ಮಳೆ ಬರಿಸಲು ಪರ್ವತ ನಿರ್ಮಿಸಲಿದೆಯೇ ಯುಎಇ ?

Update: 2016-05-03 11:47 GMT

ದುಬೈ : ಬೃಹತ್ ಯೋಜನೆಗಳನ್ನು ಜಾರಿಗೊಳಿಸುವುದರಲ್ಲಿಸಂಯುಕ್ತ ಅರಬ್ ಸಂಸ್ಥಾನ ಯವತ್ತೂ ಎತ್ತಿದ ಕೈ. ಅದು ವಿಶ್ವದ ಅತ್ಯಂತ ಎತ್ತರದ ಬುರ್ಜ್ ಖಲೀಫಾ ಇರಲಿ ಅಥವಾ ತಾಳೆ ಮರದ ಆಕಾರದಲ್ಲಿರುವ ಹಾಗೂ ಸಾಗರದತ್ತ ವಿಸ್ತರಿಸಿರುವ ಪಾಲ್ಮ್ ಜುಮೇರಾಹ್ ಇರಲಿ, ಎಲ್ಲ ಯೋಜನೆಗಳೂ ವಿಶ್ವದಾದ್ಯಂತ ಜನರನ್ನು ಸೆಳೆಯುತ್ತಿವೆ.

ಇದೀಗ ಬಂದ ಮಾಹಿತಿಯ ಪ್ರಕಾರ ಸಂಯುಕ್ತ ಅರಬ್ ಸಂಸ್ಥಾನ ಇನ್ನೊಂದು ಮಹತ್ವಾಕಾಂಕ್ಷೆಯ ಯೋಜನೆಗೆ ಕೈಹಾಕುವ ಬಗ್ಗೆ ಯೋಚಿಸುತ್ತಿದೆ. ಈ ಯೋಜನೆಯ ಇನ್ನೊಂದು ಮುಖ್ಯ ಉದ್ದೇಶ ಬಳೆ ಬರಿಸುವುದಾಗಿದೆ.

ದುಬೈ ಮೂಲದ ಅರೇಬಿಯನ್ ಬಿಸಿನೆಸ್ ಪತ್ರಿಕೆಯ ಪ್ರಕಾರ ಸಂಯುಕ್ತ ಅರಬ್ ಸಂಸ್ಥಾನ ಮಾನವ ನಿರ್ಮಿತ ಪರ್ವತವೊಂದನ್ನು ರಚಿಸಬಹುದೇ ಹಾಗೂ ಇದರಿಂದ ಹೆಚ್ಚು ಮಳೆ ಬರಿಸಬಹುದೇ ಎಂಬುದರ ಬಗ್ಗೆ ಅಧ್ಯಯನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಅದು ಅಮೇರಿಕಾದ ನ್ಯಾಷನಲ್ ಸೆಂಟರ್ ಫಾರ್ ಎಟ್ಮಾಸ್ಫೆರಿಕ್ ರಿಸರ್ಚ್ ಇಲ್ಲಿನ ತಜ್ಞರನ್ನು ಸಂಪರ್ಕಿಸಿದೆ. ಈ ಯೋಜನೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಪ್ರಥಮ ಹಂತದ ವರದಿಯನ್ನು ನಾವು ಸದ್ಯದಲ್ಲಿಯೇ ತಯಾರಿಸಲಿದ್ದೇವೆ, ಎಂದು ಸೆಂಟರಿನ ರೋಲೊಫ್ ಬ್ರುಂಜ್ಟೀಸ್ ತಿಳಿಸಿದ್ದಾರೆಂದು ಅರಬ್ ಬಿಸಿನೆಸ್ ವರದಿ ಮಾಡಿದೆ.

ಸಂಯುಕ್ತ ಅರಬ್ ಸಂಸ್ಥಾನದಲ್ಲಿ ವರ್ಷದಲ್ಲಿ ಕೆಲವೇ ಕೆಲವು ದಿನಗಳು ಮಾತ್ರ ಮಳೆ ಬರುತ್ತಿದ್ದುಹೆಚ್ಚಿನ ವರ್ಷಗಳಲ್ಲಿ 5 ಇಂಚಿಗಿಂತ ಹೆಚ್ಚು ಮಳೆ ಇಲ್ಲಿ ದಾಖಲಾಗುವುದಿಲ್ಲ. ಇದರಿಂದ ದುಬೈದಂತಹ ನಗರದಲ್ಲಿನೀರಿನ ಕೊರತೆ ಎದುರಾಗುತ್ತಿದ್ದು ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿರುವ ಈ ನಗರಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಿದೆ,

ಸಾಮಾನ್ಯವಾಗಿ ಪರ್ವತ ಶ್ರೇಣಿಗಳಿರುವ ಪ್ರದೇಶಗಳು ಹೆಚ್ಚು ಮಳೆ ತರುತ್ತವೆಯಾದುದರಿಂದ ಮಾನವ ನಿರ್ಮಿತ ಪರ್ವತದಿಂದ ಮಳೆ ತರಬಹುದೇ ಎಂಬುದೇ ಈಗ ಪ್ರಶ್ನೆಯಾಗಿದೆ.ಈ ಹಿಂದೆ ನೆದರ್ ಲ್ಯಾಂಡ್ ನಲ್ಲಿ ಕೂಡ 1.2 ಮೈಲು ಎತ್ತರದ ಪರ್ವತ ನಿರ್ಮಿಸಬಹುದೆಂದು ಹೇಳಲಾಯಿತಾದರೂ ಅದನ್ನು ನಿರ್ಮಿಸುವ ವೆಚ್ಚ 230$ ಬಿಲಿಯನ್ ಆಗಬಹುದೆಂದು ಅಂದಾಜಿಲಸಾಗಿತ್ತು.

ಪರ್ವತ ನಿರ್ಮಿಸಬಹುದೇ ಎಂಬುದನ್ನು ತಿಳಿಯಲೆಂದೇ ಸಂಯುಕ್ತ ಅರಬ್ ಸಂಸ್ಥಾನ ಇಲ್ಲಿಯ ತನಕ 4,00,000$ ವ್ಯಯಿಸಿದ್ದು, ಪರ್ವತ ನಿರ್ಮಿಸುವ ವೆಚ್ಚವನ್ನುಈ ದೇಶಕ್ಕೆ ಭರಿಸಲು ಸಾಧ್ಯವಾಗಬಹುದೇ ಎಂಬುದು ಈಗ ಪ್ರಶ್ನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News