ದುಬೈ: ಜೂ.16ರಂದು ದುಬೈ ಇಂಟರ್‌ನ್ಯಾಷನಲ್ ಹೋಲಿ ಕುರ್‌ಆನ್ ಅವಾರ್ಡ್ ಕಾರ್ಯಕ್ರಮ
ದುಬೈ, ಜೂ.14: ದುಬೈ ಇಂಟರ್ ನ್ಯಾಷನಲ್ ಹೋಲಿ ಕುರ್‌ಆನ್ ಅವಾರ್ಡ್ ಕಾರ್ಯಕ್ರಮ ಜೂ. 16ರಂದು ರಾತ್ರಿ 10 ಗಂಟೆಗೆ ಕಿಸೈಸ್ ಮದೀನಾ ಮಾಲ್ ಹಿಂಬದಿಯಲ್ಲಿರುವ ಇಂಡಿಯನ್ ಅಕಾಡೆಮಿ ಸ್ಕೂಲ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ದುಬೈ ಸರಕಾರದ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ, ಸಮಸ್ತ ಕೇಂದ್ರ ಮುಶಾವರ, ದಾರುನ್ನೂರ್ ಎಜುಕೇಷನ್ ಸೆಂಟರ್ನ ಶಿಲ್ಪಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಭಾಗವಹಿಸಲಿದ್ದಾರೆ. ಜೂನಿಯರ್ ಮುತ್ತೇಡಮ್ ಎಂದೇ ಪ್ರಖ್ಯಾತಿ ಹೊಂದಿರುವ ಪ್ರಭಾಷಣಗಾರ ಉಸ್ತಾದ್ ಶಹಜಾನ್ ರಹ್ಮಾನಿ ಕಂಬ್ಲಕ್ಕಾಡ್ ಪ್ರಭಾಷಣ ಮಾಡಲಿದ್ದಾರೆ.
ದುಬೈಯ ವಿವಿಧ ಸ್ಥಳಗಳಿಂದ ವಾಹನದ ವ್ಯವಸ್ಥೆ ಮಾಡಲಾಗಿದ್ದು, ದುಬೈ ಮೆಟ್ರೋ ಸ್ಟೇಷನ್ನಿಂದ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಏರ್ಪಡಿಸಲಾಗಿದೆ ಎಂದು ದುಬೈ ಸುನ್ನಿ ಸೆಂಟರ್ ಪ್ರಕಟನೆಯಲ್ಲಿ ತಿಳಿಸಿದೆ.
ಜೂ.16ರಂದು ಇಫ್ತಾರ್ಗೆ ಮುಂಚಿತವಾಗಿ ಸಂಜೆ 5ಗಂಟೆಗೆ ಮಜ್ಲಿಸುನ್ನೂರ್ ಕಾರ್ಯಕ್ರಮ ನಡೆಯಲಿದೆ. ಇಫ್ತಾರ್ನ ಬಳಿಕ ಕ್ಲಾಸ್ ನಡೆಯಲಿದ್ದು ಅದರ ಬಳಿಕ ಇಶಾ ನಮಾಝ್ ಮತ್ತು ತರಾವೀಹ್ಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.: 023468, 023477ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.