×
Ad

ಅಲ್ ಮದೀನಾ ದಮಾಮ್ ವಲಯದ ಮಹಾಸಭೆ

Update: 2016-05-07 20:51 IST

ದಮ್ಮಾಮ್, ಮೇ : ಅಲ್ ಮದೀನಾ ದಮ್ಮಾಮ್ ವಲಯದ ಮಹಾಸಭೆಯು ಇತ್ತೀಚೆಗೆ ದಮ್ಮಾಮ್‌ನ ಅಲ್ ಮದೀನಾ ಹಾಲ್‌ನಲ್ಲಿ ವಲಯಾಧ್ಯಕ್ಷ ಟಿ.ಎಚ್.ಬಶೀರ್‌ರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಬ್ದುರ್ರಹ್ಮಾನ್ ಮದನಿ ದುಆ ನೆರವೇರಿಸಿದರು. ಉಸ್ಮಾನ್ ಝುಹ್ರಿ ಖಿರಾಅತ್ ಪಠಿಸಿದರು.

ಸಭೆಯನ್ನು ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು. ಸಭೆಯಲ್ಲಿ ಮಾತನಾಡಿದ ಎನ್.ಎಸ್. ಅಬ್ದುಲ್ಲ ಸಂಘಟನೆ ಮತ್ತು ಸ್ಥಾಪನೆಯ ಬಗ್ಗೆ ವಿವರಿಸಿದರು. ಇಸ್ಮಾಯಿಲ್ ಕಾಟಿಪಳ್ಳ ವರದಿ ವಾಚಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಲ್ಲೂರು ಎರಡು ವರ್ಷದ ಲೆಕ್ಕ ಪತ್ರ ಮಡಿಸಿದರು.

ಸಭೆಯಲ್ಲಿ 2016-18ನೆ ಸಾಲಿಗೆ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಡಿಕೆಎಸ್ಸಿ ಮುಖಂಡ ಅನ್ಸಾರಿ ಕಾನ ಚುನಾವಣೆ ನಡೆಸಿದರು. ಗೌರವಾಧ್ಯಕ್ಷರಾಗಿ ಬಶೀರ್ ತೋಟಾಲ್, ಅಧ್ಯಕ್ಷರಾಗಿ ಇಝ್ಜುದ್ದೀನ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಬಶೀರ್ ಕೈಕಂಬ ಮೇಘ ಅಲ್ ಕೋಬರ್, ಶಂಶುದ್ದೀನ್ ಸಅದಿ ಜುಬೈಲ್, ಮೊಯ್ದಿನ್ ಹಾಜಿ ಅಲ್ ಹಸ್ಸಾ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಮಲ್ಲೂರು, ಕಾರ್ಯದರ್ಶಿಗಳಾಗಿ ಉಸ್ಮಾನ್ ಮಂಜನಾಡಿ ದಮ್ಮಾಮ್, ಮುಹಮ್ಮದ್ ಮಲೆಬೆಟ್ಟು ಅಲ್ ಕೋಬರ್, ಅನ್ವರ್ ಪಡುಬಿದ್ರಿ, ಜುಬೈಲ್‌ರನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಇಸ್ಮಾಯೀಲ್ ಪೊಯ್ಯಲ್ ಆಯ್ಕೆಯಾದರು.

ಸಲಹೆಗಾರರಾಗಿ ಎನ್.ಎಸ್ ಅಬ್ದುಲ್ಲಾ, ಗಫೂರ್ ಸಜಿಪ, ಮುಸಾಹಾಜಿ, ಮೊಯ್ದಿನ್ ಹಾಜಿ ಹಫ್ರುಲ್ ಬಾತಿನ್ ಆಯ್ಕೆಯಾದರು. ಅಬ್ದುಲ್ ಖಾದರ್ ಜಿ.ಎಂ.ಸಿ.ಯವರನ್ನು ಲೆಕ್ಕ ಪರಿಶೋಧಕರಾಗಿ ಆಯ್ಕೆ ಮಾಡಲಾಯಿತು.

ಆರ್ಗನೈಸರ್‌ಗಳಾಗಿ ಅಬ್ದುರ್ರಹ್ಮಾನ್ ಮದನಿ, ಇಬ್ರಾಹೀಂ ಬಂಟ್ವಾಳ, ಅಬೂಬಕರ್ ಮುಸ್ಲಿಯಾರ್ ಹಾಗೂ 23 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮುಲಾಕತ್ ಕಮಿಟಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಎನ್‌ಎಸ್ ಅಬ್ದುಲ್ಲ, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಮಲ್ಲೂರು ಹಾಗೂ ಬಶೀರ್ ಕ್ಯೆಕಂಬ ಮೆಘಾರನ್ನು ಕೋಶಾಧಿಕಾರಿಯಾಗಿ ಆರಿಸಲಾಯಿತು.

ಸಭೆಯಲ್ಲಿ ದಮಾಮ್ ಘಟಕದಿಂದ ಖಾಸಿಂ ಅಡ್ಡೂರ್,ಅಲ್ ಕೋಬರ್‌ನಿಂದ ಬಶೀರ್ ಕೈಕಂಬ ಮೇಘ, ಜುಬೈಲ್‌ನಿಂದ ಗಫೂರ್ ಸಜಿಪ, ಅಲ್ ಹಸ್ಸಾದಿಂದ ಮೊಯ್ದಿನ್ ಹಾಜಿಯವರು ಮಾತನಾಡಿದರು. ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಇಝ್ಝುದ್ದೀನ್ ಮುಸ್ಲಿಯಾರ್, ಎಲ್ಲ ಘಟಕಗಳ ಸಂಪೂರ್ಣ ಸಹಕಾರ ಯಾಚಿಸಿ ವಲಯವನ್ನು ಇನ್ನಷ್ಟು ಅಭಿ ವೃದ್ದಿಪಡಿಸಿ ಝೋನಲ್ ಟವರಿನ ಮೊದಲ ಅಂತಸ್ತಿನ ಕೆಲಸವನ್ನು ಆದಷ್ಟು ಬೇಗ ಮಾಡಿ ಮುಗಿಸಲು ತಮ್ಮೆಲ್ಲರ ಸಹಾಯ ಅತ್ಯಗತ್ಯ ಎಂದರು.

ಈ ಸಂದರ್ಭ ನಿರ್ಗಮನ ಅಧ್ಯಕ್ಷ ಬಶೀರ್ ತೋಟಾಲ್ ನೂತನ ಅಧ್ಯಕ್ಷರಿಗೆ ಆಧಿಕಾರ ಹಸ್ತಾತರಿಸಿದರು. ಪೊಯ್ಯತ್ತಬೈಲ್ ಮುದರ್ರಿಸ್ ನಿಷ್ಕಳಂಕ ದೀನೀ ಸೇವೆಯ ಪ್ರತಿಫಲವನ್ನು ತಿಳಿಸುತ್ತಾ ಭಕ್ತಿ ನಿರ್ಭರ ಪ್ರಾರ್ಥನೆಗೈದರು. ವಲಯ ಕಾರ್ಯದರ್ಶಿ ಮುಹಮ್ಮದ್ ಮಲೆಬೆಟ್ಟು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News