ಅಲ್ ಜುಬೈಲ್:ಎಂಜಿಎ ವತಿಯಿಂದ ಇಫ್ತಾರ್ ಕೂಟ
ಅಲ್ ಜುಬೈಲ್: ಮಲನಾಡ್ ಗಲ್ಫ್ ಅಸೋಸಿಯೇಶನ್ (ಎಂ ಜಿ ಎ) ಇದರ ಜುಬೈಲ್ ಘಟಕದ ವತಿಯಿಂದ ಇಫ್ತಾರ್ ಕೂಟ ವನ್ನು ಇತ್ತೀಚೆಗೆ ನಡೆಯಿತು. ಸುಮಾರು 100ಕ್ಕೂ ಹೆಚ್ಚು ವ್ರತದಾರಿಗಳು ಭಾಗವಹಸಿದರು. ಇಫ್ತಾರ್ ಕೂಟದ ಮುನ್ನ ಸಭಾ ಕಾರ್ಯಕ್ರಮ ನಡೆಯಿತು. ಅಹ್ಮದ್ ಶಮೀಮ್ ಎಲ್ಲರನ್ನು ಸ್ವಾಗತಿಸಿ, ಎಂ.ಜಿ.ಎ ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮವನ್ನು ಅಬಿದ್ ಉಸ್ತಾದ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮುಜೈನ್ ಗ್ರೂಪ್ ನ ಸಿ ಇ ಓ ಝಕರಿಯ ಜೋಕಟ್ಟೆ , ಅಲ್ ಖಾದಿಸ ವಿದ್ಯಾ ಸಂಸ್ಥೆ ಕಾವಲ್ ಕಟ್ಟೆ ಇದರ ಪ್ರಿನ್ಸಿಪಾಲ್ ಸುಫ್ಯಾನ್ ಸಖಾಫಿ ,ಇಸ್ಮಾಯಿಲ್ ರಿಯಲ್ ಟೆಕ್ ,ಫಾರೂಕ್ ,ಕೆ ಸಿ ಎಫ್ INC ನಾಯಕ ಕಮರುದೀನ್ ಗೂಡಿನಬಳಿ ,ಮುಹಮ್ಮದ್ ಫಾರೂಕ್ ಅರಬ್ ಎನರ್ಜಿ, ಸಲೀಂ ಗಲ್ಫ್ ಪೈಪ್, ಎಂಜಿಎ ದಮಾಮ್ ಘಟಕದ ಅಧ್ಯಕ್ಷ ಬಷೀರ್ ಭಾಗವಹಿಸಿ ಸಂಘಟನೆಯ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿದರು. ಮುಹಮ್ಮದ್ ರಾಫಿ ವಂದಿಸಿದರು.
ಮಲೆನಾಡಿನ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಹುಟ್ಟಿಕೊಂಡ ಸಂಘಟನೆಯಾಗಿದ್ದು, ರಮಝಾನ್ ಪ್ರಯುಕ್ತ ಮಲನಾಡ್ ಜಿಲ್ಲೆಗಳಾದ ಮಡಿಕೇರಿ, ಹಾಸನ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕ ಮಗಳೂರು ಜಿಲ್ಲೆಯ ಬಡ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸಲಾಯಿತು.