ಅಬುಧಾಬಿ: ಬ್ಯಾರೀಸ್ ವೆಲ್‌ಫೇರ್ ಫೋರಂ ವತಿಯಿಂದ ಇಫ್ತಾರ್ ಕೂಟ
ಅಬುಧಾಬಿ, ಜೂ.19: ಇಲ್ಲಿನ ಬ್ಯಾರೀಸ್ ವೆಲ್‌ಫೇರ್ ಫೋರಂ (ಬಿಡಬ್ಲುಎಫ್) ವತಿಯಿಂದ ಅಬುಧಾಬಿಯ ಇಂಡಿಯನ್ ಸೋಶಿಯಲ್ ಸೆಂಟರ್‌ನ ಪ್ರಧಾನ ಸಭಾಂಗಣದಲ್ಲಿ ಅನಿವಾಸಿ ಭಾರತೀಯರನ್ನೊಳಗೊಂಡ ಇಫ್ತಾರ್ ಕೂಟ ನಡೆಯಿತು. ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿ ದುಆ ನೆರವೇರಿಸಿದರು.
ಬಿಡಬ್ಲುಎಫ್‌ನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯ ವತಿಯಿಂದ ಡಿಸೆಂಬರ್3ರಂದು ಹಮ್ಮಿಕೊಂಡಿರುವ ಸಾಮೂಹಿಕ ಮದುವೆ ಕಾರ್ಯಕ್ರಮವನ್ನು ತೊಕ್ಕೊಟ್ಟಿನ ಯುನಿಟಿ ಹಾಲ್‌ನಲ್ಲಿ ನಡೆಸುವ ಬಗ್ಗೆ ಅಧಿಕೃತವಾಗಿ ತಿಳಿಸಿದರು.
ಬಿಡಬ್ಲುಎಫ್‌ನ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಕೃಷ್ಣಾಪುರ ರಮಝಾನ್ ಶುಭಾಶಯ ಕೋರಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಕಾರ್ಯಕ್ರಮದ ಮಹತ್ವದ ಬಗ್ಗೆ ವಿವರಿಸಿದರು.ಉಪಾಧ್ಯಕ್ಷ ಹಂಝ ಅಬ್ದುಲ್ ಖಾದರ್ ಇಫ್ತಾರ್ ಕೂಟದ ಶುಭಾಶಯ ಕೋರಿದರು.
ಹೈತಮ್ ಅಬ್ದುಲ್ ಹಮೀದ್ ಕಿರಾಅತ್ ಪಠಿಸಿದರು. ರಶೀದ್ ಬಿಜೈ ಅನುವಾದಿಸಿದರು.
ಇದೇ ಸಂದರ್ಭ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಸಮಾಜ ಸೇವಾ ಚಟುವಟಿಕೆ, ಬಡ ಯುವತಿಯರ ಮದುವೆಗೆ ಸಹಾಯ ನೀಡಿರುವುದು, ವಿಕಲಚೇನರಿಗೆ ಸಹಾಯವಾಗುವ ಉಪಕರಣಗಳ ವಿತರಣೆ ಸೇರಿದಂತೆ ವಿವಿಧ ಚಟುವಟಿಕೆಗಳ ಬಗ್ಗೆ ಅಬ್ದುಲ್ ಜಲೀಲ್ ಗುರುಪುರ, ಜಾಫರ್ ಸಾದಿಕ್ ಸ್ಲೈಡ್ ಶೋ ಮೂಲಕ ವಿವರಿಸಿದರು.
ಇಫ್ತಾರ್ ಕೂಟದಲ್ಲಿ ಕರಾವಳಿಯ ಸುಮಾರು 600ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಮುಹಮ್ಮದ್ ಕಲ್ಲಾಪು, ಬಶೀರ್ ಬಜ್ಪೆ, ರಶೀದ್ ವಿ.ಕೆ., ಸಿದ್ದೀಕ್ ಉಚ್ಚಿಲ್, ಹನೀಫ್ ಉಳ್ಳಾಲ್, ನವಾಝ್ ಉಚ್ಚಿಲ್, ಇಮ್ರಾನ್ ಅಹ್ಮದ್, ಅಬ್ದುಲ್ ಮಜೀದ್, ಅಬ್ದುರ್ರವೂಫ್, ಹಮೀದ್ ಗುರುಪುರ, ಮಜೀದ್ ಆತೂರು, ನಝೀರ್ ಉಬಾರ್, ಮೊಯಿನುದ್ದೀನ್ ಹಂಡೇಲ್ ಸಹಕರಿಸಿದರು. ಬಿಡಬ್ಲುಎಫ್ ಖಜಾಂಜಿ ಮುಹಮ್ಮದ್ ಸಿದ್ದೀಕ್ ಕಾಪು ವಂದಿಸಿದರು.