×
Ad

ನುಸ್ರತುಲ್ ಮಸಾಕೀನ್ ಅಸೋಸಿಯೇಷನ್ ಕೆಂದ್ರ ಸಮಿತಿ ನಿಯೋಗದಿಂದ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಖಾದರ್ ರವರ ಭೇಟಿ

Update: 2016-05-28 16:45 IST

ಖಾಸಗಿ ಕಾರ್ಯಕ್ರಮದ ನಿಮಿತ್ತ ಸೌದಿ ಅರೇಬಿಯಾದ ದಮ್ಮಾಮ್ ಗೆ ಭೇಟಿಕೊಟ್ಟ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಖಾದರ್ ರವರನ್ನು ನುಸ್ರತುಲ್ ಮಸಾಕೀನ್ ಅಸೋಸಿಯೇಷನ್ ಕೆಂದ್ರ ಸಮಿತಿ ನಿಯೋಗ ಭೇಟಿಯಾಗಿ ಕುಂದಾಪುರ ತಾಲ್ಲೂಕಿನ ಕೋಡಿಯಲ್ಲಿ NMA ಕುಂದಾಪುರ ತಾಲ್ಲೂಕಿನ ವತಿಯಿಂದ ಸಮಸ್ತ ಗ್ರಾಮದ ಜನರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಮೆಡಿಕಲ್ ಸೌಲಭ್ಯ, ತುರ್ತು ಚಿಕಿತ್ಸಾ ಘಟಕ ಹಾಗೂ ಬಡಹೆಣ್ಣುಮಕ್ಕಳ ಜೀವನಕ್ಕೆ ಆಧಾರಕ್ಕಾಗಿ ಬೇಕಾದ ಟೈಲರಿಂಗ್ ಕ್ಲಾಸ್ ನ ಕಟ್ಟಡ ಕಾಮಗಾರಿಯ ಮಾಹಿತಿಯನ್ನು NMA ದಮ್ಮಾಮ್ ಘಟಕದ ಅಧ್ಯಕ್ಷರಾದ ಅಬುಬಕ್ಕರವರು ನೀಡಿ ಸಚಿವ ಖಾದರ್ ಮುಖಾಂತರ NMA ಪ್ಯಾಂಪ್ಲೇಟ್ ಬಿಡುಗಡೆ ಮಾಡಲಾಯಿತು. ಸಚಿವ ಖಾದರ್ ರವರು ಮಾತನಾಡುತ್ತ NMA ಕುಂದಾಪುರ ತಾಲ್ಲೂಕಿನ ಕೆಲಸ ಕಾರ್ಯವನ್ನು ಶ್ಲಾಘಿಸುತ್ತ ಈ ಕಟ್ಟಡಕ್ಕೆ ಆರೋಗ್ಯ ಇಲಾಖೆಯಿಂದ ಯಾವುದೇ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಅದಲ್ಲದೇ NMAಯಂತೆಯೇ ಇತರ ಸಂಸ್ಥೆಗಳು ತಮ್ಮ ತಮ್ಮ ತಾಲ್ಲೂಕಿನ ಜವಾಬ್ದಾರಿ ವಹಿಸಬೇಕೆಂದು ಈ ಸಮಯದಲ್ಲಿ ಹೇಳಿದರು. 

Writer - ವರದಿ : ಯಾಕೂಬ್ ಫೈರೋಝ್

contributor

Editor - ವರದಿ : ಯಾಕೂಬ್ ಫೈರೋಝ್

contributor

Similar News