ಪತ್ನಿಯ ಹೆರಿಗೆಗೆ ಸಹಕರಿಸಿದ ವೈದ್ಯನಿಗೆ ಗುಂಡಿಕ್ಕಿದ ಪತಿರಾಯ !
Update: 2016-05-26 19:44 IST
ರಿಯಾದ್ , ಮೇ 26: ತನ್ನ ಪತ್ನಿಯ ಹೆರಿಗೆಗೆ ಸಹಕರಿಸಿದ ವೈದ್ಯನಿಗೆ ವ್ಯಕ್ತಿಯೊಬ್ಬ ಗುಂಡಿಕ್ಕಿದ ಆಘಾತಕಾರಿ ಘಟನೆ ಇತ್ತೀಚಿಗೆ ನಡೆದಿದೆ. ಹೆರಿಗೆಗೆ ಮಹಿಳಾ ವೈದ್ಯರೇ ಇರಬೇಕಿತ್ತು, ಪುರುಷರು ಬಂದಿದ್ದು ತಪ್ಪು ಎಂಬುದು ಗುಂಡಿಕ್ಕಿದ ಪತಿಯ ವಾದ. ಆತನನ್ನು ಬಂಧಿಸಲಾಗಿದೆ.
ರಿಯಾದ್ ನ ಕಿಂಗ್ ಫಹದ್ ಮೆಡಿಕಲ್ ಸಿಟಿಯಲ್ಲಿ ತನ್ನ ಪತ್ನಿಯ ಹೆರಿಗೆಗೆ ಸಹಕರಿಸಿದ ಡಾ. ಮುಹನ್ನದ್ ಅಲ್ ಝಬ್ನ್ ಅವರನ್ನು ಧನ್ಯವಾದ ಸಲ್ಲಿಸಲು ಎಂದು ಕಾರಣ ನೀಡಿ ಭೇಟಿಯಾದ ಪತಿ ತಾನು ಅಡಗಿಸಿಟ್ಟು ಕೊಂಡಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ವೈದ್ಯನನ್ನು ತಕ್ಷಣ ತುರ್ತು ನಿಗಾ ವಿಭಾಗಕ್ಕೆ ಸೇರಿಸಿ ಚಿಕಿತ್ಸೆ ನೀಡಲಾಯಿತು.