸ್ ಕಾಜೂರು), ಅಸ್ಸಯ್ಯಿದ್ ಇಸ್ಮಾಯಿಲ್ ಹಾದೀ ತಂಘಳ್ ಉಜಿರೆ (ಅಧ್ಯಕ್ಷರು ಮರ್ಕಝುಲ್ ಹುದಾ ಕುಂಬ್ರ), ಬಹು ಮಹಮೂದುಲ್ ಫೈಝಿ ವಾಲೆಮಂಡೂವು (ಅಧ್ಯಕ್ಷರು ದಾರುಲ್ ಅಶ್ಅರಿಯ್ಯ ಸುರಿಬೈಲು), ಬಹು ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ (ಉಪಾಧ್ಯಕ್ಷರು, ಕೆಸಿಎಫ್ ಐ ಎನ್ ಸಿ), ಬಹು ಅಬ್ದುಲ್ ಹಮೀದ್ ಸಅದಿ (ಅಧ್ಯಕ್ಷರು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ), ಜನಾಬ್ ಶೈಖ್ ಬಾವ ಹಾಜಿ ಅಬೂಧಾಬಿ (ಪ್ರಧಾನ ಕಾರ್ಯದರ್ಶಿ ಕೆಸಿಎಫ್ ಐ ಎನ್ ಸಿ), ಉಸ್ಮಾನ್ ಹಾಜಿ ನಾಪೋಕ್ಲು (ಪ್ರಧಾನ ಕಾರ್ಯದರ್ಶಿ ಯುಎಇ), ಪಿಎಂಹೆಚ್ ಅಬ್ದುಲ್ ಹಮೀದ್ ಈಶ್ವರಮಂಗಳ (ಅಧ್ಯಕ್ಷರು ಸಂಘಟನಾ ವಿಭಾಗ ಕೆಸಿಎಫ್ ಯುಎಇ) ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕೆಸಿಎಫ್ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಪ್ರಕನೆಯಲ್ಲಿ ತಿಳಿಸಿದ್ದಾರೆ.