ಕಣ್ಣೀರಿಟ್ಟ ಸೌದಿ ದೊರೆ ಸಲ್ಮಾನ್

Update: 2016-05-04 11:19 GMT

ರಿಯಾದ್, ಮೇ 4: ತನ್ನ ಓರ್ವ ಪುತ್ರನ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಸೌದಿ ಅರೇಬಿಯದ ದೊರೆ ಸಲ್ಮಾನ್‌ರಿಗೆ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲಾಗದೆ ಒಂದು ಕ್ಷಣ ಗದ್ಗದಿತರಾದರು.

ಅವರ ಪುತ್ರ ರಾಜಕುಮಾರ ರಾಕನ್ ತನ ಹೈಸ್ಕೂಲ್ ವಿದ್ಯಾಭ್ಯಾಸವನ್ನು ರಿಯಾದ್‌ನಲ್ಲಿ ಪೂರ್ತಿಗೊಳಿಸಿದ್ದಾರೆ.

‘‘ರಾಕನ್‌ನ ತಂದೆಯಾಗಿ ಮಾತ್ರವಲ್ಲ, ಎಲ್ಲ ವಿದ್ಯಾರ್ಥಿಗಳ ತಂದೆಯಾಗಿ ನಾನು ಈ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ’’ ಎಂದು ತನ್ನ ಭಾಷಣದಲ್ಲಿ ದೊರೆ ಸಲ್ಮಾನ್ ಹೇಳಿದರು.

ತನ್ನ ಎಲ್ಲ ಪುತ್ರರ ಪದವಿ ಪ್ರದಾನ ಸಮಾರಂಭಕ್ಕೆ ಹಾಜರಾಗುವ ಅಭ್ಯಾಸವನ್ನು ದೊರೆ ಸಲ್ಮಾನ್ ಇಟ್ಟುಕೊಂಡಿದ್ದಾರೆ. ಇದು ದೊರೆಯು ಶಿಕ್ಷಣಕ್ಕೆ ನೀಡುತ್ತಿರುವ ಮಹತ್ವದ ಪ್ರತೀಕವಾಗಿದೆ.

‘ಆರ್ದ’(ಕತ್ತಿ ಕುಣಿತ) ಕಾರ್ಯಕ್ರಮಕ್ಕೆ ಮುನ್ನ ರಾಜಕುಮಾರ ರಾಕನ್ ತನ್ನ ತಂದೆಗೆ ಖಡ್ಗವೊಂದನ್ನು ಉಡುಗೊರೆ ನೀಡಿದರು. ಆಗ ತನ್ನ ಕೊನೆಯ ಪುತ್ರನ ಪದವಿ ಪ್ರದಾನದ ಹಿನ್ನೆಲೆಯಲ್ಲಿ ದೊರೆ ಗದ್ಗದಿತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News