×
Ad

ಸೌದಿ ಅರೇಬಿಯ: 225 ನೇಮಕಾತಿ ಸಂಸ್ಥೆಗಳಿಗೆ ಅನುಮತಿ

Update: 2016-06-17 12:05 IST

ರಿಯಾದ್, ಜೂನ್ 17: ದೇಶದ ವಿವಿಧ ಭಾಗಗಳಲ್ಲಿ ಕಾರ್ಮಿಕ ಸಚಿವಾಲಯ 225 ನೇಮಕಾತಿ ಸಂಸ್ಥೆಗಳಿಗೆ ಅನುಮತಿ ನೀಡಿದೆ. ಮನೆಕೆಲಸಗಳಿಗೆ ವಿದೇಶಿ ಕೆಲಸದಾಳುಗಳು ಅಗತ್ಯವಿರುವವರು ಈ ಸಂಸ್ಥೆಗಳನ್ನು ಸಂಪರ್ಕಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ ಇತರ 129 ಏಜೆನ್ಸಿಗಳಿಗೆ ಪ್ರಾಥಮಿಕ ಸದಸ್ಯತ್ವವನ್ನು ನೀಡಲಾಗಿದೆ. ಅಂಗೀಕೃತ ಏಜೆನ್ಸಿಗಳ ಮೂಲಕ ಕಾರ್ಮಿಕರ ನೇಮಕಾತಿ ನಡೆಸುವುದರಿಂದ ಖರ್ಚು ಕಡಿಮೆ ಹಾಗೂ ಇತರ ಕಾನೂನು ಕ್ರಮಗಳಿಲ್ಲದೆ ನೇಮಕಾತಿ  ಮಾಡಲು ಸಾಧ್ಯ ಎಂದು ಕಾರ್ಮಿಕ ಸಚಿವಾಲಯದ ಅಧಿಕೃತ ವಕ್ತಾರ ಖಾಲಿದ್ ಅಬಲ್ ಖೈಲ್ ಹೇಳಿದ್ದಾರೆ. ಹೊಸ ಏಜೆನ್ಸಿಗಳು ಪ್ರವೇಶಿಸುವುದರೊಂದಿಗೆ ಈ ಕ್ಷೇತ್ರವನ್ನು ಅಪರಾಧ ಮುಕ್ತವಾಗಿರಿಸಲು ಸಹಾಯಕವಾಗಲಿದೆ. ಕಾನೂನು ಪ್ರಕಾರವೇ ಕೆಲಸಗಾರರನ್ನು ಸೌದಿಗೆ ಕರೆತರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೇಮಕಾತಿ ಸಂಸ್ಥೆಗೆ ಅನುಮತಿ ಬೇಕಿದ್ದವರು www.ror.mol.gov.sa gate ಎಂಬ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಮೂವತ್ತು ದಿವಸದೊಳಗೆ ಪ್ರಾಥಮಿಕ ಅಂಗೀಕಾರವನ್ನು ನೀಡಲಾಗುವುದು ಎಂದು ಖಾಲಿದ್ ಅಬಲ್ ಖೈಲ್ ಹೇಳಿದ್ದಾರೆ. ಹೆಚ್ಚಿನ ಮಾಹಿತಿಯನ್ನು www.musaned.gov.sa  ಎಂಬ ವೆಬ್‌ಸೈಟ್‌ನಿಂದ ಪಡೆಯಬಹುದಾಗಿದೆ. ಕಾರ್ಮಿಕರನ್ನು ಕರೆತರಲು ಬೇರೆ ದಾರಿಯನ್ನು ಉಪಯೋಗಿಸಬಾರದು, ಒಂದು ವೇಳೆ ಅಂತಹ ದಾರಿಯನ್ನು ಬಳಸಿದರೆ ಅಂತಹವರ ಕುರಿತು ಉಚಿತ ಕರೆ ಸಂಖ್ಯೆ ಆದ 19911 ಮೂಲಕ ಕಾರ್ಮಿಕ ಸಚಿವಾಲಯದ ವಿವಿಧ ಕಚೇರಿಗಳಿಗೆ ತಿಳಿಸಬೇಕೆಂದು ಖಾಲಿದ್ ಅಬಲ್ ಖೈಲ್ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News