ಸೌದಿಯಲ್ಲಿ ಕಳ್ಳನೋಟು: ಕೇರಳದ ಇಬ್ಬರ ಬಂಧನ
ಮಕ್ಕಾ,ಜೂನ್ 12: ಮಕ್ಕಾದಲ್ಲಿ ಒಂದು ಲಕ್ಷಕ್ಕೂ ಅಧಿಕ ಅಮೆರಿಕನ್ ಡಾಲರ್ ಕಳ್ಳನೋಟಿನೊಂದಿಗೆ ಬಂಧಿಸಲ್ಪಟ್ಟವರು ಕೇರಳದ ಮಲಪ್ಪುರಂನವರು ಎಂದು ವರದಿಯಾಗಿದೆ. ಮಲಪ್ಪುರಂ ಕೂಮಣ್ಣ, ಕಿಯಿಶ್ಶೇರಿಯ ಇವರು ಜಿದ್ದಾದಲ್ಲಿ ವಾಸಿಸುತ್ತಿದ್ದರು. ಮಕ್ಕಾದಲ್ಲಿರುವ ಕಳ್ಳನೋಟು ವ್ಯವಹಾರಸ್ಥನಿಗೆ ನೋಟುಗಳನ್ನು ಹಸ್ತಾಂತರಿಸುವಾಗ ಗುಪ್ತಚರ ದಳ ಪೊಲೀಸರು ರೆಡ್‌ಹ್ಯಾಂಡ್‌ಆಗಿ ಸೆರೆಹಿಡಿದಿದ್ದರು.
ಬಂಧಿಸಲಾದ ಬಳಿಕ ಇವರ ವಾಸಸ್ಥಳಕ್ಕೆ ದಾಳಿ ನಡೆಸಿಲಾಗಿದ್ದು ಕಳ್ಳನೋಟಿನ ರಾಶಿಯನ್ನು ಪೊಲೀಸರು ಪತ್ತೆಹಚ್ಚಿದ್ದರು. ಕಳ್ಳನೋಟು ಪ್ರಕರಣದಲ್ಲಿ ಇಬ್ಬರು ಭಾರತೀಯರ ಬಂಧನವಾಗಿದೆಎಂದು ಗಲ್ಫ್‌ಮಾಧ್ಯಮಂ ವರದಿ ನಿನ್ನೆ ವರದಿಮಾಡಿತ್ತು. ಕಸ್ಟಡಿಯಲ್ಲಾಗಿರುವವರ ಕುರಿತು ಯಾವುದೇ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಮನೆಯವರು ಸೌದಿಯ ಗೆಳೆಯರು ಮತ್ತು ಇತರರನ್ನು ಸಂಪರ್ಕಿಸಿದ್ದರು. ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಜಿದ್ದಾದ ಜೈಲುಗಳಲ್ಲಿ ಹುಡುಕಿದರು ಇವರಿಬ್ಬರು ಅಲ್ಲಿರಲಿಲ್ಲ. ನಂತರ ಗುಪ್ತಚರ ದಳದ ಕಸ್ಟಡಿಯಲ್ಲಿರುವುದು ಗೊತ್ತಾಗಿತ್ತು. ಜಿದ್ದಾದಲ್ಲಿರುವ ಅಪ್ಘಾನ್ ಏಜೆಂಟ್ ಇವರಿಗೆ ನಕಲಿ ಡಾಲರ್‌ಗಳನ್ನು ನೀಡಿದ್ದ. ಭಾರೀ ಪ್ರಮಾಣದಲ್ಲಿ ಕಳ್ಳನೋಟುಗಳನ್ನು ಸೌದಿ ಮಾರುಕಟ್ಟೆಗೆ ಚಲಾವಣೆಗೊಳಿಸುವುದು ಇವರ ತಂತ್ರವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.