ಏಳು ಒಪ್ಪಂದಗಳಿಗೆ ಭಾರತ-ಕತರ್ ಸಹಿ
ದೋಹಾ, ಜೂ.5: ಭಾರತ ಹಾಗೂ ಕತರ್ ಇಂದು 7 ಒಪ್ಪಂದಗಳಿಗೆ ಸಹಿ ಹಾಕಿವೆ. ಹಣ ಚೆಲುವೆ ಹಾಗೂ ಭಯೋತ್ಪಾದಕರಿಗೆ ನಿಧಿಪೂರೈಕೆ ತಡೆಯಲು ಆರ್ಥಿಕ ಗೂಢಚರ್ಯೆ ಹಾಗೂ ಅನಿಲ ಸಮೃದ್ಧ ಗಲ್ಫ್ ರಾಷ್ಟ್ರದಿಂದ ಮೂಲ ಸೌಕರ್ಯ ವಲಯದಲ್ಲಿ ಹೂಡಿಕೆಯನ್ನು ಉತ್ತೇಜುಸುವ ಒಪ್ಪಂದಗಳೂ ಅವುಗಳಲ್ಲಿ ಸೇರಿವೆ.
ಕೌಶಲಾಭವೃದ್ಧಿ, ಶಿಕ್ಷಣ, ಆರೋಗ್ಯ ಪ್ರವಾಸೋದ್ಯಮ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡವೆ ಸಹಕಾರ ಮತ್ತು ಹೂಡಿಕೆ ಒಪ್ಪಂದಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಮಿರ್ ಶೇರ್ಖ ತಮಿಂ ಬಿನ್ ಹಮದ್ ಅಲ್ ಥಾನಿಯವರ ಸಮಕ್ಷ ಭಾರತ ಹಾಗೂ ಕತರ್‌ನ ಅಧಿಕಾರಿಗಳು ಸಹಿ ಹಾಕಿರುವ ಇತರ ಒಪ್ಪಂದಗಳಾಗಿವೆ.
ಮೋದಿ ಹಾಗೂ ಎಮಿರ್ ಶೇಖ್ ನಡುವೆ ಬಹುವಲಯ ಭಾಗಿದಾರಿಕೆ ಹಾಗೂ ಭಾರತ-ಕತರ್ ಬಾಂಧವ್ಯ ವೃದ್ಧಿಯ ಕುರಿತು ಅಧಿಕೃತ ಮಾತುಕತೆ ನಡೆಯಿತು. ಆ ಬಳಿಕ ಪ್ರಧಾನಿಯ ಭೇಟಿಯ ಎರಡನೆ ದಿನ ಒಪ್ಪಂದಗಳು ಹಾಗೂ ತಿಳುವಳಿಕೆ ಪತ್ರಗಳಿಗೆ ಸಹಿ ಹಾಕಲಾಯಿತು.
ಭಾರತದ ಆರ್ಥಿಕ ಗೂಡಚರ್ಯೆ ಘಟಕ ಹಾಗೂ ಕತರ್‌ನ ಆರ್ಥಿಕ ಮಾಹಿತಿ ಘಟಕಗಳು ಸಹಿ ಹಾಕಿರುವ ತಿಳುವಳಿಕೆ ಪತ್ರವೊಂದು ಕತರ್‌ನಿಂದ ಭಾರತಕ್ಕೆ ಹರಿದು ಬರುವ ಹಣ ಹಾಗೂ ಹೂಡಿಕೆಗಳನ್ನು ಹತ್ತೆ ಹಚ್ಚಲು ನೆರವಾಗಲಿದೆ. ಅದು, ಹಣ ಚೆಲುವೆ, ಭಯೋತ್ಪಾದಕರಿಗೆ ಹಣ ಪೂರೈಕೆ ಹಾಗೂ ಇತರ ಆರ್ಥಿಕ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.