×
Ad

ದಮ್ಮಾಮ್: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಕೇಂದ್ರ ಸಮಿತಿಯ ಮಹಾಸಭೆ

Update: 2016-06-05 23:21 IST

ದಮ್ಮಾಮ್, ಜೂ. 5: ಸಮುದಾಯ ಅಭಿವೃದ್ಧಿಯಲ್ಲಿ ಸಂಘಸಂಸ್ಥೆಗಳಿಗೆ ಮಹತ್ತರವಾದ ಪಾತ್ರವಿದ್ದು, ಅದರಲ್ಲಿ ಡಿಕೆಎಸ್ಸಿ ಮುಂಚೂಣಿಯಲ್ಲಿದೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ರಂಗಗಳಲ್ಲಿ ಅದು ಸಮಾಜಕ್ಕೆ ಅರ್ಪಿಸಿದ ಸೇವೆ ಮಹತ್ತರವಾದುದು. ಲೋಕದ ನಾನಾ ಕಡೆ ಇದರ ಸೇವೆಯ ಫಲಗಳು ಎದ್ದು ಕಾಣುತ್ತಿದ್ದು, ಇದೆಲ್ಲದರ ಹಿಂದೆ ನಿಸ್ವಾರ್ಥ ಸದಸ್ಯರ ಪರಿಶ್ರಮವಿದೆ. ಇದರ ಪ್ರತಿಫಲವು ನಮಗೆ ಕಟ್ಟಿಟ್ಟ ಬುತ್ತಿಯಾಗಿದ್ದು, ಕೊಂಬೋಲ್ ಸಾದಾತ್‌ಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆಗೆ ಬೇಕಾಗಿ ನೀವೆಲ್ಲಾ ಒಗ್ಗಟ್ಟಿನಿಂದ ಸಹಕರಿಸಿರಿ ಎಂದು ಡಿಕೆಎಸ್ಸಿ ಕೇಂದ್ರ ಸಮಿತಿ ಅಧ್ಯಕ್ಷ ಅಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಹೇಳಿದರು.

ಅವರು ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಇತ್ತೀಚೆಗೆ ನಡೆದ ಡಿಕೆಎಸ್ಸಿ ಕೇಂದ್ರ ಸಮಿತಿಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಭೆಯನ್ನು ಮೂಳೂರು ಮರ್ಕಝ್ ತಅ್ಲೀಮಿಲ್ ಇಹ್ಸಾನಿನ ಮ್ಯಾನೇಜರ್ ಮುಸ್ತಫಾ ಸಅದಿ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಪೂರ್ಣ ವಿವರಗಳನ್ನು ಸಭೆಯ ಮುಂದಿಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಲ್ ಇಹ್ಸಾನ್ ಶರೀಅತ್ ಕಾಲೇಜಿನ ಪ್ರಾಂಶುಪಾಲ, ಉಡುಪಿ-ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಬೇಕಲ್ ಉಸ್ತಾದ್‌ರು ಸುನ್ನತ್ತ್ ಜಮಾಅತ್ತ್ ಏನೆಂದು ಎಲ್ಲರೂ ಕಲಿಯಬೇಕೆಂದೂ, ಸುನ್ನಿಯೇತರರು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ನೀಡುವಷ್ಟು ನಾವು ಸಮರ್ಥರಾಗಿರಬೇಕೆಂದು ಹೇಳುತ್ತಾ ಈ ನಿಟ್ಟಿನಲ್ಲಿ ಉತ್ತಮ ಸಾಧನೆಗೈಯುತ್ತಿರುವ ಅಲ್-ಇಹ್ಸಾನ್ ಶರೀಅತ್ ಕಾಲೇಜು ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿ, ಇದರ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕು ಎಂದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಅರೆಮೆಕ್ಸ್ ಮಾತನಾಡಿ, ಸಂಸ್ಥೆಯ ಏಳಿಗೆ ಮತ್ತು ಅಭಿವೃದ್ಧಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಸಮಿತಿಯ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೈನ್ ಗೂಡಿನಬಳಿ, ಲೆಕ್ಕಪತ್ರವನ್ನು ಕೋಶಾಧಿಕಾರಿ ಮುಹಮ್ಮದ್ ಹುಸೈನ್ ಮೂಡುತೋಟ, ಮರ್ಕಝ್ ವರದಿಯನ್ನು ಕಾರ್ಯದರ್ಶಿ ಇಸ್ಮಾಯೀಲ್ ಶಾಫಿ ರಿಯಾದ್ ವಲಯ, ಲೆಕ್ಕಪತ್ರವನ್ನು ಜೊತೆ ಕಾರ್ಯದರ್ಶಿ ಇಸ್ಮಾಯೀಲ್ ಮಕ್ಕ ವಲಯ ಹಾಗೂ ಡೆವಲಪ್‌ಮೆಂಟ್ ಸಮಿತಿಯ ವರದಿ ಮತ್ತು ಲೆಕ್ಕಪತ್ರವನ್ನು ದಾವೂದ್ ಕಜೆಮಾರ್ ಮಂಡಿಸಿದರು. ಇಕ್ಬಾಲ್ ಮಲ್ಲೂರು ಕೇಂದ್ರ ಸಮಿತಿಗೆ ಬಂದ ಪತ್ರವನ್ನು ವಾಚಿಸಿದರು. ಲೆಕ್ಕ ಪರಿಶೋಧಕ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ಲೆಕ್ಕಪತ್ರದ ವಿವರಣೆ ನೀಡಿದರು. 

ಸಭೆಯಲ್ಲಿ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ಣ, ಕರ್ನಿರೆ ಕನ್ನಂಗಾರ್ ಜಮಾಅತ್ ಅಧ್ಯಕ್ಷ ಹಾಗೂ ಡಿಕೆಎಸ್ಸಿಯ 20ನೆ ವಾರ್ಷಿಕ ಸ್ವಾಗತ ಸಮಿತಿಯ ಕೋಶಾಧಿಕಾರಿ ಎಚ್.ಬಿ. ಮುಹಮ್ಮದ್‌ರನ್ನು ಸನ್ಮಾನಿಸಲಾಯಿತು.

ಚುನಾವಣಾಧಿಕಾರಿ ಅಸೈಯದ್ ಮುಹಮ್ಮದ್ ತಂಙಳ್ ಜಿದ್ದಾರ ನೇತೃತ್ವದಲ್ಲಿ 2016-18ನೆ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್, ಕಾರ್ಯಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಅರೆಮೆಕ್ಸ್ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಇಸ್ಮಾಯೀಲ್ ಕಿನ್ಯ, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಸುಳ್ಯ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಅಜೀಝ್ ಆತೂರುರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಹಾಜಿ ಹಾತಿಂ ಕೂಳೂರು, ಹಾಜಿ ಝೈನುದ್ದೀನ್ ಪುತ್ತೂರು, ಬಶೀರ್ ಕೈಕಂಬ, ಮುಹಮ್ಮದ್ ಸಿತಾರ್, ಸೈಯದ್ ಮುಹಮ್ಮದ್ ತಂಙಳ್, ಕಾರ್ಯದರ್ಶಿಗಳಾಗಿ ಮುಹಮ್ಮದ್ ಹಸನ್ ಮೂಡುತೋಟ, ಅಬೂಬಕರ್ ಬರ್ವ, ಇಸ್ಮಾಯೀಲ್ ಮೂಡಿಗೆರೆ, ದಾವೂದ್ ಕಜೆಮಾರ್, ಸಂಚಾಲಕರಾಗಿ ಹುಸೈನ್ ಹಾಜಿ ಕಿನ್ಯ, ಸುಲೈಮಾನ್ ಸೂರಿಂಜೆ, ಮೊಯ್ದೀನ್ ಹಾಜಿ ಕಕ್ಕಿಂಜೆ, ಶೇಖ್ ಬಳ್ಕುಂಜೆ, ರಫೀಕ್ ಸೂರಿಂಜೆ, ಶರೀಫ್ ಮರವೂರು, ಇಬ್ರಾಹೀಂ ಕಣ್ಣಂಗಾರು, ಮುಹಮ್ಮದ್ ಸೀದಿ ಹಾಜಿ, ಇಸ್ಮಾಯೀಲ್ ಕಣ್ಣಂಗಾರು, ಹಾತಿಂ ಕಂಚಿ, ಮೂಸಬ್ಬ ಒಮಾನ್, ಲೆಕ್ಕಪರಿಶೋಧಕರಾಗಿ ಅನ್ವರ್ ಹುಸೈನ್ ಗೂಡಿನಬಳಿ, ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ, ಇಸ್ಮಾಯೀಲ್ ಅರೆಮೆಕ್ಸ್, ಅಬ್ದುಲ್ ಕರೀಂ ಮೂಳೂರು, ಸಲಹೆಗಾರರಾಗಿ ಝಕರಿಯಾ ಮುಝೈನ್, ಉಮ್ಮರ್ ಹಾಜಿ ಪುತ್ತೂರು, ಯೂಸುಫ್ ಸಖಾಫಿ ಬೈತಾರ್ ಹಾಗೂ ಕಾರ್ಯಕಾರಿ ಸದಸ್ಯರನ್ನು ನೇಮಿಸಲಾಯಿತು.

ಸಭೆಯಲ್ಲಿ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಹುಸೈನ್ ಕಿನ್ಯ, ಯುಎಇ ರಾಷ್ಟ್ರೀಯ ಸಮಿತಿಯ ಸಲಹೆಗಾರ ಹಾಜಿ ಮೊಯ್ದೀನ್ ಕುಟಟಿ ಕಕ್ಕಿಂಜೆ, ಬಹ್ರ್ರೈೆನ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಳ್ಯ, ಬಹ್ರೈನ್ ರಾಷ್ಟ್ರೀಯ ಸಮಿತಿಯ ಸಲಹೆಗಾರ ಮುಹಮ್ಮದ್ ಸೀದಿ ಹಾಜಿ, ಮಕ್ಕ, ದಮ್ಮಾಮ್, ರಿಯಾದ್ ವಲಯಗಳ ಮುಖ್ಯಸ್ಥರು ಹಾಜರಿದ್ದರು.

ಮಾಸ್ಟರ್ ಶಿಹಾಬುದ್ದೀನ್ ಕಿರಾಅತ್ ಪಠಿಸಿದರು. ಇಸ್ಮಾಯೀಲ್ ಕಿನ್ಯ ಸ್ವಾಗತಿಸಿ, ವಂದಿಸಿದರು. ಝೈನುದ್ದೀನ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News