×
Ad

ಶಾರ್ಜದಿಂದ ಕಾಣೆಯಾದ ಬಾಲಕನ ಶವಪತ್ತೆ: ತಂದೆಯ ಗೆಳೆಯನ ಬಂಧನ

Update: 2016-05-25 17:42 IST

ದುಬೈ,ಮೇ 25: ಶಾರ್ಜದಿಂದ ಕಾಣೆಯಾಗಿದ್ದ ಒಂಬತ್ತು ವರ್ಷದ ಉಬೈದ ಇಬ್ರಾಹೀಂನ ಮೃತದೇಹ ದುಬೈ ಅಲ್ ವರ್ಕಾದ ಮರುಭೂಮಿ ಪ್ರದೇಶದಲ್ಲಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ತಂದೆಯ ಗೆಳೆಯನಾದ ಜೋರ್ಡಾನ್ ಪ್ರಜೆಯನ್ನು ದುಬೈ ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ಕಿರುಕುಳ ನೀಡಿ ಬಾಲಕನನ್ನು ಹತ್ಯೆ ಮಾಡಿರುವುದಾಗಿ ಈತ ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಶಾರ್ಜ ವಾಣಿಜ್ಯ ವಲಯದ ವಾಸಕೇಂದ್ರದಿಂದ ಶುಕ್ರವಾರ ರಾತ್ರಿ ಎಂಟು ಗಂಟೆಗೆ ಬಾಲಕ ಕಾಣೆಯಾಗಿತ್ತು. ಗೆಳೆಯರೊಂದಿಗೆ ಆಡುತ್ತಿದ್ದ ಬಾಲಕ ಹಠಾತ್ ಕಾಣೆಯಾಗಿದ್ದ. ನಂತರ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರ ದುಬೈ ಅಕಾಡಮಿಕ್ ಸಿಟಿಯೆಡೆಗಿನ ರಸ್ತೆ ಬದಿ ಅಲ್‌ವರ್ಕ್ ಸಮೀಪದ ಮರುಭೂಮಿಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ಬಾಲಕ ಮೃತವಾಗಿ 24 ಗಂಟೆಯಷ್ಟೇ ಆಗಿದೆ ಎಂದು ಫಾರೆನ್ಸಿಕ್ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಮೃತದೇಹದಲ್ಲಿ ಲೈಂಗಿಕ ಕಿರುಕುಳದ ಗುರುತುಗಳಿದ್ದವು. ನಂತರ ಪೊಲೀಸರು ಅಪರಾಧಿಯನ್ನು ಹುಡುಕುವ ಪ್ರಯತ್ನಕ್ಕಿಳಿದಿದ್ದರು. ಬಾಲಕನ ತಂದೆಯ ಗೆಳೆಯನೊಂದಿಗೆ ಕೊನೆಯ ಬಾರಿ ಬಾಲಕನ್ನು ನೋಡಿದವರು ಸಾಕ್ಷ್ಯ ಹೇಳಿದ್ದರು. ಎರಡೇ ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಬಳಿ ಈತ ತಪ್ಪೊಪ್ಪಿಕೊಂಡಿದ್ದಾನೆ.

 ಜೋರ್ಡನ್ ಪ್ರಜೆಯಾದ 48ವರ್ಷದ ವ್ಯಕ್ತಿಗೆ ಕ್ರಿಮಿನಲ್ ಹಿನ್ನೆಲೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಶುಕ್ರವಾರ ಸಂಜೆ ಏಳುಗಂಟೆಗೆ ಶಾರ್ಜ ವಾಣಿಜ್ಯ ವಲಯದಲ್ಲಿ ತಂದೆಯ ಸಂಸ್ಥೆಯ ಬಳಿಯಿಂದ ಆಟಿಕೆ ಕೊಡಿಸುವೆ ಎಂದು ಹೇಳಿ ಬಾಲಕನನ್ನು ಕಾರಿನಲ್ಲಿ ಈ ಧೂರ್ತ ಕರೆದೊಯ್ದಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News