×
Ad

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ರಿಯಾದ್ ವಲಯದ ಇಪ್ಪತ್ತನೇ ವಾರ್ಷಿಕ ಮಹಾಸಭೆ

Update: 2016-05-19 23:58 IST

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ರಿಯಾದ್ ವಲಯದ ಇಪ್ಪತ್ತನೇ ವಾರ್ಷಿಕ ಮಹಾಸಭೆಯು ಅಬ್ದುಲ್ ಹಮೀದ್ ಸುಳ್ಯ ರವರ ಅಧ್ಯಕ್ಷತೆಯಲ್ಲಿ ಅಲ್ ಮಾಸ್ ಸಭಾಂಗಣದಲ್ಲಿ ನಡೆಯಿತು.ಮೌಲಾನ ಯೂಸುಫ್ ಸಖಾಫಿ ಬೈತಾರ್ ರವರ ದುವಾದೊಂದಿಗೆ ಆರಂಭವಾದ ಸಭೆಯನ್ನು ದಾವೂದ್ ಕಜೆಮಾರ್ ಸ್ವಾಗತಿಸಿದರು.

ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಅರಾಮೆಕ್ಷ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಿಯಾದ್ ವಲಯದ ಕಾರ್ಯದರ್ಶಿ ಅಶ್ರಫ್ ಕಜೆಮಾರ್ ವರದಿ ವಾಚಿಸಿದರು,ಪ್ರಧಾನ ಕಾರ್ಯದರ್ಶಿ ದಾವೂದ್ ಕಜೆಮಾರ್ ಲೆಕ್ಕ ಪತ್ರ ಮಂಡಿಸಿದರು.

      ರಿಯಾದ್ ವಲಯದ ಉಸ್ತುವಾರಿ  ಅಬೂಬಕ್ಕರ್ ಬರ್ವ  ನೂತನ ಸಮಿತಿ ರಚನೆಗೆ ನೇತೃತ್ವ ನೀಡಿದರು. ನೂತನ ಅಧ್ಯಕ್ಷರಾಗಿ ನಝೀರ್ ಕಾಶಿಪಟ್ನ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಚಿಕ್ಕಮಂಗಳೂರ್ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಬಜ್ಪೆ ಯವರು  ಸರ್ವಾನುಮತದಿಂದ ಆಯ್ಕೆಯಾದರು.

     ಸುನ್ನಿ ಸೆಂಟರ್ ಕೇಂದ್ರ ಸಮಿತಿಯ ನಿರ್ದೇಶಕರಾದ ಮೌಲಾನ ಯೂಸುಫ್ ಸಖಾಫಿ ಬೈತಾರ್ ಪ್ರಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ದಮಾಮ್ ವಲಯಾಧ್ಯಕ್ಷರಾದ ಸುಲೈಮಾನ್ ಸೂರಿಂಜೆ ಆಶಂಸಾ ಭಾಷಣ ಮಾಡಿದರು.ನೂತನ ಕಾರ್ಯದರ್ಶಿ ನವಾಝ್ ಚಿಕ್ಕಮಂಗಳೂರ್ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News