×
Ad

ಫ್ಯಾಮಿಲಿ ಮುಲಾಕತ್-2016 ಯಶಸ್ವಿಗೆ ಕರೆ

Update: 2016-05-28 23:06 IST

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ತಬೂಕ್ ಘಟಕದ ವತಿಯಿಂದ ಗುರುವಾರ ರಾತ್ರಿ ಒಂಬತ್ತು ಘಂಟೆ ಯಿಂದ ಮರುದಿನ ಬೆಳಿಗ್ಗೆ ನಾಲ್ಕು ಘಂಟೆಯವರೆಗೆ 'ಫ್ಯಾಮಿಲಿ ಮುಲಾಕತ್-2016' ಎಂಬ ಬೃಹತ್ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿದೆ.

ಪ್ರಸ್ತುತ ಕಾರ್ಯಕ್ರಮದಲ್ಲಿ ಸುನ್ನಿ ಸೆಂಟರ್ ತಬೂಕ್ ಘಟಕದ ಅಧೀನದಲ್ಲಿರುವ ನೂರುಲ್ ಹುದಾ ಮದ್ರಸ ಮಕ್ಕಳಿಂದ ಕ್ವಿಜ್ ಇಸ್ಲಾಮಿಕ್ ಹಾಡು ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.

ಕಾರ್ಯಕ್ರಮದಲ್ಲಿ  ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಕೇಂದ್ರ ಸಮಿತಿಯ ಅನೇಕ ಪ್ರಮುಖ ನೇತಾರರು ಪಾಲ್ಗೊಳ್ಳಲಿರುವ  ಕಾರ್ಯಕ್ರಮವು ಅನಿವಾಸಿ ಕರ್ನಾಟಕದ ಜನರ ಬಹು ನಿರೀಕ್ಷಿತ ಬೃಹತ್ ಕಾರ್ಯಕ್ರಮವಾಗಲಿದೆ.

ಕಾರ್ಯಕ್ರಮಕ್ಕೆ ತಬೂಕ್  ವ್ಯಾಪ್ತಿಯ ವಿವಿಧ ಕಡೆಗಳಿಂದ ವಾಹನದ ಸೌಕರ್ಯವನ್ನು ಒದಗಿಸಲಾಗಿದೆ. ಕಾರ್ಯಕ್ರಮವನ್ನು ಸಂಪೂರ್ಣ ಯಶಸ್ವಿ ಗೂಳಿಸಲು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News