×
Ad

ಸೌದಿ: ಸುಡುಬಿಸಿಲಲ್ಲಿ ಕೆಲಸಕ್ಕೆ ನಿಷೇಧ ಜಾರಿ

Update: 2016-06-16 23:05 IST

ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಸೌದಿಯಲ್ಲಿ ಕಾರ್ಮಿಕರು ಹೊಲಗಳಲ್ಲಿ ಮಧ್ಯಾಹ್ನ 12ರಿಂದ ಸಂಜೆ 3 ಗಂಟೆಯವರೆಗೆ ಕೆಲಸ ಮಾಡುವುದನ್ನು ನಿಷೇಧಿಸಿದೆ. ಸೆಪ್ಟೆಂಬರ್ 15ರವರೆಗೆ ಈ ನಿಷೇಧ ಕಾರ್ಯರೂಪಕ್ಕೆ ಬರಲಿದೆ ಎಂದು ಎಂಎಲ್‌ಎಸ್‌ಡಿಯ ಕೆಲಸ ಪರಿಸರದ ತಪಾಸಣೆ ಮತ್ತು ಅಭಿವೃದ್ಧಿಯ ಉಪ ಸಚಿವ ಡಾ ಫಾಹಿದ್ ಅಲೌಡ್ ಹೇಳಿದ್ದಾರೆ. ಖಾಸಗಿ ಕ್ಷೇತ್ರಗಳಲಿ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷೆಯನ್ನು ರಕ್ಷಿಸುವ ಪ್ರಯತ್ನವಾಗಿ ಮತ್ತು ಕಾರ್ಮಿಕರಿಗೆ ಸುರಕ್ಷಿತ ಆರೋಗ್ಯಕರ ಕೆಲಸದ ಪರಿಸರ ಒದಗಿಸಲು ಸಚಿವಾಲಯವು ಈ ನಿರ್ಧಾರಕ್ಕೆ ಬಮದಿದೆ. ದಿನಾಂಕ 15/7/1435 ರಂದು ಸಚಿವಾಲಯದ ನಿರ್ಧಾರ No. 3337 ಕಡೆಗೆ ಬೊಟ್ಟು ಮಾಡಿರುವ ಸಚಿವಾಲಯ ಸೂರ್ಯನ ಪ್ರಖರ ಬೆಳಕಿನಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲು ಆದೇಶ ಹೊರಡಿಸಿದೆ. ಹೊರಾಂಗಣ ಕಾರ್ಮಿಕರ ಔದ್ಯೋಗಿಕ ಸುರಕ್ಷೆ ಮತ್ತು ಆರೋಗ್ಯದ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಅವರು ಕೆಲಸ ಮಾಡುವುದನ್ನು ತಡೆಯುವ ಪ್ರಯತ್ನ ಇದಾಗಿದೆ ಎಂದು ಅಧಿಕೃತ ಪತ್ರ ತಿಳಿಸಿದೆ. ಈ ನಿರ್ಧಾರವು ಉದ್ಯೋಗಿಗಳು ನೇರವಾಗಿ ಸೂರ್ಯನ ಬೆಳಕಿನಲ್ಲಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಕೆಲಸ ಮಾಡುವುದನ್ನು ಜೂನ್ 15ರಿಂದ ಸೆಪ್ಟೆಂಬರ್ 15ರವರೆಗೆ ನಿಷೇಧಿಸಿದೆ. ಪ್ರತೀ ವರ್ಷವೂ ಈ ನಿಷೇಧ ಅನ್ವಯವಾಗಲಿದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ. ಆದರೆ ಈ ನಿರ್ಧಾರವು ತೈಲ ಮತ್ತು ಅನಿಲ ಕಂಪನಿಗಳಿಗೆ ಅನ್ವಯಿಸುವುದಿಲ್ಲ. ಅಲ್ಲಿ ನಿರ್ವಹಣೆ ಕೆಲಸವು ತುರ್ತಾಗಿ ಮಾಡುವ ಅಗತ್ಯವಿರುವ ಕಾರಣ ಸೂರ್ಯನಿಂದ ಕಾರ್ಮಿಕರನ್ನು ರಕ್ಷಿಸಲು ಉದ್ಯೋಗ ಸಂಸ್ಥೆಗಳು ಸೂಕ್ತ ಸೌಲಭ್ಯ ಒದಗಿಸಬೇಕು. ಇತರ ಎಲ್ಲಾ ಕಂಪನಿಗಳೂ ಈ ಮಧ್ಯಾಹ್ನದ ವಿಶ್ರಾಮತಿಯ ನಿಯಮವನ್ನು ಪಾಲಿಸಬೇಕು ಎಂದು ಸಚಿವಾಲಯ ಹಏಳಿದೆ. ಇದಲ್ಲದೆ, ಇತರ ರಕ್ಷಣಾ ಕ್ರಮಗಳಾದ ಗಾಯಗಳು ಮತ್ತು ಅಪಘಾತಗಳನ್ನು ಕಡಿಮೆ ಮಾಡುವುದು ಹಾಗೂ ಇತರ ಸುಧಾರಣಾ ಕ್ರಮಗಳನ್ನು ಉತ್ಪಾದನಾ ವಲಯದಲ್ಲಿ ಕೈಗೊಳ್ಳುವಂತೆಯೂ ಸಚಿವಾಲಯ ಆದೇಶಿಸಿದೆ. ನಗರದಲ್ಲಿ ಉಷ್ಣತೆ ಏರುಪೇರಾಗುವ ಕೆಲವು ಭಾಗಗಳಲ್ಲಿ ಈ ನಿಯಮಗಳನ್ನು ಹೊರತುಪಡಿಸಬಹುದು. ಈ ನಡುವೆ ಕೆಲವು ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉಷ್ಣತೆ ಕಡಿಮೆಯಾಗಿರುವ ಕಾರಣ ನಿಷೇಧದ ಅಗತ್ಯವಿರುವುದಿಲ್ಲ ಎನ್ನುವುದನ್ನೂ ಪ್ರಕಟಣೆ ಹೇಳಿದೆ. ಸೌದಿಯಾದ್ಯಂತ ಸರ್ಕಾರದ ಅಂಗ ಸಂಸ್ಥೆಗಳು ಈ ನಿಯಮವನ್ನು ಅನುಷ್ಠಾನಕ್ಕೆ ತರಬೇಕಿದೆ. ಪ್ರತೀ ಪ್ರಾಂತದ ವಾತಾವರಣದ ಸ್ಥಿತಿಗತಿ ಮತ್ತು ಬಿಸಿಗಾಳಿಯ ಪ್ರಮಾಣವನ್ನು ನೋಡಿ ಈ ನಿಯಮವನ್ನು ಜಾರಿಗೆ ತರಬೇಕಿದೆ. ಸೌದಿಯ ನಾಗರಿಕರು ಮತ್ತು ನಿವಾಸಿಗಳು ಈ ನಿಟ್ಟಿನಲ್ಲಿ ಗ್ರಾಹಕ ಸೇವೆ 19911 ಅಥವಾ  http://rasd.ma3an.gov.sa ವೆಬ್ ತಾಣದಲ್ಲಿ ತಮ್ಮ ದೂರುಗಳನ್ನು ಸಲ್ಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News