ಕೆಸಿಎಫ್ ದಮ್ಮಾಮ್ ಝೋನ್ ವತಿಯಿಂದ ಬೇಕಲ್ ಉಸ್ತಾದ್‌ಗೆ ಸನ್ಮಾನ
ಜುಬೈಲ್, ಮೇ 31: ಕರ್ನಾಟಕ ಕಲ್ಚರಲ್ ಫೌಂಡೇಶನ್ ದಮ್ಮಾಮ್ ಝೋನ್ ವತಿಯಿಂದ ಕರ್ನಾಟಕ ಜಂಇಯತುಲ್ ಉಲಮಾ ಅಧ್ಯಕ್ಷ, ಕೆಸಿಎಫ್ ನ ನಿರ್ದೇಶಕರಾದ ಬೇಕಲ್ ಉಸ್ತಾದ್, ಕಾವಳಕಟ್ಟೆ ಹಝ್ರತ್, ಸುಫ್ಯಾನ್ ಸಖಾಫಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚಿಗೆ ಜುಬೈಲ್ನ ರಾಯಲ್ ಮಲಬಾರ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೌದಿ ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ. ಯೂಸುಫ್ ಸಖಾಫಿ ಬೈತಾರ್, ವಿದ್ವಾಂಸರಿಗೆ ಇರುವ ಸ್ಥಾನ,ಅವರು ಸಮಾಜಕ್ಕೆ ನೀಡುವ ಸೇವೆಯನ್ನು ವಿವರಿಸಿ ನಾವು ನೈಜ ವಿದ್ವಾಂಸರನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಭಾಷಣಗೈದ ಬೇಕಲ್ ಉಸ್ತಾದ್, ಪ್ರಬೋಧನೆ ಎಲ್ಲರ ಜವಾಬ್ದಾರಿ ಆಗಿದ್ದು, ಅದು ನಿರ್ವಹಿಸದೇ ಇದ್ದರೆ ಪರಲೋಕದಲ್ಲಿ ಅಲ್ಲಾಹನು ನಮ್ಮಲ್ಲಿ ಪ್ರಶ್ನೆ ಕೇಳುತ್ತಾನೆ. ಆದ್ದರಿಂದ ಈ ಜವಾಬ್ದಾರಿಯಿಂದ ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇಸ್ಲಾಮಿನ ನೈಜ ಆಶಯ ಆದರ್ಶವನ್ನು ತಲುಪಿಸಲು ನಾವು ತಯಾರಾಗಬೇಕು ಎಂದು ಕರೆ ನೀಡಿದರು.
ಬಳಿಕ ಬೇಕಲ್ ಉಸ್ತಾದ್, ಕಾವಳಕಟ್ಟೆ ಹಝ್ರತ್, ಸುಫ್ಯಾನ್ ಸಖಾಫಿಯವರನ್ನು ಕೆಸಿಎಫ್ ರಾಷ್ಟ್ರೀಯ ಸಮೀತಿ ಕಾರ್ಯದರ್ಶಿ ಉಮರ್ ಫಾರೂಕ್ ಕಾಟಿಪಳ್ಳ, ಹನೀಫ್ ಸಅದಿ ಉಳ್ಳಾಲ್, ಅಜೀಜ್ ಸಅದಿ ಸನ್ಮಾನಿಸಿದರು. ಇದೇ ವೇಳೆ ಸನ್ಮಾನಿತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕೆಸಿಎಫ್ ಅಂತಾರಾಷ್ಟ್ರೀಯ ನಿಧಿ ಫಾರಂನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು. ಬೇಕಲ್ ಉಸ್ತಾದರು ದಮ್ಮಮ್ ಝೋನ್ ನಾಯಕರಿಗೆ ನೀಡುವ ಮೂಲಕ ಉದ್ಘಾಟಿಸಿದರು. ಉಮರ್ ಫಾರೂಕ್ ಕಾಟಿಪಳ್ಳ ಅಂತಾರಾಷ್ಟ್ರೀಯ ಸಾಂತ್ವನ ನಿಧಿಯ ಬಗ್ಗೆ ವಿವರಿಸಿದರು.
ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ ಅಧ್ಯಕ್ಷೀಯ ಭಾಷಣಗೈದರು. ವೇದಿಕೆಯಲ್ಲಿ ಕೆಸಿಎಫ್ ನಾಯಕರಾದ ಶೇಖ್ ಅಬ್ದುಲ್ಲ ,ಅಬೂಬಕರ್ ಪಡುಬಿದ್ರೆ, ಕಮರುದ್ದೀನ್ ಗೂಡಿನಬಳಿ ಉಪಸ್ಥಿತರಿದ್ದರು.
ಕಾವಳಕಟ್ಟೆ ಹಝ್ರತ್ ದುಆ ನೆರವೇರಿಸಿದರು. ಕೆಸಿಎಫ್ ದಮ್ಮಾಮ್ ಝೋನ್ ಸಂಘಟನಾ ವಿಭಾಗ ಅಧ್ಯಕ್ಷ ಉಮರ್ ಫಾರೂಕ್ ಕುಪ್ಪೆಟ್ಟಿ ಸ್ವಾಗತಿಸಿದರು.
ಫೈಝಲ್ ಕೃಷ್ಣಾಪುರ ವಂದಿಸಿದರು. ಮುಹಮ್ಮದ್ ಮಲೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.