ಫೋರ್ಬ್ಸ್ ಮಿಡ್ಲ್ ಈಸ್ಟ್ ಶ್ರೇಷ್ಠ ಭಾರತೀಯ ನಾಯಕರ ಪಟ್ಟಿಯಲ್ಲಿ ಬಿ.ಆರ್. ಶೆಟ್ಟಿ, ತುಂಬೆ ಮೊಯ್ದಿನ್, ಫೈಝಲ್ ಕೆ

Update: 2016-05-04 12:46 GMT

ದುಬೈ, ಮೇ 4: ಫೋರ್ಬ್ಸ್ ಮಿಡ್ಲ್ ಈಸ್ಟ್ ತನ್ನ ಈ ವರ್ಷದ ಅರಬ್ ಜಗತ್ತಿನ ಶ್ರೇಷ್ಠ ಭಾರತೀಯ ನಾಯಕರ ಪಟ್ಟಿಯನ್ನು ಮಂಗಳವಾರ ಇಲ್ಲಿನ ಪಾಮ್ ಜುಮೈರಾದ ವಾಲ್ದರ್ಫ ಅಸ್ಟೋರಿಯದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದೆ.

ಕನ್ನಡಿಗ ಬಿ.ಆರ್. ಶೆಟ್ಟಿ ಈ ಪ್ರತಿಷ್ಠಿತ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದ್ದಾರೆ.

ಇನ್ನೋರ್ವ ಹೆಮ್ಮೆಯ ಕನ್ನಡಿಗ ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷ ತುಂಬೆ ಮೊಯ್ದಿನ್ 16ನೆ ಸ್ಥಾನದಲ್ಲಿದ್ದಾರೆ.

ಮಂಗಳೂರಿನ ಅಳಿಯ, ಕೇರಳದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಕೆಇಫ್ ಕಂಪೆನಿಯ ಅಧ್ಯಕ್ಷ ಫೈಝಲ್ ಇ. ಕೊಟ್ಟಿಕೊಲ್ಲನ್53ನೆ ಸ್ಥಾನದಲ್ಲಿದ್ದಾರೆ. ತುಂಬೆ ಮೊಯ್ದಿನ್‌ರ ಸೋದರಿ ಶಬಾನಾ ಅವರು ಫೈಝಲ್‌ರ ಪತ್ನಿ. ಹಾಗಾಗಿ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಒಂದೇ ಕುಟುಂಬದ ಇಬ್ಬರು ಸ್ಥಾನ ಪಡೆದಿರುವುದು ವಿಶೇಷವಾಗಿದೆ.

ಕನ್ನಡಿಗ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್‌ನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ 85ನೆ ಸ್ಥಾನದಲ್ಲಿದ್ದಾರೆ.

ಕೇರಳದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಲುಲು ಗ್ರೂಪ್‌ನ ಅಧ್ಯಕ್ಷ ಯೂಸುಫ್ ಅಲಿ ಎಂ.ಎ. ದ್ವಿತೀಯ ಸ್ಥಾನದಲ್ಲಿದ್ದಾರೆ.

ಸ್ಟಾಲಿಯನ್ ಗ್ರೂಪ್‌ನ ಅಧ್ಯಕ್ಷ ಸುನಿಲ್ ವಸ್ವಾನಿ ಪ್ರಥಮ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News