ಒಮನ್: ಅಂಗಡಿಯಿಂದ ಹಣದೋಚುತ್ತಿದ್ದ ಪಾಕಿಸ್ತಾನಿಯ ಸೆರೆ

Update: 2016-05-03 10:39 GMT

ಸಲಾಲ ಮೆ 3: ಅಂಗಡಿಯವರ ಗಮನವನ್ನು ಬೇರೆಡೆಗೆ ತಿರುಗಿಸಿ ಹಣ ದೋಚುತ್ತಿದ್ದ ಪಾಕಿಸ್ತಾನಿ ತಂಡದ ಓರ್ವನನ್ನು ಸೋಮವಾರ ಬೆಳಗ್ಗೆ ನ್ಯೂಸಲಾಲದ ಅಂಗಡಿಯೊಂದರಲ್ಲಿ ವಂಚನೆ ಶ್ರಮಿಸುತ್ತಿರುವ ವೇಳೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ. ತಂಡದ ಇನ್ನಿಬ್ಬರು ಓಡಿ ಪಾರಾಗಿದ್ದಾರೆ. ವಂಚನೆಗೆ ಶ್ರಮಿಸಿದ ಅಂಗಡಿ ಕಟ್ಟ ಸಾಮಗ್ರಿಗಳ ಅಂಗಡಿಯಾಗಿದ್ದು ಅದು ಪಾಕಿಸ್ತಾನಿಯನ ಮಾಲಕತ್ವಕ್ಕೆ ಸೇರಿದ್ದಾಗಿದೆ ಎಂದು ವರದಿಗಳು ತಿಳಿಸಿವೆ.

ಎರಡು ದಿವಸ ಮೊದಲು ಸಲಾಲ ಚೌಕದಲ್ಲಿರುವ ಕೇರಳ ವ್ಯಕ್ತಿಯ ಇಲೆಕ್ಟ್ರಾನಿಕ್ಸ್ ಅಂಗಡಿಯಿಂದ ಐವತ್ತು ರಿಯಲ್‌ನನ್ನು ಕದ್ದು ಪರಾರಿಯಾಗಿದ್ದರು. ಈ ಅಂಗಡಿಯ ಮಾಲಕ ನ್ಯೂ ಸಲಾಲದ ಫಾಸ್ಟ್‌ಫುಡ್‌ನ ವ್ಯಪಾರಸ್ಥ ಸಿಸಿಟಿವಿಯ ದೃಶ್ಯಗಳನ್ನು ಹಲವರಿಗೆ ಕಳುಹಿಸಿಕೊಟ್ಟಿದ್ದರು. ಇದು ಆರೋಪಿಗಳನ್ನು ಹಿಡಿಯಲು ಸಹಕಾರಿಯಾಯಿತು. ಕಳ್ಳರು ಸೆರೆಯಾದ ವಿಷಯ ತಿಳಿದ ಇವರಿಂದ ವಂಚನೆಗೊಳಗಾದ ಆರುಮಂದಿ ಅಂಗಡಿ ಮಾಲಕರು ಪೊಲೀಸ್‌ಠಾಣೆಗೆ ಭೇಟಿ ನೀಡಿದ್ದಾರೆ. ಐವತ್ತು ರಿಯಾಲ್‌ನ ನೋಟು ಕೊಟ್ಟು ಐದು ರೂಪಾಯಿಯ ಸಾಮಾನು ಖರೀದಿಸಿ  ಅಂಗಡಿಯಾತ ಚಿಲ್ಲರೆ ಕೊಟ್ಟ ತಾವು ಖರೀದಿಸಿದ ವಸ್ತು ಸರಿಯಿಲ್ಲ ಎಂದು ಹೇಳಿ ಪುನಃ ಐವತ್ತು ರಿಯಾಲ್‌ನ್ನು ಪಡೆಯುವಷ್ಟು ನಿಸ್ಸೀಮತನದಿಂದ ಇವರು ಕಳ್ಳತನ ನಡೆಸುತ್ತಿದ್ದರು. ಕೌಂಟರ್‌ನಿಂದ ನೇರವಾಗಿ ಹಣ ತೆಗೆಯುವಷ್ಟು ಚಾಲಾಕಿತನ ತೋರಿಸುತ್ತಿದ್ದರು.

ನಿನ್ನೆ ಹಿಡಿದಿದ್ದ ಕಳ್ಳನನ್ನು ಪೊಲೀಸರಿಗೆ ಕೊಡದೆ ಮರಳಿಸುವುದಾದರೆ 1000ರೂಪಾಯಿ ಕೊಡುತ್ತೇವೆ ಎಂದು ಪಾಕಿಸ್ತಾನಿ ಅಂಗಡಿ ಮಾಲಕನಿಗೆ ಫೋನ್ ಮಾಡಿ ತಪ್ಪಿಸಿಕೊಂಡವರಲ್ಲೊಬ್ಬ ಹೇಳಿದ್ದ. ಆದರೆ ಅಂಗಡಿ ಮಾಲಕ ಹಿಡಿದ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕಳ್ಳರ ತಂಡದಲ್ಲಿ ಎಂಟು ಮಂದಿ ಇರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News