×
Ad

ದುಬೈ: ಪೊಲೀಸರಿಂದ ಲಿಫ್ಟ್‌ನಲ್ಲಿ ಸಿಕ್ಕಿಬಿದ್ದವರ ರಕ್ಷಣೆ

Update: 2016-05-27 16:33 IST

ದುಬೈ, ಮೇ 27: ನಗರದಲ್ಲಿರುವ ಕಟ್ಟಡವೊಂದರ ಲಿಫ್ಟ್‌ನೊಳಗೆ ಸಿಕ್ಕಿಬಿದ್ದಿದ್ದ ಇಬ್ಬರನ್ನು ದುಬೈ ಪೊಲೀಸರು ಯಾವುದೇ ಅಪಾಯವಿಲ್ಲದೆ ಪಾರು ಮಾಡಿದ್ದಾರೆ. ಹೈಡ್ರಾಲಿಕ್ ಉಪಕರಣಗಳ ಮೂಲಕ ಲಿಫ್ಟ್‌ನಲ್ಲಿ ಸಿಕ್ಕಿಬಿದ್ದಿದ್ದವರನ್ನು ಪೊಲೀಸರು ರಕ್ಷಿಸಿದ್ದು ಗುರುವಾರ ಮಧ್ಯಾಹ್ನ 3:15ಕ್ಕೆ ಇವರು ಲಿಫ್ಟ್‌ನೊಳಗೆ ಸಿಲುಕಿಕೊಂಡಿರುವ ಸಂದೇಶ ಪೊಲೀಸರಿಗೆ ತಲುಪಿತ್ತು.

ಕೇವಲ ಹನ್ನೆರಡು ನಿಮಿಷದಲ್ಲಿ ಪೊಲೀಸರ ರಕ್ಷಣಾ ವಿಭಾಗ ಸ್ಥಳಕ್ಕೆ ಬಂದು 15ನೆ ಮಹಡಿಯಲ್ಲಿ ಸಿಕ್ಕಿಬಿದ್ದಿದ್ದ ಅರಬ್ ಮೂಲದ ಮಹಿಳೆ ಮತ್ತು ದಕ್ಷಿಣೇಶ್ಯದ ಪುರುಷನನ್ನು ಹೈಡ್ರಾಲಿಕ್ ಉಪಕರಣದಿಂದ ಲಿಫ್ಟ್‌ನ ಬಾಗಿಲನ್ನು ಸರಿಸಿ ಸುರಕ್ಷಿತವಾಗಿ ಹೊರಗೆ ತೆಗೆದಿದ್ದಾರೆ. ಸಿವಿಲ್ ಡಿಫೆನ್ಸ್, ಆ್ಯಂಬುಲೆನ್ಸ್ ಸ್ಥಳಕ್ಕೆ ಬಂದಿತ್ತು. ಲಿಫ್ಟ್‌ನಲ್ಲಿ ಸಿಕ್ಕಿಬಿದ್ದರೆ ಹೆದರದೆಅಲಾರಾಂ ಗುಂಡಿಯನ್ನು ಒತ್ತಿ ಇತರರ ಗಮನಕ್ಕೆ ತರಬೇಕು. ಮೊಬೈಲ್ ಇದ್ದರೆ ಪೊಲೀಸ್‌ಗೆ ಫೋನ್ ಮಾಡಬೇಕೆಂದು ಪೊಲೀಸರು ತಿಳಿಸಿದ್ದಾರೆ. ಹೆದರಿದರೆ ಪ್ರಜ್ಞೆ ಕಳಕೊಳ್ಳುವ ಸಾಧ್ಯತೆ ಇರುವುದರಿಂದ ಸಮಸ್ಯೆಯಾಗಬಹುದು. ಲಿಫ್ಟ್‌ನ ಬಾಗಿಲಿಗೆ ಗಟ್ಟಿಯಾಗಿ ಬಡಿದು ಕಟ್ಟಡದ ಸುರಕ್ಷಾ ವಿಭಾಗದ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಬಹುದು ಎಂದು ಪೊಲೀಸರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News