×
Ad

ಯು.ಎ.ಇ, ಇ-ವೀಸಾ ಜಾರಿ: ವಿದೇಶಿಯರು ಗೊಂದಲದಲ್ಲಿ!

Update: 2016-05-01 11:47 IST

ಮಸ್ಕತ್ ,ಮೆ. 1; ಯುಎಇಗೆ ಪ್ರಯಾಣಿಸುವ ವಿದೇಶಿಯರಿಗೆ ಇ-ವೀಸಾ ಶುಕ್ರವಾರದಿಂದ ಜಾರಿಗೆ ಬಂದಿದ್ದು ವ್ಯಾಪಾರಾರ್ಥ ಪ್ರಯಾಣಿಸು ವವರು ಗೊಂದಲಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ. ಹೊಸ ಸಂಪ್ರದಾಯದ ಜಾರಿಗೆ ಬಂದನಂತರ ನಿರಂತರ ಪ್ರವಾಸ ನಡೆಸುವ ವಿದೇಶಿಯರು ಪ್ರಯಾಣದಿಂದ ದೂರ ಉಳಿದಿದ್ದಾರೆ. ಪರಿಸ್ಥಿತಿ ಸಾಮಾನ್ಯವಾದ ನಂತರ ಪ್ರಯಾಣ ಬೆಳೆಸುವ ನಿರ್ಧಾರವನ್ನು ಅವರು ತಡೆದಿದ್ದಾರೆ.

ತುರ್ತಾಗಿ ಹೋಗಬೇಕಿದ್ದವರು ಇ- ವೀಸಾ ಅರ್ಜಿ ಹಾಕಿಕೊಂಡಿದ್ದರೂ ವೀಸಾ ದೊರಕಿಲ್ಲವೆನ್ನಲಾಗಿದ್ದು ಅವರು ಹಣ ಕಳದುಕೊಂಡಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಇ-ವೀಸಾ ಇಲ್ಲದೆ ಪ್ರಯಾಣಿಸುವಂತಿಲ್ಲ. ಆದ್ದರಿಂದ ಕೆಲವರು ಯುಎಇ ಪ್ರಯಾಣವನ್ನೇ ಸ್ಥಗಿತಗೊಳಿಸಿದ್ದಾರೆ. ಆದರೆ ಇ- ವೀಸಾ ಎರಡೇ ದಿವಸಗಳಲ್ಲಿ ತನಗೆ ದೊರೆಕಿತೆಂದು ಖಾಸಗಿ ಕಂಪೆನಿಯೊಂದರ ಉದ್ಯೋಗಿ ಸುಹೈಲ್ ಎಂಬವರು ತಿಳಿಸಿದ್ದಾರೆ.

ಯುಎಇ ವೀಸಾಕ್ಕೆ ಜೆಪಿಜಿ ಫಾರ್ಮೆಟ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಇದನ್ನು ನಿಶ್ಚಿತ ಕ್ರಮದಲ್ಲಿ ಅಪ್‌ಲೋಡ್ ಮಾಡಿದರೆ ಮಾತ್ರವೇ ಅರ್ಜಿಅನ್ನು ಸ್ವೀಕರಿಸಲಾಗತ್ತದೆ. ವೆಬ್‌ಸೈಟ್‌ನಲ್ಲಿ ಪ್ರೊಫೆಶನ್‌ನ ಕಾಲಂ ಇದೆ. ಅದರಲ್ಲಿ ಇರುವ ಪ್ರೊಫೆಶನಲ್ ಇರುವವರು ಮಾತ್ರವೇ ವೀಸಾಕ್ಕೆ ಅರ್ಜಿಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News