ದುಬೈ ಹೋಲಿ ಕುರ್ ಆನ್ ಅವಾರ್ಡ್-2016
ದುಬೈ, ಮೇ 28: ದುಬೈ ಇಂಟರ್‌ನ್ಯಾಷನಲ್ ಹೋಲಿ ಕುರ್‌ಆನ್ ಅವಾರ್ಡ್-2016 ಇದರ 20ನೆ ಸಮಾರಂಭಕ್ಕೆ ದುಬೈ ಸರಕಾರದ ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಸಂಯುಕ್ತ ಖಾಝಿ, ದಾರುನ್ನೂರಿನ ಶಿಲ್ಪಿಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ ಹರಿಯವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಯುಕ್ತ ಅಲ್ ಮಂಝಾರ್ನಲ್ಲಿರುವ ದುಬೈ ಸುನ್ನಿ ಸೆಂಟರ್ ಮದ್ರಸದಲ್ಲಿ ಅಸ್ಸೈಯದ್ ಹಾಮಿದ್ ಕೋಯಮ್ಮ ತಂಙಳ್ ಅದ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಜೂನ್ 15ರಂದು ತ್ವಾಕಾ ಉಸ್ತಾದರು ದುಬೈ ಸರಕಾರದ ಅತಿಥಿಯಾಗಿ ಆಗಮಿಸಲಿದ್ದು, 16ರಂದು ದುಬೈ ಅಲ್ ಮುಹ್ಸಿನಾದಲ್ಲಿರುವ ಇಂಡಿಯನ್ ಅಕಾಡೆಮಿ ಸ್ಕೂಲಲ್ಲಿ ವಿಶೇಷ ಕಾರ್ಯಕ್ರಮ ನೆರವೇರಲಿದೆ. ಪ್ರಮುಖ ಭಾಷಣಕಾರರಾಗಿ ಉಸ್ತಾದ್ ಶಾಜಹಾನ್ ಕಂಬ್ಲಕ್ಕಾಡ್ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಸ್ವಾಗತ ಸಮಿತಿಯಲ್ಲಿ ಕೇರಳದ ಸುಮಾರು 50 ಮಂದಿ ಯೊಂದಿಗೆ ಕರ್ನಾಟಕದ ಸೈಯದ್ ಅಸ್ಗರ್ ಅಲಿ ತಂಙಳ್, ಹಾಜಿ ಮೊಹಿದ್ದೀನ್ ಕುಟ್ಟಿ ಕಕ್ಕಿಂಜೆ, ಸಲೀಂ ಅಲ್ತಾಫ್ ಫರಂಗಿಪೇಟೆ, ಬದ್ರುದ್ದೀನ್ ಹೆಂತಾರ್ , ಅಬ್ದುಲ್ ಸಲಾಂ ಬಪ್ಪಳಿಗೆ, ಶರೀಫ್ ಕಾವು, ಮಹಮ್ಮದ್ ರಫೀಕ್ ಆತೂರು , ಹನೀಫ್ ಹರಿಯಮೂಲೆ, ಕೆ.ಪಿ. ಹನೀಫ್ ಮೂಡಬಿದ್ರಿ , ನೂರ್ ಮಹಮ್ಮದ್ ನೀರ್ಕಜೆ, ಅಬ್ದುಲ್ ಖಾದರ್ ಬೈತಡ್ಕ, ನವಾಝ್ ಬಿ.ಸಿ.ರೋಡ್, ಮಹಮ್ಮದ್ ರಫೀಕ್ ಸುರತ್ಕಲ್, ಸಮೀರ್ ಇಬ್ರಾಹೀಂ ಕಲ್ಲರೆ, ಸುಲೈಮಾನ್ ಮುಸ್ಲಿಯಾರ್ ಕಲ್ಲೆಗ, ಹಮೀದ್ ಮನಿಲ, ಶರೀಫ್ ಅಶ್ರಫಿ ಮೊಡಂತ್ಯಾರ್, ಉಸ್ಮಾನ್ ಕೆಮ್ಮಿಂಜೆ, ಸಫ್ವಾನ್ ಕುಪ್ಪೆಪದವು, ಆಶ್ರಫ್ ಬಾಂಬಿಲ, ಅಬ್ದುಲ್ ರಝಾಕ್ ಸೋಂಪಾಡಿ, ಸಾಜಿದ್ ಆರ್ಲಪದವು , ಅನ್ಸಾಫ್ ಪಾತೂರು, ಇಲ್ಯಾಸ್ ಕಡಬ, ಮಹಮ್ಮದ್ ಮಾಡಾವು , ಸಾಜಿದ್ ಬಜ್ಪೆ, ಇಮ್ರಾನ್ ಮಜಿಲೋಡಿ , ಸಂಶೀರ್ ಬಾಂಬಿಲ, ಸಫಾ ಇಸ್ಮಾಯೀಲ್ , ಹನೀಫ್ ಎಡಪದವು, ಆಸಿಫ್ ಬಿ.ಸಿ.ರೋಡ್, ಝಕರಿಯಾ ಮುಲಾರ್, ಆಸಿಫ್ ಮರೀಲ್, ಜಾಬಿರ್ ಬೆಟ್ಟಂಪಾಡಿ ಮೊದಲಾದವರರನ್ನು ಆರಿಸಲಾಯಿತು.
ಶೌಕಲ್ ಅಲಿ ಹುದವಿ ವಿವಿಧ ಜವಾಬ್ದಾರಿಗಳ ಪಟ್ಟಿಯನ್ನು ವಾಚಿಸಿದರು.