ದಮ್ಮಾಮ್: ಅಲ್ ಖಾದಿಸ ಫ್ಯಾಮಿಲಿ ಮುಲಾಕಾತ್ ಯಶಸ್ವಿ

Update: 2016-06-01 06:20 GMT

ದಮ್ಮಾಮ್, ಮೇ 31: ಅಲ್ ಖಾದಿಸ ವಿದ್ಯಾಸಂಸ್ಥೆ ಕಾವಳಕಟ್ಟೆಯ ದಮ್ಮಾಮ್ ಸಮಿತಿಯ ವತಿಯಿಂದ ಫ್ಯಾಮಿಲಿ ಮುಲಾಕಾತ್ ಇತ್ತೀಚೆಗೆ ದಮ್ಮಾಮ್‌ನ ಪನೋರಮ ಇಸ್ತಿರಾದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಡುಪಿ, ಹಾಸನ, ಚಿಕ್ಕಮಗಳೂರು ಸಂಯುಕ್ತ ಖಾಝಿ, ಕರ್ನಾಟಕ ಕಲ್ಚರಲ್ ಫೌಂಡೆಶನ್ನ ರುವಾರಿ,ಅಲ್ಹಾಜ್ ಬೇಕಲ್ ಉಸ್ತಾದ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಚಲಿತ ವಿದ್ಯಮಾನದಲ್ಲಿ ಮುಸ್ಲಿಮರ ಸ್ಥಿತಿಗತಿ ಮತ್ತು ಸುನ್ನತ್ ಜಮಾತ್ ಎಂದರೆ ಏನು, ಅದರ ಕಾರ್ಯಚರಣೆ ಯಾವ ರೀತಿಯಲ್ಲಿ ಸಾಗುತ್ತಾ ಇದೆ ಎಂಬ ವಿಷಯವನ್ನು ಸಭೆಯ ಮುಂದಿಟ್ಟರು, ಪರಿಶುದ್ದ ಇಸ್ಲಾಂ ಅಲ್ಲಾಹನ ಬಳಿ ಸ್ವೀಕಾರವಾದ ಧರ್ಮ ಎಂಬ ಕುರ್‌ಆನಿನ ಸೂಕ್ತವನ್ನು ವಿವರಿಸುತ್ತಾ ಮತ್ತು ಅದಕ್ಕೆ ಇಮಾಮರುಗಳು ನೀಡಿದ ವ್ಯಾಖ್ಯಾನ ಏನು ಎಂಬುದನ್ನು ವಿವರಿಸಿದರು.

ಸುನ್ನಿ ಸೆಂಟರ್ ಮೂಳೂರ್‌ನ ಅಧ್ಯಕ್ಷ ಅಸೈಯದ್ ಆಟಕೋಯ ತಂಙಳ್ ಕುಂಬೋಲ್ ಕಾವಳಕಟ್ಟೆ ಹಜ್ರತ್‌ರ ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿ ಕರೆ ನೀಡಿದರು.

ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಯಾವುದೇ ರೀತಿಯ ವದಂತಿ ವಿಚಾರ ಗಳಿಗೆ ಕಿವಿಗೊಡದೆ, ತಾಳ್ಮೆಯಿಂದ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಹೋಗಬೇಕು ಎಂಬುದಾಗಿ ಹೇಳಿದರು.

ಅಲ್ ಮುಝೈನ್‌ನ ಸಿಇಒ ಝಕರಿಯ ಜೋಕಟ್ಟೆಮಾತನಾಡಿದರು. ಕೆಸಿಎಫ್ ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿಯ ಅದ್ಯಕ್ಷ ಡಿ.ಪಿ. ಯೂಸುಫ್ ಸಖಾಫಿ ಬೈತಾರ್ ಭಾಷಣ ಮಾಡಿ ಅಲ್ ಖಾದಿಸಾದ ಬಗ್ಗೆ ವಿವರಿಸಿದರು.

ಸಂಸ್ಥೆಯ ಪ್ರಿನ್ಸಿಪಾಲ್ ಸುಫ್ಯಾನ್ ಸಖಾಫಿ, ಅಮಕೋ ಆಸೀಫ್, ಅಲ್ ಫಲಾಹ್ ನಜೀರ್ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಒಂದು ಆಡನ್ನು ಏಲಂ ಮಾಡಲಾಯಿತು. ಎಲ್ಲರೂ ಉತ್ಸಾಹದಿಂದ ಏಲಂನಲ್ಲಿ ಭಾಗವಹಿಸಿದ್ದರು. ಏಲಂ ದಮಾಮ್ ಮತ್ತು ಜುಬೈಲ್ ನಡುವೆ ಪರಸ್ಪರ ಪೈಪೋಟಿ ಏರ್ಪಟ್ಟಿತ್ತು. ಜುಬೈಲ್ ತಂಡ ಏಲಂನಲ್ಲಿ ಖರೀದಿಸಿ, ಮೊತ್ತವನ್ನು ಅಲ್ಖಾದಿಸ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ದಾನ ಮಾಡಿದರು.

ಅಲ್ ಖಾದಿಸಾ ವಿದ್ಯಾಸಂಸ್ಥೆಯ ರೂವಾರಿ ಕಾವಳಕಟ್ಟೆ ಮುಹಮ್ಮದ್ ಫಾಜಿಲ್ ರಜ್ವಿ ಸಂದೇಶ ಭಾಷಣ ಮಾಡಿದರು. ಸಮಸ್ತ ಉಪಾಧ್ಯಕ್ಷ ,ಉಸ್ತಾದುಲ್ ಅಸಾತೀದ್ ಶೈಖುನಾ ಅಲಿ ಕುಂಞ ಉಸ್ತಾದ್ ದುಆ ನೆರವೇರಿಸಿದರು.

ವೇದಿಕೆಯಲ್ಲಿ ಸರ್ಫ್ರಾಝ್ ರೈಸ್ಕೋ ರಿಯಾದ್ , ಶರೀಫ್ CEO ವೈಟ್ ಸ್ಟೋನ್ , ಮುಹಮ್ಮದ್ ಯೂನಸ್ ರಿಯಾದ್ , ನಝೀರ್ ಅಲ್ ಫಲಾಹ್ ಅರಿಫ್ ರಿಯಾದ್ , ಸಲೀಂ ಮದನಿ ಕುತ್ತಾರ್ , ರಜ್ವಿ ಕಲ್ಕಟ್ಟ , ಪಿ. ಪಿ ಅಹ್ಮದ್ ಸಖಾಫಿ ಕಾಶಿಪಟ್ನ , ಸಂಸ್ಥೆಯ ಪ್ರಿನ್ಸಿಪಾಲ್ ಸುಫ್ಯಾನ್ ಸಖಾಫಿ , ಇಸ್ಮಾಯಿಲ್ ಕಣ್ಣಂಗಾರ್ ರಿಯಾದ್ ಹಾಗೂ ಇನ್ನಿತರ ಉಲಮಾ ಉಮಾರ ವೇದಿಕೆಯಲ್ಲಿ ಇದ್ದರು. 

ಈ ಕಾರ್ಯಕ್ರಮದ ಮುಖ್ಯ ರೂವಾರಿ ಸರಳ ಸಜ್ಜನಿಕೆಯ ವ್ಯೆಕ್ತಿತ್ವ  ಅಲ್ ಖಾದಿಸ ದಮ್ಮಮ್ ನ ಅಧ್ಯಕ್ಷ ಅಬೂಬಕರ್ ಪದುಬಿದ್ರೆಯವರನ್ನು ಯು ಟಿ ಖಾದರ್ ಅಭಿನಂದಿಸಿದರು.

ಕೋಡಿ ಅಬೂಬಕರ್ , ಹನೀಫ್ ಮಂಜನಾಡಿ , ಇಬ್ರಾಹಿಮ್ ಬಂಟ್ವಾಳ್ , ಸಿದ್ದೀಕ್ ರೈಸ್ಕೋ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಕಮರುದ್ದೀನ್ ಗೂಡಿನಬಳಿ , ಸೈಯದ್ ಬಾವ ಬಜ್ಪೆ , ನೌಶಾದ್ ತಲಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಅಲ್ ಖಾದಿಸಾ ಮುಲಾಕಾತ್ ಸಮಿತಿ ಕಾರ್ಯದರ್ಶಿ ಉಮರ್ ಫಾರೂಕ್ ಕಾಟಿಪಳ್ಳ ಸ್ವಾಗತಿಸಿದರು. ಅಝೀಝ್ ಮುಸ್ಲಿಯಾರ್ ಕಿರಾಅತ್ ಪಠಿಸಿದರು. ತಲಕ್ಕಿ ಮುಹಮ್ಮದ್ ಸಖಾಫಿ ವಂದಿಸಿದರು.

ಕಾರ್ಯಕ್ರಮದ ಮೊದಲಿಗೆ ಕೆಸಿಎಫ್ ದಮಾಮ್ ತಂಡದಿಂದ, ಬಷೀರ್ ಉಸ್ತಾದ್ ಕಾಪು ನೇತೃತ್ವದಲ್ಲಿ ಆಕರ್ಷಣೀಯವಾದ ದಫ್ ಎಲ್ಲರ ಮನಸೂರೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News