×
Ad

ಅಬುಧಾಬಿ: ಜಗತ್ ಪ್ರಸಿದ್ಧ ಮಸೀದಿಗಳ ಫೋಟೊ ಪ್ರದರ್ಶನ

Update: 2016-06-21 13:53 IST

ಅಬುಧಾಬಿ, ಜೂನ್ 21: ಜಗತ್ತಿನ ಪ್ರಸಿದ್ಧ ಮಸೀದಿಗಳ ಇತಿಹಾಸ ಮತ್ತು ಪ್ರಾಮುಖ್ಯತೆಗಳನ್ನು ವಿವರಿಸುವ ಛಾಯಚಿತ್ರ ಪ್ರದರ್ಶನವನ್ನು ಅಬುಧಾಬಿ ಮುಶ್ರಿಫ್ ಮಾಲ್‌ನಲ್ಲಿ ರಮಝಾನ್ ಎಕ್ಸಿಬಿಷನ್‌ನ ಪ್ರಯುಕ್ತ ಏರ್ಪಡಿಸಲಾಗಿದೆ. ಕೇರಳದ ಚೇರಮನ್ ಪೆರುಮಾಳ್ ಜುಮಾ ಮಸೀದಿ ಸಹಿತ ಜಗತ್ತಿನ ವಿವಿಧ ಭಾಗಗಳ ಮಸೀದಿಗಳ ಚಿತ್ರ ಮತ್ತು ಅವುಗಳ ವಿವರಣೆಯನ್ನು ಪ್ರದರ್ಶಿಸಲಾಗುತ್ತಿದೆ.

ಏಷ್ಯಾದ ರಾಷ್ಟ್ರಗಳ ಐದು ಮಸೀದಿಗಳು, ಯುರೋಪ್, ಆಫ್ರಿಕ ದೇಶದ ತಲಾ ಎರಡು,ಹಾಗೂ ಅಮೆರಿಕದ ಒಂದು ಮಸೀದಿ ಪ್ರದರ್ಶನದಲ್ಲಿದೆ. ಮಕ್ಕಾದ ಮಸ್ಚಿದುಲ್ ಹರಾಂ, ಮದೀನದ ಮಸ್ಚಿದುನ್ನಬವಿ,ಅಬುಧಾಬಿಯ ಶೇಖ್ ಝಾಯಿದ್ ಗ್ರಾಂಡ್ ಮೋಸ್ಕ್, ಕೇರಳದ ಚೇರಮನ್ ಪೆರುಮಾಳ್ ಜುಮಾ ಮಸೀದಿ, ಚೆನ್ನೈಯ ಡೋಂಗ್ವಾನ್ ಮೋಸ್ಕ್ ಎಂಬ ಹೆಸರಿನ ಈ ಮಸೀದಿಗಳು ಏಷ್ಯಾದ ಪ್ರಸಿದ್ಧ ಮಸೀದಿಗಳು. ಮುಸ್ಲಿಂ ಯಾತ್ರಾ ಸ್ಥಳಗಳಾಗಿ ಮಸ್ಚಿದುಲ್ ಹರಾಂ, ಮಸ್ಚಿದುನ್ನಬವಿ ಹೆಚ್ಚು ಪ್ರಸಿದ್ಧವಾಗಿವೆ. ಕೇರಳದ ಚೇರಮನ್ ಪೆರುಮಾಳ್ ಮಸೀದಿ ಕ್ರಿಶಕ 621ರಲ್ಲಿ ಕಟ್ಟಿಸಲಾದ ಮಸೀದಿಯಾಗಿದೆ. ಮೊರೊಕ್ಕೊವ, ರಷ್ಯ ಯುರೋಪ್ ಮುಂತಾದೆಡೆಯ ಜಗತ್ತಿನ ನಾನಾಭಾಗಗಳ ಮಸೀದಿಯ ಫೋಟೊ ಮತ್ತು ವಿವರಗಳು ಇಲ್ಲಿ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News