ಬಿನ್ ಲಾದೆನ್ ಕಂಪೆನಿಯಿಂದ ಸಂಬಳ ಚುಕ್ತಾ ಮಾಡಿಸಲು ಸರಕಾರದಿಂದ ಕ್ರಮ

Update: 2016-05-03 18:24 GMT

ರಿಯಾದ್, ಮೇ 3: ವಿಶ್ವದ ಅತೀ ದೊಡ್ಡ ಕನ್‌ಸ್ಟ್ರಕ್ಷನ್ ಕಂಪೆನಿ ಬಿನ್ ಲಾದಿನ್ ಗ್ರೂಪ್‌ನ ತನ್ನ ವಿದೇಶಿ ನೌಕರರಿಗೆ ಕೊಡದೇ ಬಾಕಿಯುಳಿಸಿರುವ ವೇತನವನ್ನು ಶೀಘ್ರವೇ ಇತ್ಯರ್ಥ ಗೊಳಿಸುವುದಾಗಿ ಖಾತರಿ ಪಡಿಸಿದೆಯೆಂದು ಸೌದಿ ಕಾರ್ಮಿಕ ಸಚಿವ ಮುಫ್ಫರಾಜ್ ಅಲ್ ಹಖ್ಬಾನಿ ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ಸೌದಿ ಅರೇಬಿಯಾ ಸುದ್ದಿ ಪತ್ರಿಕೆಗಳು ಬಿನ್ ಲಾದಿನ್ ಕನ್‌ಸ್ಟ್ರಕ್ಷನ್ ಕಂಪೆನಿ ವಿದೇಶಿ ನೌಕರರ ವೇತನ ನೀಡದಿರುವ ಬಗ್ಗೆ ಸುದ್ದಿಯನ್ನು ಪ್ರಕಟಿಸಿತ್ತು. ವೇತನಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದು ಕಂಪೆನಿ ಭರವಸೆ ನೀಡಿದೆ ಎಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಯುರೋಮಣಿ ಸಮಾವೇಶದಲ್ಲಿ ಸೌದಿ ಕಾರ್ಮಿಕ ಸಚಿವ ಮುಫ್ಫರಾಜ್ ಅಲ್ ಹಖ್ಬಾನಿ ತಿಳಿಸಿದ್ದಾರೆ.

   ‘ಎಷ್ಟು ನೌಕರರಿಗೆ ತೊಂದರೆಯಾಗಿದೆ ಎಂಬುವುದನ್ನು ಸಚಿವರು ದೃಡಪಡಿಸಿಲ್ಲ ಆದರೆ ಸೌದಿ ರಾಜ್ಯಭಾರ ವೇತನ ರಕ್ಷಣಾ ವ್ಯವಸ್ಥೆಯ ಮೂಲಕ ನೌಕರರಿಗೆ ವೇತನವನ್ನು ನೀಡುವುದೇ ಮೊದಲ ಪ್ರಾಶಸ್ತ್ಯವಾಗಿದೆ’ ಎಂದು ತಿಳಿಸಿದ್ದಾರೆ. ಒಂದು ವೇಳೆ ಕಂಪೆನಿ ನೌಕರರ ವೇತನ ನೀಡುವಲ್ಲಿ ವಿಳಂಬ ಕಂಡು ಬಂದಲ್ಲಿ ನಮ್ಮ ನಿರೀಕ್ಷಕರನ್ನು ಕಳುಹಿಸಿಲಾಗುವುದು ಎಂದು ಸಚಿವರಾದ ಮುಫ್ಫರಾಜ್ ಅಲ್ ಹಖ್ಬಾನಿ ತಿಳಿಸಿದ್ದಾರೆ.

‘ಒಂದು ವೇಳೆ ನೌಕರರು ದೇಶವನ್ನು ತೊರೆದರೂ ವೇತನವನ್ನು ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಳ್ಳಲು ಸಾಧ್ಯವಿಲ್ಲ, ಕಾರ್ಮಿಕ ಸಚಿವಾಲಯವು ಎಲ್ಲಾ ನೌಕರರಿಗೂ ವೇತನ ದೊರೆಯುವ ವರೆಗೂ ನಿರಂತರವಾಗಿ ಈ ಬಗ್ಗೆ ಗಮನಹರಿಸಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್ ಕ್ರೈನ್ ದುರಂತಕ್ಕೆ ಸಂಬಂಧಿಸಿದಂತೆ ಸೌದಿ ಬಿನ್ ಲಾದಿನ್ ಕನ್‌ಸ್ಟ್ರಕ್ಷನ್ ಕಂಪೆನಿಯನ್ನು ಸಾರ್ವಜನಿಕ ಗುತ್ತಿಗೆಯಿಂದ ಸೌದಿ ಸರಕಾರ ಅಮಾನತುಗೊಳಿಸಿತ್ತು. ಈ ನಡುವೆ ಸೌದಿ ಮತ್ತೊಂದು ದೈತ್ಯ ಕಂಪೆನಿಯಾ ಸೌದಿ ಯೋಗರ್ ಲಿ.ನ ನೌಕರರು ಕೂಡ ವೇತನ ಬಾಕಿಯುಳಿಸಿರುವ ಬಗ್ಗೆ ಅಳವತ್ತುಕೊಂಡಿರುವುದಾಗಿ ತಿಳಿದು ಬಂದಿದೆ.,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News