×
Ad

ಸೌದಿ ಅರೇಬಿಯ: ಐವರು ಭಾರತೀಯರನ್ನು ಜೀವಂತ ಹೂತು ಹಾಕಿದ 3 ಮಂದಿ ಸೌದಿ ಪ್ರಜೆಗಳಿಗೆ ಗಲ್ಲು

Update: 2016-05-25 17:12 IST

ದಮ್ಮಾಮ್,ಮೇ 25: ಸೌದಿ ಅರೇಬಿಯದ ಖತೀಫ್‌ನಲ್ಲಿ ಐದು ಮಂದಿ ಭಾರತೀಯರನ್ನು ಜೀವಂತ ಹೂತು ಹಾಕಿದ ಪ್ರಕರಣದಲ್ಲಿ ಮೂವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಎರಡುವರ್ಷ ನಡೆದ ವಿಚಾರಣೆಯಲ್ಲಿ ಅಂತಿಮವಾಗಿ ಮೂವರು ಸೌದಿ ಪ್ರಜೆಗಳಿಗೆ ವಲಯ ಕ್ರಿಮಿನಲ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಖತೀಫ್‌ನ ಸಫ್ವಾದಲ್ಲಿ 2010ರಲ್ಲಿ ಈ ಘಟನೆ ನಡೆದಿತ್ತು. ಕೇರಳ ಮೂಲದ ಸಲೀಂಅಬ್ದುಲ್‌ಖಾದರ್, ಶಹಜಹಾನ್‌ಕುಂಞಿ, ಶೈಖ್, ಲಾಸರ್, ಬಶೀರ್ ಫಾರೂಕ್ ಎಂಬವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಮದ್ಯ, ಮಾದಕವಸ್ತುವಿನ ಅಮಲಿನಲ್ಲಿ ಈ ಕೃತ್ಯವೆಸೆಗಿದೆವುಎಂದು ಆರೋಪಿಗಳು ವಾದಿಸಿದ್ದರು.

  ಮದ್ಯದೊಂದಿಗೆ ಕಾರಲ್ಲಿ ಹೋಗುವಾಗ ತೋಟದಲ್ಲಿ ಗೆಳೆಯನೊಬ್ಬ ಕರೆದದ್ದಕ್ಕೆ ಹೋಗಿದ್ದೆ ಎಂದು ಆರೋಪಿಗಳಲೊಬ್ಬ ಅಪರಾಧವನ್ನು ಒಪ್ಪಿಕೊಂಡಿದ್ದ. ಅಲ್ಲಿಗೆ ಹೋದಾಗ ಐದು ಮಂದಿಯ ಕೈಗಳನ್ನು ಹಿಂಬದಿಗೆ ಕಟ್ಟಿಹಾಕಿರುವುದು ಕಂಡಿತ್ತು. ವಿಚಾರಿಸಿದಾಗ ಅವರಲ್ಲೊಬ್ಬ ಆತನ ಸ್ಫೋನ್ಸರ್‌ನ ಮಗಳಿಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಉತ್ತರ ಸಿಕ್ಕಿತ್ತು. ನಂತರ ಗೆಳೆಯರೊಂದಿಗೆ ಮದ್ಯಪಾನ ಮಾಡಿದ್ದಲ್ಲದೆ ಮಾದಕವಸ್ತು ಸೇವಿಸಿ ನಂತರ ಟೇಪ್‌ನಿಂದ ಕಟ್ಟಿಹಾಕಿ ತೋಟದಲ್ಲಿರುವ ಗುಂಡಿಯಲ್ಲಿ ದೂಡಿಹಾಕಿ ಪರಿಚಯದ ದಾಖಲೆಯನ್ನೂ ಅದರಲ್ಲಿ ಹಾಕಿ ಮುಚ್ಚಿದೆವು ಎಂದು ಆರೋಪಿಗಳಲೊಬ್ಬ ತಿಳಿಸಿದ್ದ.

ನಾಲ್ಕು ವರ್ಷದ ನಂತರ 2014ರ ಜನವರಿಯಲ್ಲಿ ತೋಟವನ್ನು ಗುತ್ತೆಗೆ ಪಡೆದ ವ್ಯಕ್ತಿ ಕೃಷಿಯೋಗ್ಯವನ್ನಾಗಿಮಾಡಲು ಮಣ್ಣು ಅಗೆದಾಗ ಮೃತದೇಹಗಳ ಪರಿಚಯದ ದಾಖಲೆಗಳು ಹೊಂಡದಲ್ಲಿ ಲಭಿಸಿದ್ದವು. ಐದು ದೇಹದ ಅವಶೇಷಗಳೂ ಮಣ್ಣಿನಡಿಯಲ್ಲಿ ಸಿಕ್ಕಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಅದು ಯಾರ ಶವಗಳೆಂದು ಮೊದಲು ತಿಳಿದಿರಲಿಲ್ಲ. ಶಹಜಹಾನ್ ಮತ್ತು ಸಲೀಂರ ಹೆಸರಿನ ಪರಿಚಯ ಪತ್ರಗಳು ಮಣ್ನಿನಡಿಂಲ್ಲಿ ಸಿಕ್ಕಿದಾಗ ಕೊಲೆರಹಸ್ಯ ಬಹಿರಂಗವಾಗಿತ್ತು. ಮಣ್ಣಿನಡಿಯಲ್ಲಿ ಸಿಕ್ಕಿದ್ದ ಎಲುಬುಗಳನ್ನು ಡಿಎನ್‌ಎ ಪರೀಕ್ಷೆಗೆಕಳುಹಿಸಲಾಯಿತು. ಶಹಜಹಾನ್‌ನ ಸಹೋದರ ನಿಝಾಮ್‌ನಿಂದ ಡಿಎನ್‌ಎ ಪರೀಕ್ಷೆಗೆ ಸ್ಯಾಂಪಲ್ ತೆಗೆಯಲಾಗಿತ್ತು. ಮೃತದೇಹ ಯಾರದ್ದೆಂದು ತಿಳಿಯಲು ತಿಂಗಳುಗಳೇ ಬೇಕಾಗಿ ಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News