ಮಲಬಾರ್ ಗೋಲ್ಡ್ ನಿಂದ ಕಳವಾದ 7 ಕೆಜಿ ಚಿನ್ನಾಭರಣ ಪೊಲೀಸ್ ವಶಕ್ಕೆ; 3 ಕಳ್ಳರ ಬಂಧನ

Update: 2016-05-23 10:13 GMT

ಶಾರ್ಜಾ : ಶಾರ್ಜಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಶೋರೂಂನಿಂದಏಳು ಕೆಜಿಗಿಂತಲೂ ಅಧಿಕ ತೂಕದ ಚಿನ್ನಾಭರಣ ಕಳವುಗೈದ ಆರೋಪದಮೇಲೆಪೊಲೀಸರುಮೂರು ಮಂದಿಯನ್ನು ದುಬೈನಲ್ಲಿ ಬಂಧಿಸಿದ್ದು, ಕಳ್ಳರ ತಂಡದ ಇನ್ನೊಬ್ಬನಿಗಾಗಿ ಶೋಧ ಮುಂದುವರಿಸಿದ್ದಾರೆ, ಕದ್ದ ಆಭರಣಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರೂ ಪಾಕಿಸ್ತಾನೀಯರೆಂದು ತಿಳಿದು ಬಂದಿದ್ದು ಅವರು ಸಂಯುಕ್ತ ಅರಬ್ ಸಂಸ್ಥಾನಕ್ಕೆ ವಿಸಿಟ್ ವೀಸಾ ಮೂಲಕ ಬಂದಿದ್ದರು.

ಶಾರ್ಜಾದ ಅಲ್ ಘುವೈರ್ ಪ್ರದೇಶದಲ್ಲಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಶೋರೂಂನಲ್ಲಿ ಕಳೆದ ಶುಕ್ರವಾರ ಮುಂಜಾವು ಸುಮಾರು 4 ಗಂಟೆಯ ಹೊತ್ತಿಗೆ ಕಳವು ನಡೆದಿತ್ತು. ಶೋರೂಂನಲ್ಲಿ ಗ್ರಾಹಕರ ಆಯ್ಕೆಗಾಗಿ ಪ್ರದರ್ಶನ ಮಾಡಲಾಗಿದ್ದ ಆಭರಣಗಳನ್ನು ಕಳ್ಳರು ದೋಚಿದ್ದರೆಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಾರ್ಮ್ ಮೊಳಗಿದ್ದರೂ, ಪೊಲೀಸರು ಮೂರು ನಿಮಿಷಗಳೊಳಗೆ ಅಲ್ಲಿಗೆ ಆಗಮಿಸಬೇಕಾದರೆ ಕಳ್ಳರು ತಮ್ಮ ಕಾರ್ಯ ಮುಗಿಸಿ ಪರಾರಿಯಾಗಿದ್ದರು ಕಳ್ಳರು ಶೋರೂಂ ಬಾಗಿಲು ಒಡೆದು ಒಳ ಪ್ರವೇಶಿಸಿದ ಕೂಡಲೇ ಅ.

ಒಬ್ಬ ಹೊರಗೆ ನಿಂತಿದ್ದರೆ ಉಳಿದವರು ಒಳ ಹೋಗಿ ಚಿನ್ನಾಭರಣಗಳನ್ನು ದೋಚಿ ಹೊರಬಂದಿದ್ದರು. ಕಳವಾಗಿದ್ದ ಆಭರಣಗಳ ಮೊತ್ತ 1.5 ಮಿಲಿಯನ್ ಧಿರಮ್ ಎಂದು ತಿಳಿದು ಬಂದಿದೆ. ಮಲಬಾರ್ ಶೋರೂಂ ಒಳಗೆ 14 ಸಿಸಿಟಿವಿ ಕ್ಯಾಮರಾಗಳಿದ್ದರೆ ಹೊರಗೆ 2 ಕ್ಯಾಮರಾಗಳಿದ್ದವು. ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದರು. ಆರೋಪಿಗಳು ಕಳ್ಳತನಗೈಯ್ಯುವಾಗ ತಮ್ಮ ಮುಖಕ್ಕೆ ಮುಸುಕು ಹಾಕದೇ ಇರುವುದರಿಂದ ಅವರನ್ನು ಗುರುತು ಹಿಡಿಯುವುದು ಪೊಲೀಸರಿಗೆ ಸುಲಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News