5 ಹೊತ್ತಿನ ನಮಾಝ್ ಮಾಡದ ಪತಿಗೆ 5 ದಿನದಲ್ಲೇ ವಿಚ್ಛೇದನ ನೀಡಿದ ಮಹಿಳೆ !
ಮನಾಮ, ಮೇ 7: ಸೌದಿ ಮಹಿಳೆಯೊಬ್ಬರು ಮದುವೆಯಾಗಿ ಕೇವಲ ೫ ದಿನಗಳಲ್ಲೇ ತನ್ನ ಪತಿಯ ಧಾರ್ಮಿಕ ನಿಷ್ಠೆ ಸರಿಯಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ನೀಡಿದ ಘಟನೆ ನಡೆದಿದೆ.
ತನ್ನ ಪತಿ ಐದು ಹೊತ್ತಿನ ನಮಾಝ್ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಗೊತ್ತಾದ ಮಹಿಳೆ ಮದುವೆಯಾದ ೫ ದಿನಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಮಹಿಳೆಯ ಅರ್ಜಿಯನ್ನು ಸ್ವೀಕರಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯ ಪರವಾಗಿ ತೀರ್ಪು ನೀಡಿ ಪತಿಗೆ 55,000 ಸೌದಿ ರಿಯಾಲ್ ನೀಡುವಂತೆ ಆಕೆಗೆ ಆದೇಶಿಸಿತು.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಹಿಳೆಯ ನಿರ್ಧಾರವನ್ನು ಬೆಂಬಲಿಸುವ ಹಾಗು ವಿರೋಧಿಸುವವರ ನಡುವೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
೫ ಹೊತ್ತಿನ ನಮಾಝ್ ಕಡ್ಡಾಯವಾಗಿದ್ದು ಅದನ್ನು ಮಾಡದ ಪತಿಯ ಜೊತೆ ಆಕೆ ಇರುವುದಿಲ್ಲ ಎಂದು ನಿರ್ಧರಿಸಿರುವುದು ಸರಿಯಾಗಿಯೇ ಇದೆ ಎಂದು ಆಕೆಯನ್ನು ಬೆಂಬಲಿಸುವವರು ಹೇಳಿದರೆ, ಆಕೆ ಇಷ್ಟು ತುರ್ತು ಮಾಡಬಾರದಿತ್ತು. ಸಹನೆ ವಹಿಸಿ ಪತಿಯನ್ನು ಸರಿದಾರಿಗೆ ತರಬಹುದಿತ್ತು ಎಂದು ಆಕೆಯ ನಿರ್ಧಾರವನ್ನು ವಿರೋಧಿಸುವವರು ಹೇಳಿದ್ದಾರೆ .