×
Ad

ಬಿನ್ ಲಾದನ್ ಕಂಪೆನಿಯ ಬಸ್ಸುಗಳಿಗೆ ನೌಕರರಿಂದ ಬೆಂಕಿ

Update: 2016-05-01 18:56 IST

ಜಿದ್ದಾ , ಮೇ 1 :ಕಳೆದ ಹಲವು ತಿಂಗಳುಗಳಿಂದ ಸರಿಯಾಗಿ ವೇತನ ನೀಡದೆ ಈಗ ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡುತ್ತಿದೆ ಎಂದು ಹೇಳಲಾಗಿರುವ  ಬೃಹತ್ ಬಿನ್ ಲಾದನ್ ಕಂಪೆನಿಯ ನೌಕರರು ಕಂಪೆನಿಯ ಏಳು ಬಸ್ಸುಗಳಿಗೆ ಬೆಂಕಿ ಹಚ್ಚಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. 

ಮಕ್ಕಾ ನಾಗರಿಕ ಸುರಕ್ಷತಾ ವಿಭಾಗದ ವಕ್ತಾರರ ಪ್ರಕಾರ ಬೆಂಕಿಯನ್ನು ನಂದಿಸಲಾಗಿದ್ದು , ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಕೆಲಸಗಾರರ ವಜಾ ಹಾಗು ಆ ಬಳಿಕದ ವಿವಾದದ ಕುರಿತು ಬಿನ್ ಲಾದನ್ ಕಂಪೆನಿ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ . ದೊಡ್ಡ ಸಂಖ್ಯೆಯಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು ಕಳೆದ ಹಲವು ತಿಂಗಳು ಗಳಿಂದ ನಮಗೆ ಸಂಬಳ ನೀಡಿಲ್ಲ ಎಂದು ದೂರುತ್ತಿದ್ದಾರೆ. ಕಂಪೆನಿ ಇತ್ತೀಚಿಗೆ 50,000 ವಲಸಿಗ ಕಾರ್ಮಿಕರನ್ನು ವಜಾ ಮಾಡಿ ಎಕ್ಸಿಟ್ ವಿಸಾ ನೀಡಿದೆ ಎಂಬ ಪತ್ರಿಕಾ ವರದಿಗಳ ನಡುವೆಯೇ ಈ ಬೆಂಕಿ ಹಚ್ಚಿದ ಘಟನೆ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News