×
Ad

ರಿಯಾದ್: ಕೆಸಿಎಫ್‌ನಿಂದ ಬೃಹತ್ ಇಫ್ತಾರ್ ಕೂಟ

Update: 2016-06-19 20:39 IST

ರಿಯಾದ್, ಜೂ.19: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನಲ್ ಸಮಿತಿಯು ವತಿಯಿಂದ ಬೃಹತ್ ಇಫ್ತಾರ್ ಕೂಟವು ಇತ್ತೀಚೆಗೆ ಇಲ್ಲಿನ ನೋಫಾ ಇಸ್ತಿರಾಹದಲ್ಲಿ ನಡೆಯಿತು.

ಕೆಸಿಎಫ್ ರಿಯಾದ್ ಝೋನಲ್ ಅಧ್ಯಕ್ಷ ನಝೀರ್ ಕಾಶಿಪಟ್ಣ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್, ಕೆಸಿಎಫ್ನ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಜಾರಿಗೆ ತಂದಿರುವ ಶೈಕ್ಷಣಿಕ ಹಾಗೂ ಧರ್ಮ ಜಾಗೃತಿಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಈ ಸಂದರ್ಭ ಉತ್ತರ ಕರ್ನಾಟಕದ ಮುಸ್ಲಿಮರು ಎದುರಿಸುತ್ತಿರುವ ಆರ್ಥಿಕ ದುಸ್ಥಿತಿ ಹಾಗೂ ಅಲ್ಲಿನ ಶೈಕ್ಷಣಿಕ ಮಟ್ಟವನ್ನು ಪ್ರತಿಬಿಂಬಿಸುವ ಸಾಕ್ಷ್ಯ ಚಿತ್ರವನ್ನು ಈ ವೇಳೆ ಪ್ರದರ್ಶಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ದಮ್ಮಾಮ್ ಝೋನಲ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ, ಮುಖಂಡ ಆದಂ ಮಂಜನಾಡಿ ಮತ್ತಿತರರು ಪಾಲ್ಗೊಂಡಿದ್ದರು.

ಹಮೀದ್ ಸುಳ್ಯ, ಅಬೂಬಕರ್ ಸಾಲೆತ್ತೂರು, ಇಸ್ಮಾಯೀಲ್ ಶಾಫಿ ವಿಟ್ಲ, ಲತೀಫ್ ಯೂನಿವರ್ಸಲ್, ಕಾರ್ಯದರ್ಶಿ ಫಾರೂಕ್ ಉಳ್ಳಾಲ್ ಸ್ವಾಗತ ಸಮಿತಿ ಕಾರ್ಯರ್ಶಿ ಸಲೀಂ ಕನ್ಯಾಡಿ, ಝಾಹಿರ್ ಉಳ್ಳಾಲ್, ಶಮೀರ್ ಜೆಪ್ಪು, ರಮೀಝ್ ಕುಳಾಯಿ, ಮುುಸ್ತಫಾ ಬಜ್ಪೆ, ಯೂಸುಫ್ ಕಳಂಜಿಬೈಲ್, ನಝೀರ್ ಪುರುಸರಂಗೋಡಿ, ನಿಝಾಂ ಸಾಗರ್, ಫವಾಝ್ ಕಾಟಿಪಳ್ಳ, ಹನೀಫ್ ಕಣ್ಣೂರ್, ನವಾಝ್ ಚಿಕ್ಕ ಮಗಳೂರು, ಯಾಸರ್ ಮೊಂಟೆಪದವು, ಹಸೈನಾರ್ ಕಾಟಿಪಳ್ಳ ಉಪಸ್ಥಿತರಿದ್ದರು.

ತರಾವೀಹ್ ನಮಾಝ್ಗೆ ಮುಬಾರಕ್ ಸಖಾಫಿ ನೇತೃತ್ವ ವಹಿಸಿದ್ದರು. ಕೆಸಿಎಫ್ ಪ್ರಾಂತೀಯ ಕೋಶಾಧಿಕಾರಿ ಹನೀಫ್ ಬೆಳ್ಳಾರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News