ಸಲಾಲ: ಸ್ನಾನಮಾಡಲು ಸಮುದ್ರಕ್ಕಿಳಿದ ಕೇರಳದ ವ್ಯಕ್ತಿ ನಾಪತ್ತೆ
Update: 2016-05-07 15:24 IST
ಸಲಾಲ, ಮೇ 7: ಸಲಾಲದಲ್ಲಿ ಸಮುದ್ರದಲ್ಲಿ ಸ್ನಾನಕ್ಕಿಳಿದ ಕೇರಳದ ಯುವಕ ನಾಪತ್ತೆಯಾಗಿದ್ದಾನೆಂದು ವರದಿಯಾಗಿದೆ. ಶುಕ್ರವಾರ ಸಂಜೆ ಐದು ಗಂಟೆಗೆ ರೈಸೂತ್ ಓಯಸ್ಸಿಸ್ ಕ್ಲಬ್‌ನ ಸಮೀಪದ ಬೀಚ್‌ನಲ್ಲಿ ಸ್ನಾನಕ್ಕಿಳಿದಿದ್ದ ಕಾಂಞಂಗಾಡ್ ನಿವಾಸಿ ಶರತ್(26)ನಾಪತ್ತೆಯಾಗಿದ್ದಾರೆ. ವಂಡರ್‌ಪುಲ್ ಕೋರಲ್ ಎಲ್‌ಎಲ್ಸಿ ಎಂಬ ಕಂಪೆನಿಯಲ್ಲಿ ಐಟಿ ಅಡ್ಮಿನಿಸ್ಟ್ರೇಟರ್ ಆಗಿ ಕೆಲಸ ಮಾಡುತ್ತಿದ್ದರು. ರೋಯಲ್ ಪ್ಯಾಲೆಸ್‌ನಲ್ಲಿ ಒಪ್ಪಂದ ಕೆಲಸಕ್ಕಾಗಿ ಒಂದು ವಾರ ಮೊದಲು ಸಲಾಲಕ್ಕೆ ಶರತ್ ಬಂದಿದ್ದರೆನ್ನಲಾಗಿದೆ. ಇನ್ನಿಬ್ಬರು ಗೆಳೆಯರೊಂದಿಗೆ ಸ್ನಾನಕ್ಕಾಗಿ ಸಮುದ್ರಕ್ಕಿಳಿದಿದ್ದ ಶರತ್ ಬಲವಾದ ತೆರೆ ಅಪ್ಪಳಿಸಿ ಅಪ್ರತ್ಯಕ್ಷನಾಗಿದ್ದರು.
ಕೂಡಲೇ ಪೊಲೀಸ್ ಬೋಟ್ ಮುಳುಗು ತಜ್ಞರುಹುಡುಕಾಟ ನಡೆಸಿದರೂ ತಡರಾತ್ರೆವರೆಗೂ ಶರತ್‌ನನ್ನು ಪತ್ತೆ ಮಾಡಲು ಆಗಿಲ್ಲ. ಮಸ್ಕತ್‌ನ ಕಂಪೆನಿ ಮ್ಯಾನೇಜರ್ ಸಲಾಲಕ್ಕೆ ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.