ಸುನ್ನಿ ಸೆಂಟರ್ 20ನೇ ವಾರ್ಷಿಕ ಸಮ್ಮೇಳನ, ಯು.ಎ.ಇ ಪ್ರಚಾರ ಸಮಿತಿ ಚೆಯರ್ ಮ್ಯಾನಾಗಿ ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ
ರಿಯಾದ್, ಮೇ 11: ಸೌದಿ ಅರೇಬಿಯಾದಲ್ಲಿ 1995ರಲ್ಲಿ ಪ್ರಾರಂಭಿಸಿದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) 20 ವರ್ಷದಿಂದ ಗಲ್ಪ್ ನಾಡಿನ ವಿವಿಧ ರಾಷ್ಟ್ರಗಳಲ್ಲಿ ಕಾರ್ಯಚರಿಸುತ್ತಿರುವ ಕರ್ನಾಟಕದ ಪ್ರತಿಷ್ಟಿತ ಬೃಹತ್ ಅನಿವಾಸಿ ಸಂಘಟನೆ ಯಾಗಿರುತ್ತದೆ. ಇದರ ಅಧೀನದಲ್ಲಿ ಮೂಳೂರಿನಲ್ಲಿ ಇರುವ ಅಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಸ್ಥಾಪನೆ ಕಾರ್ಯಚರಿಸುತ್ತಿದ್ದು ಧಾರ್ಮಿಕ ಲೌಕಿಕ ವಿದ್ಯಾಭ್ಯಾಸವನ್ನು ಶಿಸ್ತುಭದ್ದವಾಗಿ ನೀಡುತ್ತಾ ಬಂದಿದ್ದು ಇದು ರಾಜ್ಯದಲ್ಲಿಯೇ ಒಂದು ಉತ್ತಮ ವಿದ್ಯಾ ಕೇಂದ್ರವಾಗಿದೆ.
ಈ ವಿದ್ಯಾ ಕೇಂದ್ರದಲ್ಲಿ 1300 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು 100 ಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಇದ್ದು 1500 ಕ್ಕಿಂತಲೂ ಹೆಚ್ಚಿನ ಆಡಳಿತ ಸಮಿತಿ ಸದಸ್ಯರು ಸುಮಾರು 10,000 ಕ್ಕಿಂತಲೂ ಹೆಚ್ಚಿನ ಸದಸ್ಯರನ್ನೊಳಗೊಂಡ ಕರ್ನಾಟಕದ ಪ್ರತಿಷ್ಟಿತ ಬ್ರಹತ್ ಅನಿವಾಸಿ ಸಂಘಟನೆ ಯಾಗಿರುತ್ತದೆ. ಇದು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವವನ್ನು ನೀಡುವುದರೊಂದಿಗೆ ಸಮಾಜ ಸೇವೆಯನ್ನು ಮಾಡುತ್ತಾ ಬಂದಿರುತ್ತದೆ. ಈ ಸಂಘಟನೆ ಗೆ 20 ವರ್ಷ ತುಂಬಿದ್ದು ಇದರ ಅಂಗವಾಗಿ ಸಮಾಜ ಸೇವೆಯೊಂದಿಗೆ ವಿಜೃಂಭಣೆಯಿಂದ ನಡೆಸಲು ತಿರ್ಮಾನಿಸಿರುತ್ತೇವೆ. ಇದನ್ನು ಯು.ಎ.ಇ.ಯಲ್ಲಿ ಪ್ರಚಾರ ಪಡಿಸಲು ಹಾಗೂ ಈ ಮಹತ್ತಾದ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸುವ ಉದ್ದೇಶದಿಂದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು. ಎ.ಇ ರಾಷ್ಟೀಯ ಸಮಿತಿಯ ಅಧೀನದಲ್ಲಿ ಉಪ ಸಮಿತಿ ಯನ್ನು ರಚಿಸಲಾಗಿದೆ. ಇದರಂತೆ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ 20 ನೇ ವಾರ್ಷಿಕ ಮಹಾ ಸಮ್ಮೇಳನ ಇದರ ಯು.ಎ.ಇ ಪ್ರಚಾರ ಸಮಿತಿ ಚೆಯರ್ ಮ್ಯಾನ್ ಆಗಿ ಹಾಜಿ.ಎಂ.ಕೆ.ಬ್ಯಾರಿ ಕಕ್ಕಿಂಜೆ ಅವರನ್ನು ಆಯ್ಕೆ ಮಾಡಲಾಗಿದೆ.