ಜೂ.10: ಬಿಸಿಎಫ್ ವತಿಯಿಂದ ಇಫ್ತಾರ್ ಮೀಟ್
ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ವರ್ಷಂಪ್ರತಿಯಂತೆ ಈ ವರ್ಷದ ರಂಝಾನ ತಿಂಗಳಿನಲ್ಲಿ ಇಫ್ತಾರ್ ಕಾರ್ಯಕ್ರಮವನ್ನು ಜೂ.10 ಶುಕ್ರವಾರದಂದು ದುಬೈ ಯ ಊದ್ ಮೇತಾ ರೋಡ್ ನಲ್ಲಿರುವ ಇರಾನಿಯನ್ ಕ್ಲಬ್ ಆಡಿಟೋರಿಯಂನಲ್ಲಿ ನದೆಸಲಾಗುವುದೆಂದು ಬಿಸಿಎಫ್ ಇಫ್ತಾರ್ ಕೂಟ ಕಮಿಟಿ ಚಯರ್ಮೆನ್ ಅಬ್ದುಲ್ ಲತೀಫ್ ಮುಲ್ಕಿ ತಿಳಿಸಿದ್ದಾರೆ. ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಇಫ್ತಾರ್ ಕೂಟದಲ್ಲಿ ಕನ್ನಡಿಗರು,ಕನ್ನಡೇತರ ಭಾಂದವರು, ವಿವಿಧ ಕನ್ನಡ ಪರ ಸಂಘಟನೆಗಳ ಪ್ರತಿನಿಧಿಗಳು, ಸದಸ್ಯರು ಭಾಗವಹಿಸಲಿದ್ದಾರೆ. ಅಲ್ಲದೆ ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳುಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಸ್ಲಾಮೀ ಪ್ರಭಾಶನಗಳು, ದೀನೀ ರಸಪ್ರಶ್ನೆಗಳು, ಮಕ್ಕಳಿಗೆ ಕಿರಾತ್ ಹಾಗೂ ಭಾಷಣ ಸ್ಪರ್ಧೆಗಳು ನಡೆಯಲಿದೆ.
ಬಿಸಿಎಫ್ ಸ್ಕಾಲರ್ಷಿಪ್ ಬಗ್ಗೆ ಮಾಹಿತಿ ಇನ್ನಿತರ ಕಾರ್ಯಕ್ರಮಗಳು ಏರ್ಪಡಿಸಲಾಗುವುದು ಅಲ್ಲದೆ ಮಹಿಳೆಯರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವುದಾಗಿ ಅವರು ತಿಳಿಸಿದರು.